ಕನ್ನೆಪ್ಪಾಡಿ ರಾಮಕೃಷ್ಣ

Home/Birthday/ಕನ್ನೆಪ್ಪಾಡಿ ರಾಮಕೃಷ್ಣ
Loading Events
This event has passed.

೨೯..೧೯೨೫ ೨೩..೨೦೦೦ ಕನ್ನಡ ಪತ್ರಿಕೆಗಳಲ್ಲಿ ವ್ಯಂಗ್ಯಚಿತ್ರಗಳಿಗೆ ಅಷ್ಟೇನೂ ಪ್ರಾಮುಖ್ಯತೆ ಇರದಿದ್ದಕಾಲದಲ್ಲೇ ’ಶಿಂಗಣ್ಣ’ ಎಂಬ ಕಾಲ್ಪನಿಕ ಹೆಸರುಕೊಟ್ಟು ವ್ಯಂಗ್ಯ ಚಿತ್ರ ರಚಿಸಿ ಹೆಸರು ಮಾಡಿದ ರಾಮಕೃಷ್ಣರು ಹುಟ್ಟಿದ್ದು ಪುತ್ತೂರು ಬಳಿ ಹಾರಾಡಿ. ತಂದೆ ಪರಮೇಶ್ವರ ಶಾಸ್ತ್ರಿ, ತಾಯಿ ಸತ್ಯ ಸತ್ಯಭಾಮಾ ದೇವಿ, ೧೯೪೩ ರಲ್ಲಿ ಬನಾರಸ್ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದಾಗ ಮೊದಲ ವ್ಯಂಗ್ಯ ಚಿತ್ರ ಕಲ್ಕತ್ತಾದಿಂದ ಹೊರಡುತ್ತಿದ್ದ ಓರಿಯಂಟ್ ಇಲ್ಲಸ್ಟ್ರೇಟೆಡ್ ವೀಕ್ಲಿಯಲ್ಲಿ ಪ್ರಕಟಿತ. ಓದಿದ್ದು ಕೈಗಾರಿಕಾ ರಸಾಯನ ಶಾಸ್ತ್ರದಲ್ಲಿ ಪದವಿ. ಸಾಬೂನು ತಯಾರಿಕಾ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಡಿಪ್ಲೊಮ. ಕಲಿತ ಪದವಿಗಳನ್ನು ಬದಿಗಿಟ್ಟು ಆಯ್ಕೆ ಮಡಿಕೊಂಡದ್ದು ವ್ಯಂಗ್ಯ ಚಿತ್ರ ರಚನೆಯ ಬದುಕು. ಬನಾರಸ್ ’ಆಜ್’, ಅಲಹಾಬಾದಿನ ’ಅಮೃತ ಬಜಾರ್‌’ ಪತ್ರಿಕೆಗಳಿಗೆ ನಿಯಮಿತವಾಗಿ ರಚಿಸಿದ ವ್ಯಂಗ್ಯ ಚಿತ್ರಗಳು. ಆಗಿನ ಸಂಭಾವನೆ ಕೇವಲ ೧೦ ರೂ. ಸಂಭಾವನೆ ಹತ್ತು ರೂ ಪಡೆದ ಹೆಮ್ಮೆ. ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿದ್ದ ಡಾ.ಎಸ್. ರಾಧಕೃಷ್ಣನ್ ಮತ್ತು ಮದನಮೋಹನ ಮಾಳವೀಯರು ಮುಂತಾದವರಿಂದ ದೊರೆತ ಪ್ರಶಂಸೆ. ೧೯೪೫ ಪೂರ್ಣಕಾಲಿಕ ವ್ಯಂಗ್ಯ ಚಿತ್ರಕಾರರಾಗಿ ’ಕಲ್ಕಿ’ ಪತ್ರಿಕಾ ಬಳಗ ಸೇರ್ಪಡೆ. ತಮಿಳು ಕಲಿತು ರಚಿಸಿದ ವ್ಯಂಗ್ಯ ಚಿತ್ರಗಳು. ಇವರ ವ್ಯಂಗ್ಯ ಚಿತ್ರಗಳ ಪ್ರಭಾವದಿಂದ ಕಲ್ಕಿ ಪ್ರಸಾರ ೩೫ ಸಾವಿರದಿಂದ ಲಕ್ಷಕ್ಕೇರಿಕೆ. ಬೇರೆ ಬೇರೆ ಲೇಖನಿ ನಾಮದಿಂದ ’ಕುಮದಂ’. ಇಲ್ಲಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯಾಗೂ ವ್ಯಂಗ್ಯ ಚಿತ್ರ ರಚನೆ. ಆಗಿನ ಕಾಲದಲ್ಲೆ ಅಮೆರಿಕಾದ ಪತ್ರಿಕೆಯೊಂದು ಇವರ ವ್ಯಂಗ್ಯ ಚಿತ್ರವನ್ನು ೧೦೦ ಡಾಲರಿಗೆ ಖರೀದಿಸಿ ಸಲ್ಲಿಸಿದ ಗೌರವ. ತಾಯ್ನಾಡಿಗೆ ಮರಳಿ ಬಂದು ಕೈಗೊಂಡ ವಕೀಲಿ ವೃತ್ತಿ ಕೆಲಕಾಲ. ೧೯೬೦ರ ದಶಕದಲ್ಲಿ ನವಭಾರತ ಸಂಪಾದಕರಾದ ವಿ.ಎಸ್. ಕುಡ್ವ ಮತ್ತು ರಾಮಕೃಷ್ಣರಿಬ್ಬರು ಯೋಚಿಸಿ, ವ್ಯಂಗ್ಯಚಿತ್ರದ ಶೀರ್ಷಿಕೆ ’ಶಿಂಗಣ್ಣ’ನ ಉದಯ. ೧೪ ವರ್ಷ ಕಾಲ. ಕರಾವಳಿಯ ಜನರಿಗೆ ಶಿಂಗಣ್ಣ ಒದಗಿಸಿದ ಪಕ್ಷಾತೀತ, ಮದ್ಯ, ಬೀಡಿ, ಸಿಗರೇಟು ವರ್ಜಿಸಿದ ಶಿಂಗಣ್ಣನ ಕಾರುಬಾರು. ೧೯೬೯ ರಲ್ಲಿ ಪ್ರಾರಂಭವಾದ ಉದಯವಾಣಿ, ಟಿ.ಎಸ್.ಆರ್‌. ಒತ್ತಾಯದ ಮೇರೆಗೆ ಪ್ರಜಾವಾಣಿ, ಸುಧಾ, ಮಯೂರಗಳಲ್ಲೂ ಶಿಂಗಣ್ಣನ ಪ್ರವೇಶ. ಭಾಷೆಯ ನಿರ್ಬಂಧವಿಲ್ಲದೆ ಇವರ ಹಲವಾರು ವ್ಯಂಗ್ಯ ಚಿತ್ರಗಳು ಕೇರಳದ ಮಾತೃಭೂಮಿ, ಮಲಯಾಳಂನ ಮನೋರಮಾ ಪತ್ರಿಕೆಯಲ್ಲೂ ಪ್ರಕಟಿತ. ೧೯೯೨ ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಸಾರ್ವಜನಿಕ ಸನ್ಮಾನ. ೧೯೬೯ ರಲ್ಲಿ ಪತ್ರಿಕಾ ಅಕಾಡಮಿ ಪ್ರಶಸ್ತಿ ಮುಂತಾದ ಗೌರವಗಳು. ಶಿಂಗಣ್ಣನ ವ್ಯಂಗ್ಯ ಚಿತ್ರ ಸಂಕಲನ, ವ್ಯಂಗ್ಯ ಬದುಕು (ಕನ್ನೆಪ್ಪಾಡಿ ಜೀವನಗಾಥೆ) ಪ್ರಕಟಿತ ಕೃತಿಗಳು.   ಇದೇದಿನಹುಟ್ಟಿದಕಲಾವಿದರು: ರೇವಣಾರಾಧ್ಯ .ಎಸ್. – ೧೯೨೯ ವೀಣಾ ಎಸ್.ಎನ್. – ೧೯೭೭.

* * *

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top