Loading Events

« All Events

  • This event has passed.

ಎ. ಚಂದ್ರಶೇಖರ ಗವಾಯಿ

October 27

೨೭೧೦೧೯೩೩ ೨೭೨೦೦೨ ಪ್ರಖ್ಯಾತ ಹಿಂದೂಸ್ತಾನಿ ಗಾಯಕರಾದ ಚಂದ್ರಶೇಖರ ಗವಾಯಿಗಳು ಹುಟ್ಟಿದ್ದು ಬಳ್ಳಾರಿಯಲ್ಲಿ. ತಂದೆ ಭೀಮಸೇನಾ ಚಾರ್‌, ತಾಯಿ ಅಯ್ಯಮ್ಮ. ಸಂಗೀತಗಾರರ ಮನೆತನ. ಸಂಗೀತ ವಂಶ ಪಾರಂಪರ್ಯವಾಗಿ ಬಂದ ಕಲೆ. ಓದಿದ್ದು ಎಸ್‌.ಎಸ್‌.ಎಲ್‌.ಸಿ. ವರೆಗೆ. ತಂದೆತಾಯಿಗಳಿಂದಲೇ ಸಂಗೀತದ ಪ್ರಥಮಪಾಠ. ನಂತರ ಅಣ್ಣ ವಿರೂಪಾಕ್ಷಪ್ಪನವರಿಂದ ಹೆಚ್ಚಿನ ಶಿಕ್ಷಣ, ಸಂಗೀತ ವಿದ್ವಾಂಸರುಗಳಾದ ಬಿ.ಮರಿಯಪ್ಪ, ಸವಣೂರು ಕೃಷ್ಣಾಚಾರಿ, ಪಂಚಾಕ್ಷರಿ ಗವಾಯಿಗಳಿಂದ ಸ್ಥಾಪಿತವಾಗಿದ್ದ ವೀರೇಶ್ವರ ಪುಣ್ಯಾಶ್ರಮದ ಕುಲಪತಿಗಳಾದ ಡಾ. ಪುಟ್ಟರಾಜಗವಾಯಿ ಮತ್ತು ಪಂ. ಸಿದ್ಧರಾಮ ಜಂಬಲದಿನ್ನಿ ಯವರ ಬಳಿ ಶಾಸ್ತ್ರೀಯ ಸಂಗೀತದ ಉನ್ನತ ಶಿಕ್ಷಣ. ಮೈಸೂರು ದಸರಾ ಮಹೋತ್ಸವ, ಹುಬ್ಬಳ್ಳಿ, ಬಾಗಲಕೋಟೆ, ಬಿಜಾಪುರ, ನವರಸಪುರ, ಹಂಪಿ ಉತ್ಸವಗಳಲ್ಲಿ ನೀಡಿದ ಸಂಗೀತೋತ್ಸವ ಕಾರ್ಯಕ್ರಮಗಳು. ಧಾರವಾಡ, ಗುಲಬರ್ಗದ ಬಾನುಲಿ ಕೇಂದ್ರದಿಂದ ಹಲವಾರು ಬಾರಿ ಕಾರ್ಯಕ್ರಮ ಪ್ರಸಾರ. ಬಳ್ಳಾರಿಯ ಕಲಾ ಪ್ರೇಮಿಗಳ ಸಂಘದ ಆಶ್ರಯದಲ್ಲಿ ತೆರೆದ ಸಂಗೀತ ಪಾಠಶಾಲೆಯಲ್ಲಿ ನೂರಾರು ಶಿಷ್ಯರಿಗೆ ನೀಡಿದ ಸಂಗೀತ ಶಿಕ್ಷಣ. ಇದೀಗ ಶಿಷ್ಯರಾದ ರಜನೀಶ ಕುಲಕರ್ಣಿ ಮತ್ತು ವನಮಾಲ ಕುಲಕರ್ಣಿಯವರಿಂದ ಪಾಠಶಾಲೆಯ ಮುಂದುವರಿಕೆ. ಅನೇಕ ಸಂಘ ಸಂಸ್ಥೆಗಳಿಂದ ಸನ್ಮಾನ. ಕರ್ನಾಟಕ ಸಂಗೀತ ನೃತ್ಯ ಆಕಾಡಮಿಯ ೧೯೯೭ನೇ ಸಾಲಿನ ಕರ್ನಾಟಕ ಕಲಾ ಶ್ರೀ ಪ್ರಶಸ್ತಿ, ಗದುಗಿನ ಸುಪ್ರಸಿದ್ಧ ವೀರೇಶ್ವರ ಪುಣ್ಯಾಶ್ರಮದಿಂದ ಸಂಗೀತ ಸುಧಾಕರ ಪ್ರಶಸ್ತಿ ಮುಂತಾದ ಗೌರವ ಪ್ರಶಸ್ತಿಗಳು. ಪ್ರತಿ ವರ್ಷ ಚಂದ್ರಶೇಖರ ಗವಾಯಿಗಳ ಪುಣ್ಯತಿಥಿಯಂದು ಬಳ್ಳಾರಿಯ ಕಲಾ ಪ್ರೇಮಿಗಳ ಸಂಘದ ಆಶ್ರಯದಲ್ಲಿ ನಡೆಯುತ್ತಿರುವ ಸಂಗೀತೋತ್ಸವ, ಈ ವರ್ಷ ಕುಮಾರ್‌ದಾಸ್‌ ಮತ್ತು ಈಶ್ವರ ಮೊರಗೇರಿಯವರಿಂದ ಸಂಗೀತ ಕಚೇರಿ.   ಇದೇದಿನಹುಟ್ಟಿದಕಲಾವಿದ ಎಸ್‌. ಲಕ್ಷ್ಮಣ ಶಾಸ್ತ್ರಿ – ೧೯೧೪

* * *

Details

Date:
October 27
Event Category: