ಕಡೆಂಗೋಡ್ಲು ಶಂಕರಭಟ್ಟ

Home/Birthday/ಕಡೆಂಗೋಡ್ಲು ಶಂಕರಭಟ್ಟ
Loading Events

೯-೮-೧೯೦೪ ೧೭-೫-೧೯೬೮ ಆಧುನಿಕ ಕನ್ನಡ ಸಾಹಿತ್ಯದ ಪ್ರಮುಖ ಕವಿ, ನಾಟಕಕಾರ, ಕಥೆ-ಕಾದಂಬರಿಕಾರ ಪತ್ರಕರ್ತರಾದ ಶಂಕರಭಟ್ಟರು ಹುಟ್ಟಿದ್ದು ದ. ಕನ್ನಡ ಜಿಲ್ಲೆಯ ಪೆರುಮಾಯಿ ಗ್ರಾಮದಲ್ಲಿ. ತಂದೆ ಈಶ್ವರಭಟ್ಟ, ತಾಯಿ ಗೌರಮ್ಮ. ಪ್ರಾರಂಭಿಕ ವಿದ್ಯಾಭ್ಯಾಸ ಹುಟ್ಟಿದೂರಿನಲ್ಲಿ. ಮಂಗಳೂರಿನ ಕೆನರಾ ಶಾಲೆಯಲ್ಲಿ ಹೈಸ್ಕೂಲು ವಿದ್ಯಾಭ್ಯಾಸ. ಧಾರವಾಡದ ಶಿಕ್ಷಣ ಸಮಿತಿಯಿಂದ ಉನ್ನತ ಶ್ರೇಣಿಯಲ್ಲಿ ಸ್ನಾತಕ ಪದವಿ. ಕಾರ್ನಾಡ ಸದಾಶಿವರಾಯರಿಂದ ಪ್ರಭಾವಿತರಾಗಿ ಶಾಲೆಯನ್ನು ತೊರೆದು ಸೇರಿದ್ದು ಸ್ವಾತಂತ್ರ್ಯ ಚಳವಳಿ, ಸ್ವಯಂಸೇವಕರಾಗಿ ಸೇವೆ. ಉದ್ಯೋಗಕ್ಕಾಗಿ ಸೇರಿದ್ದು ಕಾರ್ನಾಡ ಸದಾಶಿವರಾಯರು ಸ್ಥಾಪಿಸಿದ್ದ ಮಂಗಳೂರಿನ ರಾಷ್ಟ್ರೀಯ ಪಾಠಶಾಲೆ. ತಿಲಕ ವಿದ್ಯಾಲಯದಲ್ಲಿ ಅಧ್ಯಾಪಕರಾಗಿ ನಂತರ ಮಂಗಳೂರಿನ ಸೇಂಟ್ ಆಗ್ನೇಸ್ ಮಹಿಳಾ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ. ವಿದ್ಯಾರ್ಥಿಗಳಲ್ಲಿ ಕನ್ನಡದ ಒಲವನ್ನು ಮೂಡಿಸುವುದೇ ಇವರ ಅಧ್ಯಾಪನದ ಒಂದು ಅಂಗ. ಪತ್ರಿಕೋದ್ಯಮದಲ್ಲೂ ಆಸಕ್ತಿ. ಮಂಗಳೂರಿನ ನವಯುಗ, ಪತ್ರಿಕೆಯಲ್ಲಿ ಪತ್ರಕರ್ತರಾಗಿ, ರಾಷ್ಟ್ರಬಂಧು ವಾರಪತ್ರಿಕೆಯ ಪ್ರಥಮ ಸಂಪಾದಕರಾಗಿ, ರಾಷ್ಟ್ರಮತ ವಾರಪತ್ರಿಕೆಯನ್ನಾರಂಭಿಸಿ ತಮ್ಮ ಜೀವಿತಾವಯವರೆಗೂ ಸಂಪಾದಕರಾಗಿ ಸೇವೆ. ಹಲವಾರು ಕೃತಿ ರಚನೆ. ಕಾವ್ಯ-ವಿದ್ಯಾರ್ಥಿ ದೆಸೆಯಲ್ಲೇ ಕಾವ್ಯರಚನೆ ಪ್ರಾರಂಭ. ‘ಘೋಷಯಾತ್ರೆ’ ಸಂಕಲನ ಪ್ರಕಟಿತ. ಚೌಪದಿ, ಕುಸುಮ ಷಟ್ಪದಿ, ಮಂದಾನಿಲ ರಗಳೆಗಳ ಯಶಸ್ವಿ ಪ್ರಯೋಗ. ಗಾಂ ಸಂದೇಶ, ವಸ್ತ್ರಾಪಹರಣ, ಕಾಣಿಕೆ, ನಲ್ಮೆ, ಹಣ್ಣು-ಕಾಯಿ, ಪತ್ರ-ಪುಷ್ಪ ಮೊದಲಾದ ಕಾವ್ಯಕೃತಿಗಳು. ನಾಟಕ-ಉಷೆ, ಹಿಡಿಂಬೆ, ವಿರಾಮ, ಯಜ್ಞಕುಂಡ, ಅಜಾತ ಶತ್ರು, ಗುರುದಕ್ಷಿಣೆ, ಮಹಾಯೋಗಿ. ಕಾದಂಬರಿ-ದೇವತಾಮನುಷ್ಯ, ಧೂಮಕೇತು, ಲೋಕದ ಕಣ್ಣು, ಕಥಾಸಂಕಲನ-ಹಿಂದಿನ ಕಥೆಗಳು, ಗಾಜಿನ ಬಳೆ, ದುಡಿಯುವ ಮಕ್ಕಳು. ಸಾಹಿತ್ಯ  ವಿಮರ್ಶೆ-ವಾಙ್ಞಯ ತಪಸ್ವಿ. ಅನುವಾದ-ಸ್ವರಾಜ್ಯ ಯುದ್ಧ. ಇದಲ್ಲದೆ ಲಲಿತ ಪ್ರಬಂಧಗಳು, ಗ್ರಂಥ ವಿಮರ್ಶೆ, ಕಥೆ-ಕವನಗಳು ವಿಮರ್ಶಾ ಗ್ರಂಥಗಳು ಪ್ರಕಟಿತ. ಇವರ ಕೃತಿಯ ಬಗ್ಗೆ ಗೋಕಾಕ್, ಪು.ತಿ.ನ. ಎಂ.ವಿ.ಸೀ. ಅಡಿಗರು ಬರೆದ ವಿಮರ್ಶಾಗ್ರಂಥಗಳು ಪ್ರಕಟಿತ. ಸಂದ ಗೌರವಗಳು-೧೯೩೦ರಲ್ಲಿ ನಡೆದ ಧಾರವಾಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ೧೯೩೨ರಲ್ಲಿ ಮಡಿಕೇರಿ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ ಅಧ್ಯಕ್ಷತೆ. ೧೯೬೫ರಲ್ಲಿ ಕಾರವಾರದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ. ಹಿತೈಷಿಗಳು ೧೯೬೫ರಲ್ಲಿ ಅರ್ಪಿಸಿದ ಗೌರವಗ್ರಂಥ ‘ಸಾಹಿತ್ಯಯೋಗಿ,’ ೧೯೭೭ರಲ್ಲಿ ಸಂಸ್ಮರಣ ಗ್ರಂಥ ‘ವಾಙ್ಞಯ ತಪಸ್ವಿ.’ ನಿಧನರಾದದ್ದು ಮೇ ೧೭ರ ೧೯೬೮ರಲ್ಲಿ.   ಇದೇ ದಿನ ಹುಟ್ಟಿದ ಸಾಹಿತಿಗಳು : ಶಿವರಾಮ ಕಾಡನಕುಪ್ಪೆ – ೧೯೫೩ ವಿಜಯಕಾಂತ ಪಾಟೀಲ – ೧೯೬೯

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top