೨೨-೨-೧೮೯೧ ೨೦-೫-೧೯೮೧ ಮೂಲಭೂತವಾಗಿ ಚಿತ್ರಕಲೆಗಾಗಿ ಎಂದು ಪ್ರಾರಂಭಿಸಿ ಕಲೆಯ ಎಲ್ಲ ಪ್ರಕಾರಗಳಲ್ಲೂ ದುಡಿದ ಅ.ನ. ಸುಬ್ಬರಾಯರು ಹುಟ್ಟಿದ್ದು ಅಕ್ಕಿಹೆಬ್ಬಾಳು. ತಂದೆ ಅಕ್ಕಿಹೆಬ್ಬಾಳು ನರಸಿಂಹಯ್ಯ. ತಾಯಿ ವೆಂಕಮ್ಮ. ಪ್ರಾರಂಭಿಕ ಶಿಕ್ಷಣ ನಾಗಮಂಗಲ. ವಿಶ್ವಕರ್ಮರ ಮನೆಯಲ್ಲಿ ರಚಿಸುತ್ತಿದ್ದ ವಿಗ್ರಹಗಳಿಂದ ಚಿತ್ರಕಲೆಯಲ್ಲಿ ಬೆಳೆದ ಆಸಕ್ತಿ. ಕಲಾಧ್ಯಾಪಕರಾದ ಎಂ. ಜಗದೀಶನ್ ರವರಿಂದ ಕಲಾಭ್ಯಾಸ. ಮದರಾಸು ಸರಕಾರದ ಕಲಾ ಪರೀಕ್ಷೆಯಲ್ಲಿ ಉತ್ತೀರ್ಣ. ದಕ್ಷಿಣ ಭಾರತದ ರಿಲೀಫ್ ಮ್ಯಾಪಿಗೆ ದೊರೆತ ರಜತ ಪದಕ. ೧೯೧೬ರಲ್ಲಿ ಪುಷ್ಪ ರಚನಾ ಕೃತಿ ಪ್ರಕಟಿತ. ಚಾಮರಾಜೇಂದ್ರ ಕಲಾಶಾಲೆಯಲ್ಲಿ ಮುಂದುವರಿದ ಕಲಿಕೆ. ಉದ್ಯೋಗ ಪ್ರಾರಂಭಿಸಿದ್ದು ಕಲಾವಿಭಾಗದ ಅಧ್ಯಾಪಕರಾಗಿ ಬೆಂಗಳೂರು ಸ್ತ್ರೀ ಸಮಾಜ ಶಾಲೆಯಲ್ಲಿ, ಸರ್.ಎಂ.ವಿ. ಯವರ ಸಲಹೆಯಂತೆ ಬಳೇಪೇಟೆಯಲ್ಲಿ ಕಲಾಶಾಲೆ ಪ್ರಾರಂಭ. (೧೨-೮-೧೯೧೯). ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್ ರವರಿಂದ ದೊರೆತ ಪ್ರಶಂಸೆ. ನಂತರ ಮೆಜೆಸ್ಟಿಕ್ನ ಆನಂದ ಮಹಲ್, ಹಲಸೂರು ಪೇಟೆ ಸಂಪನ್ನಪ್ಪ ಬಿಲ್ಡಿಂಗ್, ಗಾಂಧಿಬಜಾರ್ ಮಹಡಿ ಇದೀಗ ಹನುಮಂತನಗರದಲ್ಲಿ. ಸರಕಾರದ ನೆರವಿಲ್ಲದೆ ೧೯೨೧ರಲ್ಲಿ, ೧೯೨೭ರಲ್ಲಿ, ಮತ್ತೊಂದುಬಾರಿ, ಏರ್ಪಡಿಸಿದ ಕಲಾಪ್ರದರ್ಶನಗಳು. ಸಾರ್ವಜನಿಕರಿಂದ ದೊರೆತ ಬೆಂಬಲ, ಪ್ರಶಂಸೆ. ಅರ್ಹರಾದ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ. ನಾರಾಯಣ ಸಂಗಮ ಮುಂತಾದ ವಿದ್ಯಾರ್ಥಿಗಳು ಶಾಂತಿ ನಿಕೇತನದಲ್ಲಿ ಕಲಿಕೆಗೆ ಏರ್ಪಾಡು. ಬಿ.ಕೆ.ಎಸ್. ವರ್ಮ ರಂತಹ ಬಾಲ ಚಿತ್ರಕಾರರಿಗೆ ದೊರೆತ ಸಹಾಯ ಹಸ್ತ. ಪ್ರಾತ್ಯಕ್ಷಿಕಕ್ಕಾಗಿ ವಿದ್ಯಾರ್ಥಿಗಳಿಗೆ ಬೇಲೂರು ದೇವಸ್ಥಾನದಲ್ಲಿ ಕಲಾಧ್ಯಯನ. ಕಲೆಯ ಜೊತೆ ಕಲೆಯ ಪರಿಕರಗಳ ಉತ್ಪಾದನೆ ಪ್ರಾರಂಭ. ‘ಮೈಸೂರು ಆರ್ಟ್ಸ್ ಫ್ರೇಂ ಅಂಡ್ ವುಡ್ ಇಂಡಸ್ಟ್ರೀಸ್’ ಸ್ಥಾಪನೆ. ಹಲವಾರು ಮಂದಿಗೆ ಗುಡಿ ಕೈಗಾರಿಕೆಯಿಂದ ದೊರೆತ ಉದ್ಯೋಗ, ಮಹಿಳಾ ಸೊಸೈಟಿಯ ಮೂಲಕ ಮಹಿಳೆಯರಿಗೆ ದೊರೆತ ಪ್ರೋತ್ಸಾಹ, ಲೇಖಕಿಯರ ಸಂಘದ ಸ್ಥಾಪನೆ. ಅಂದಿನ ಸಮಸ್ಯೆಗಳನ್ನು ಸಾರ್ವಜನಿಕರೆದುರಿಗಿಡಲು ಬರೆದು ಆಡಿದ ನಾಟಕಗಳು. ಚಿತ್ರಾ ತಂಡದ ಅಭಿನಯ ತರಂಗ ನಾಟಕ ಶಾಲೆಯ ಹುಟ್ಟು. ಕಲೆಯ ಜೊತೆಗೆ ಯಕ್ಷಗಾನ, ಸೂತ್ರದ ಬೊಂಬೆಯಾಟ, ಬಯಲಾಟ, ಜಾನಪದ ಎಲ್ಲಾ ರಂಗದ ಬೆಳವಣಿಗೆಗೂ ದುಡಿದ ಕಲಾಮಂದಿರ. ಸಂಸ್ಥೆಗೆ ಹೆಸರು ತಂದ ಹಲವಾರು ವಿದ್ಯಾರ್ಥಿಗಳು. ಮೈಸೂರು ರಾಜ್ಯ ಲಲಿತಕಲಾ ಅಕಾಡಮಿಯ ಪ್ರಶಸ್ತಿ, ಎಲ್. ಶ್ರೀನಿವಾಸಮೂರ್ತಿ, ಎಸ್. ರಾಮನಾಥನ್, ಎನ್. ನಾರಾಯಣ, ನವರತ್ನರಾಮ್, ದಾಶರಥಿ ದೀಕ್ಷಿತ್ ಮುಂತಾದವರೆಲ್ಲ ಇಲ್ಲಿಂದ ಬಂದವರೇ, ಮಗ ಎ.ಎಸ್. ಮೂರ್ತಿಯವರನ್ನೊಳಗೊಂಡಂತೆ ಇಡೀ ಕುಟುಂಬ ಕಲೆಗಾಗಿ ಜೀವನ ಸಮರ್ಪಣೆ. ಇದೇ ದಿನ ಹುಟ್ಟಿದ ಕಲಾವಿದರು : ಮೈಸೂರು ಕೆ. ಕುಮಾರ್ – ೧೯೬೫
* * *