Loading Events

« All Events

  • This event has passed.

ಎ. ವೀರಭದ್ರಯ್ಯ

December 4, 2023

೧೯೨೩ ಸುಪ್ರಸಿದ್ಧ ಪಿಟೀಲು ವಾದಕರಾದ ವೀರಭದ್ರಯ್ಯನವರು ಹುಟ್ಟಿದ್ದು ಬೆಂಗಳೂರು. ತಂದೆ ಹಾರ್ಮೋನಿಯಂ ವಿದ್ವಾನ್ ಎಂ. ಅರುಣಾಚಲಪ್ಪ, ತಾಯಿ ಅನ್ನಪೂರ್ಣಮ್ಮ. ಸಂಗೀತದ ವಾತಾವರಣ. ತಂದೆಯಿಂದಲೇ ಪಿಟೀಲು ಶಿಕ್ಷಣ, ಎಲ್.ಎಸ್. ನಾರಾಯಣಸ್ವಾಮಿ ಭಾಗವತರ ಬಳಿ ಪ್ರೌಢ ಶಿಕ್ಷಣ, ಗಾನ ಸುಧಾಕರ ಎ. ಸುಬ್ಬರಾವ್‌ರವರ ಕಚೇರಿಗಳಿಗೆ ನಲವತ್ತು ವರ್ಷಕಾಲ ಸತತವಾಗಿ ಪಕ್ಕವಾದ್ಯ ನುಡಿಸಿದ ದಾಖಲೆ. ಹಲವಾರು ಕಡೆ ನಡೆಸಿದ ಏಕವ್ಯಕ್ತಿ ಪಿಟೀಲು ವಾದನ ಕಚೇರಿ. ಆನೂರು ರಾಮಕೃಷ್ಣ, ಎಚ್.ವಿ. ಕೃಷ್ಣಮೂರ್ತಿ, ವೀರಭದ್ರಯ್ಯ ಈ ಪಿಟೀಲು ತ್ರಯರ ಕಚೇರಿಗಳೆಂದರೆ ಸಂಗೀತದ ಹಬ್ಬದ ವಾತಾವರಣ. ಹಲವಾರು ಸಂಗೀತೋತ್ಸವ, ಆಕಾಶವಾಣಿ ದೂರದರ್ಶನಗಳಿಂದ ಕಾರ್ಯಕ್ರಮಗಳ ಪ್ರಸಾರ. ಅರುಣಾ ಮ್ಯೂಸಿಕಲ್ ಸ್ಥಾಪಿಸಿ ವೀಣೆ ಹಾಗೂ ತಂಬೂರಿ ತಯಾರಿಕಾ ಕ್ಷೇತ್ರದಲ್ಲಿ ತಂದ ಕ್ರಾಂತಿಕಾರಿಕ ಬದಲಾವಣೆ. ಕರ್ನಾಟಕ ಗಾನಕಲಾ ಪರಿಷತ್ತಿನ ಸ್ಥಾಪಕ ಸದಸ್ಯರಾಗಿ, ಅಧ್ಯಕ್ಷರಾಗಿ, ರಾಜ್ಯ ಸಂಗೀತ ನೃತ್ಯ ಅಕಾಡಮಿಯ ಸದಸ್ಯರಾಗಿ, ವಿಜಯ ಸಂಗೀತ ಮಹಾವಿದ್ಯಾಲಯದ ಸ್ಥಾಪಕ ಸದಸ್ಯರಾಗಿ, ವಾಣಿ ಸಂಗೀತ ವಿದ್ಯಾಲಯದ, ಕೃಷ್ಣ ಸಂಗೀತ ಸಭೆಯ ಅಧ್ಯಕ್ಷರಾಗಿ ನಿರ್ವಹಿಸಿದ ಕಾರ್ಯಗಳು. ಗಾನಕಲಾ ಪರಿಷತ್ತಿನಿಂದ ಗಾನಕಲಾ ಭೂಷಣ, ಸೋಸಲೆ ವ್ಯಾಸರಾಜಮಠದಿಂದ ನಾದ ಗಂಭೀರ, ಕರ್ನಾಟಕ ಸಂಗೀತ ನೃತ್ಯ ಅಕಾಡಮಿಯಿಂದ ಕರ್ನಾಟಕ ಕಲಾಶ್ರೀ ಮುಂತಾದ ಪ್ರಶಸ್ತಿಗಳು.   ಇದೇ ದಿನ ಹುಟ್ಟಿದ ಕಲಾವಿದರು : ರಂಗಯ್ಯ ಜಿ.ಎಂ- ೧೯೫೩, ಶೇಖರ್ ಅಂಚನ್ – ೧೯೬೧

* * *

Details

Date:
December 4, 2023
Event Category: