ಎ.ಎನ್. ಮೂರ್ತಿರಾವ್

Home/Birthday/ಎ.ಎನ್. ಮೂರ್ತಿರಾವ್
Loading Events
This event has passed.

೧೬-೬-೧೯೦೦ ೨೩-೮-೨೦೦೩ ಅತ್ಯುತ್ತಮ ಪ್ರಬಂಧಕಾರ, ಪತ್ರಗಾರ, ಅನುವಾದಕ, ವಿಮರ್ಶಕರೆಂದು ಹೆಸರು ಪಡೆದಿದ್ದ ಮೂರ್ತಿರಾಯರು ಹುಟ್ಟಿದ್ದು ಹೇಮಾವತಿ ನದೀತೀರದ ಅಕ್ಕಿಹೆಬ್ಬಾಳಿನಲ್ಲಿ. ಪೂರ್ಣ ಹೆಸರು ಅಕ್ಕಿಹೆಬ್ಬಾಳು ನರಸಿಂಹಮೂರ್ತಿರಾವ್, ತಂದೆ ಸುಬ್ಬರಾಯರು, ತಾಯಿ ಪುಟ್ಟಮ್ಮ. ಪ್ರಾಥಮಿಕ ವಿದ್ಯಾಭ್ಯಾಸ ಅಕ್ಕಿ ಹೆಬ್ಬಾಳು, ಮೈಸೂರಿನ ವೆಸ್ಲಿಯನ್ ಮಿಷನ್ ಹೈಸ್ಕೂಲಿನಲ್ಲಿ ಪ್ರೌಢ ವಿದ್ಯಾಭ್ಯಾಸ, ಮಹಾರಾಜಾ ಕಾಲೇಜಿನಲ್ಲಿ ಎಂ.ಎ. (ಇಂಗ್ಲಿಷ್ ಪದವಿ). ಉದ್ಯೋಗಕ್ಕಾಗಿ ಸೇರಿದ್ದು ಮೈಸೂರಿನ ಮಹಾರಾಜಾ ಕಾಲೇಜು. ನಂತರ ಬೆಂಗಳೂರಿನ ಸೆಂಟ್ರಲ್ ಕಾಲೇಜು, ಹಲವಾರು ಸರಕಾರಿ ಇಂಟರ್ ಮೀಡಿಯೆಟ್ ಕಾಲೇಜುಗಳು, ಕೆಲಕಾಲ ಬೆಂಗಳೂರಿನ ಆಚಾರ‍್ಯ ಪಾಠಶಾಲಾ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸಲ್ಲಿಸಿದ ಸೇವೆ. ಹೀಗೆ ವಿವಿಧ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತಿ. ಇವುಗಳ ನಡುವೆಯೂ ಇವರು ವಹಿಸಿಕೊಂಡ ಹುದ್ದೆಗಳ ಹರವು ದೊಡ್ಡದೇ. ಕಾಲೇಜಿನ ಸೂಪರಿಂಟೆಂಡೆಂಟರಾಗಿ, ಆಕಾಶವಾಣಿ ಕಾರ‍್ಯಕ್ರಮ ನಿರ್ಮಾಪಕರಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಕಾರ‍್ಯದರ್ಶಿಯಾಗಿ, ಅಧ್ಯಕ್ಷರಾಗಿ (೧೯೫೪-೫೬) ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾಗಿ ಸಲ್ಲಿಸಿದ ಸೇವೆ. ಲೋಕಾಭಿರಾಮದ ಹರಟೆಯಿಂದ ಬರೆದದ್ದು ಹಗಲುಗನಸುಗಳು, ಅಲೆಯುವ ಮನ, ಮಿನುಗು ಮಿಂಚು ಮುಂತಾದ ಪ್ರಬಂಧ ಸಂಕಲನಗಳು ಭಾಷಾಂತರ-ಸಾಕ್ರಟೀಸನ ಕೊನೆದಿನಗಳು. ಆಷಾಢಭೂತಿ ನಾಟಕ-ಸುಬ್ಬಾಶಾಸ್ತ್ರಿ ಎಂಬ ಹೆಸರಿನಿಂದಾದ ಚಲನಚಿತ್ರ. ಪ್ರವಾಸಕಥನ-ಅಪರ ವಯಸ್ಕನ ಅಮೆರಿಕಾ ಯಾತ್ರೆ. ‘ದೇವರು’ ಪಂಪ ಪ್ರಶಸ್ತಿ ಪಡೆದ ಕೃತಿ. ಶಿವರಾಮ ಕಾರಂತರ ‘ಮರಳಿ ಮಣ್ಣಿಗೆ’ ಕಾದಂಬರಿ ಇಂಗ್ಲಿಷ್‌ನಲ್ಲಿ THE RETURN TO THE SOIL. ಸಂದ ಗೌರವ ಪ್ರಶಸ್ತಿಗಳಿಗೆ ಲೆಕ್ಕವಿಲ್ಲ-ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಪಂಪ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವ, ನಾಡೋಜ ಪ್ರಶಸ್ತಿ, ಮೈಸೂರು ವಿಶ್ವವಿದ್ಯಾಲಯದ ಗೌರವ ಡಿ.ಲಿಟ್ ಪದವಿ, ಕನ್ನಡನಾಡು ೧೯೮೪ರಲ್ಲಿ ಕೈವಾರದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆರಿಸಿ ಗೌರವಿಸಿತು. ಇದೇ ದಿನ ಹುಟ್ಟಿದ ಸಾಹಿತಿಗಳು : ಬಿ. ವಿರೂಪಾಕ್ಷಪ್ಪ – ೧೯೨೪ ಗವಿಸಿದ್ದ ಎಚ್. ಪಾಟೀಲ – ೧೯೭೪ ಕಮಲಾ ರಾಮ್ಸಾಮಿ – ೧೯೩೫ ಪೂರ್ಣಿಮಾ. ಆರ್. – ೧೯೫೪

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top