
ಕಾಂಚನ ವಿ. ಸುಬ್ಬರತ್ನಂ
December 10
೧೦-೧೨-೧೯೪೮ ೨೭-೧೦-೨೦೦೫ ಪ್ರಖ್ಯಾತ ಸಂಗೀತ ವಿದ್ವಾಂಸರಾದ ವಿ. ಸುಬ್ಬರತ್ನಂ ರವರು ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಕಾಂಚನದಲ್ಲಿ. ತಂದೆ ಸಂಗೀತರತ್ನ ಕಾಂಚನ ವೆಂಕಟ ಸುಬ್ರಹ್ಮಣ್ಯಂ, ತಾಯಿ ಸಂಗೀತ ವಿದುಷಿ ಕೆ.ವಿ. ತಂಗಮ್ಮಾಳ್, ತಂದೆಯಿಂದ ಗಾಯನ, ಸ್ವಸಾಧನೆಯಿಂದ ಪಿಟೀಲು ವಾದನದಲ್ಲಿ ಪಡೆದ ಪರಿಣತಿ. ವಿದ್ವತ್‌ನಲ್ಲಿ ಮೊದಲ ರ್ಯಾಂಕ್, ಆಕಾಶವಾಣಿ, ದೂರದರ್ಶನದ ಎ ಗ್ರೇಡ್ ಕಲಾವಿದರು, ತಂದೆಯವರು ಸ್ಥಾಪಿಸಿದ ಲಕ್ಷ್ಮೀನಾರಾಯಣ ಸಂಗೀತ ಕಲಾಶಾಲೆ ಪ್ರಿಸ್ಸಿಪಾಲರ ಹುದ್ದೆ, ನೂರಾರು ವಿದ್ಯಾರ್ಥಿಗಳಿಗೆ ಮಾಡಿದ ವಿದ್ಯಾದಾನ. ೯ನೇ ವಯಸ್ಸಿನಲ್ಲೇ ನೀಡಿದ ಕಚೇರಿ. ಕರ್ನಾಟಕ ಆಂಧ್ರ, ತಮಿಳುನಾಡು, ಕೇರಳ, ಉತ್ತರಭಾರತ, ಬಂಗಾಳ, ಪಂಜಾಬ್ ಮುಂತಾದೆಡೆ ಏಕವ್ಯಕ್ತಿ ಹಾಗೂ ಪ್ರಸಿದ್ಧ ಸಂಗೀತಗಾರರಿಗೆ ನೀಡಿದ ವಾದನ ಸಹಕಾರ. ಮದರಾಸ್ ಮ್ಯೂಸಿಕ್ ಅಕಾಡಮಿ, ಬೆಂಗಳೂರು ಗಾಯನ ಸಮಾಜ, ಮೈಸೂರು ಕಲಾವರ್ಧಿನಿ ಸಭಾ, ವಿವೇಕ ಕಲ್ಚರಲ್ ಸೆಂಟರ್ ಮುಂತಾದೆಡೆ ನಡೆಸಿಕೊಟ್ಟ ಕಚೇರಿಗಳು. ಕರ್ನಾಟಕ ಸಂಗೀತ ನೃತ್ಯ ಅಕಾಡಮಿಯಿಂದ ಕರ್ನಾಟಕ ಕಲಾಶ್ರೀ ಮೈಸೂರಿನ ಪುರಂದರ, ತ್ಯಾಗರಾಜ ಆರಾಧನಾ ಸಮಿತಿಯಿಂದ ಸಂಗೀತ ಕಲಾತಪಸ್ವಿ, ಬೆಂಗಳೂರು ಗಾಯನ ಸಮಾಜದಿಂದ ವರ್ಷದ ಕಲಾವಿದ, ಮದರಾಸು ಮ್ಯೂಸಿಕ್ ಅಕಾಡಮಿಯಿಂದ ಎರಡುಬಾರಿ ಬೆಸ್ಟ್ ಮ್ಯೂಸಿಷಿಯನ್ ಪ್ರಶಸ್ತಿ, ಸಂಗೀತ ಕಲಾಸಿಂಧು, ನಾದ ಜ್ಯೋತಿ, ಪ್ರಣವಶ್ರೀ ಮುಂತಾದ ಪ್ರಶಸ್ತಿ ಗೌರವಗಳು. ಇದೇ ದಿನ ಹುಟ್ಟಿದ ಕಲಾವಿದರು : ಜಂತಲಿ ಆರ್.ಎಸ್. – ೧೯೨೩ ಬ್ರಹ್ಮಚಾರಿ ಬಿ.ಎನ್. – ೧೯೨೯ ಪಾಟೀಲ್ ಎಂ.ಬಿ. – ೧೯೩೯ ಲೀಲಾವತಿ ಎನ್. ಉಪಾಧ್ಯಾಯ – ೧೯೫೪ ಪದ್ಮರಾಜು ಡಿ. – ೧೯೬೦
* * *