Loading Events

« All Events

  • This event has passed.

ಕಣಗಲ್ ಪ್ರಭಾಕರಶಾಸ್ತ್ರಿ

November 17

೧೭೧೧೧೯೨೭ ೨೪೧೯೮೯ ರಂಗಭೂಮಿ ನಟರಾಗಿ, ಚಲನಚಿತ್ರದ ನಿರ್ದೇಶಕ, ನಿರ್ಮಾತೃ, ಸಾಹಿತಿಯಾಗಿ ಪ್ರಖ್ಯಾತರಾಗಿದ್ದ ಪ್ರಭಾಕರ ಶಾಸ್ತ್ರಿಗಳು ಹುಟ್ಟಿದ್ದು ಪಿರಿಯಾಪಟ್ಟಣ ತಾಲ್ಲೂಕಿನ  ಕಣಗಾಲು ಹತ್ತಿರದ ರಾಜನ ಬಿಲಗುಲಿಯಲ್ಲಿ. ತಂದೆ ಎಸ್.ಪಿ. ರಾಮಸ್ವಾಮಯ್ಯ, ತಾಯಿ ಸುಬ್ಬಮ್ಮ. ಒಮ್ಮೆ ಕೇಳಿದ್ದನ್ನು ಮಿದುಳಿನಲ್ಲಿ ಮುದ್ರಿಸಿಕೊಂಡು ಬಿಡುವ ಅಸಾಧಾರಣ ಪ್ರತಿಭೆಯ ಬಾಲಕ. ತಾತನಿಂದ ಸಂಸ್ಕೃತ, ಇಂಗ್ಲಿಷ್, ಕನ್ನಡ ಭಾಷೆಗಳ ಶಿಕ್ಷಣ. ಶಾಲೆಯ ಮೇಷ್ಟ್ರು ಸುಬ್ಬರಾಯರಿಂದ ಕಲೆಯ ಬಗ್ಗೆ ಪಾಠ. ರಂಗಭೂಮಿಯ ಬಗ್ಗೆ ಕೊಣನೂರು ಪರಮೇಶ್ವರ ಶಾಸ್ತ್ರಿಗಳು, ಮತ್ತಿಗೋಡು ವಾಸುದೇವ ಶಾಸ್ತ್ರಿಗಳಿಂದ ಮಾರ್ಗದರ್ಶನ. ನಂಜಾಸಾನಿ, ಲಕ್ಷ್ಮಾಸಾನಿಯವರು ನಡೆಸುತ್ತಿದ್ದ ರಸಿಕಮನೋಲ್ಲಾಸಿನಿ ನಾಟಕ ಸಂಸ್ಥೆಯಲ್ಲಿ ಬಾಲನಟನಾಗಿ ಪ್ರವೇಶ, ಹರೆಯದಲ್ಲಿ ನಟಿಸಿದ್ದು ಗಂಗೆ-ಗೌರಿ ನಾಟಕದ ನಾರದನ ಪಾತ್ರ, ಕಾಳಿದಾಸನ ನಾಟಕದಲ್ಲಿ ಭೋಜರಾಜನ ಪಾತ್ರದಿಂದ ಬಂದ ಕೀರ್ತಿ, ೧೯ನೇ ವಯಸ್ಸಿನಲ್ಲೇ ರಚಿಸಿದ ಕ್ರಾಂತಿಕಾರಿಕ ನಾಟಕ ಸ್ವರ್ಣ ಸೀತಾ. ಶಂಕರಸಿಂಗ್‌ರವರ ಕೃಷ್ಣಲೀಲಾ ಚಲನಚಿತ್ರಕ್ಕಾಗಿ ಬರೆದ ಹಾಡುಗಳು, ಭಾಗ್ಯೋದಯ ಚಿತ್ರಕ್ಕಾಗಿ ಚಿತ್ರಕಥೆ, ಸಂಭಾಷಣೆ, ಗೀತರಚನೆ, ಚಿತ್ರಸಾಹಿತಿಯಾಗಿ ಸಾಕುಮಗಳು, ವಾಲ್ಮೀಕಿ, ಕನ್ಯಾರತ್ನ, ಅಮರಜೀವಿ, ನನ್ನತಮ್ಮ, ಶ್ರೀಕೃಷ್ಣದೇವರಾಯ, ಸ್ಕೂಲ್‌ಮಾಸ್ಟರ್, ಸಾಕ್ಷಾತ್ಕಾರ, ಕುಲವಧು, ಶರಪಂಜರ ಮುಂತಾದ ಚಿತ್ರಗಳಿಗೆ ಸಾಹಿತ್ಯ, ರಾಜ್ ದ್ವಿಪಾತ್ರದಲ್ಲಿ ಅಭಿನಯಿಸಿದ ಚಿತ್ರದ ನಿರ್ದೇಶನದ ಹೆಗ್ಗಳಿಕೆ, ೬೦ಕ್ಕೂ ಹೆಚ್ಚು ನಾಟಕದ ಅಭಿನಯ, ಚಲನಚಿತ್ರಕ್ಕೂ ನೀಡಿದ ಅಪಾರ ಕೊಡುಗೆ.   ಇದೇ ದಿನ ಹುಟ್ಟಿದ ಕಲಾವಿದರು ದೇರಾಜೆ ಸೀತಾರಾಮಯ್ಯ – ೧೯೧೪ ಕಲ್ಲಪ್ಪ ದ್ಯಾವಣಸಿ – ೧೯೩೨ ಎಲ್.ಆರ್. ಲಕ್ಷ್ಮೀ – ೧೯೪೧ ಹುಲಿಕಲ್ ನಾಗರಾಜ – ೧೯೫೪

Details

Date:
November 17
Event Category: