ಕಾಳಪ್ಪ ಪತ್ತಾರ

Home/Birthday/ಕಾಳಪ್ಪ ಪತ್ತಾರ
Loading Events
This event has passed.

೨೮-೦೩-೧೯೧೬ ೦೫-೦೮-೧೯೭೧ ಸಂಗೀತ, ಚಿತ್ರಕಲೆ, ರಂಗಭೂಮಿ ಮುಂತಾದ ಹಲವಾರು ಪ್ರಕಾರಗಳಲ್ಲಿ ಪರಿಣತಿ ಪಡೆದಿದ್ದ ಕಾಳಪ್ಪ ಪತ್ತಾರ ರವರು ಹುಟ್ಟಿದ್ದು ರಾಯಚೂರು ಜಿಲ್ಲೆಯ ತಳಕಲ್ಲಿನ ಬಡ ವಿಶ್ವಕರ್ಮ ಕುಟುಂಬದಲ್ಲಿ. ಶಾಲಾ ಕಾಲೇಜಿನ ನಾಲ್ಕು ಗೋಡೆಗಳ ಮಧ್ಯೆ ಕುಳಿತು ಕಲಿತದ್ದಕ್ಕಿಂತ ವಿಶಾಲ ಪ್ರಪಂಚದಲ್ಲಿ ತಿರುಗಾಟದ ಅನುಭವದಿಂದ ಕಲಿತದ್ದೇ ಅಪಾರ. ೧೯೩೪ರಲ್ಲಿ ಗಾಂಧೀಜಿಯವರು ಕರ್ನಾಟಕ ಪ್ರವಾಸ ಕೈಗೊಂಡು ಬಳ್ಳಾರಿಯಿಂದ ರೈಲಿನಲ್ಲಿ ಗದಗಿಗೆ ಪ್ರಯಾಣಿಸುವಾಗ ಭಾನಾಪುರ ರೈಲು ನಿಲ್ದಾಣದಲ್ಲಿ ತಂಗಿದ್ದಾಗ ಗಾಂಧೀಜಿಯವರ ಚಿತ್ರವನ್ನು ಅಲ್ಲೇ ಬರೆದು ಅರ್ಪಿಸಿದರಂತೆ. ಕಲಾಭಿಜ್ಞತೆಗೆ ಮಾರುಹೋಗಿ ತಮ್ಮ ಭಾವಚಿತ್ರವನ್ನು ಹರಾಜು ಹಾಕಿ ಬಂದ ಹಣವನ್ನು ಹರಿಜನ ನಿಧಿಗೆ ಸೇರಿಸಿದರಂತೆ. ಬಾಲ್ಯದ ನೆನಪಿನಿಂದಲೇ ಆಗಿಹೋಗಿದ್ದ ಸಂತ ಅಜ್ಜಾರಾಮರ ಚಿತ್ರ ಬರೆದು ಮಠಕ್ಕೆ ಕೊಟ್ಟಿದ್ದು, ಹೈದರಾಬಾದ್ ನಿಜಾಮ ಸಂಬಂಧಿ ಸಾಲಾರಜಂಗರಿಂದಲೂ ದೊರೆತ ಪ್ರಶಂಸೆ. ಸಂತ, ಮಹಾತ್ಮ, ಮಹಾರಾಜರೆನ್ನದೆ ಸಾಮಾನ್ಯರ ಚಿತ್ರಗಳನ್ನೂ ಬಿಡದೆ ರಚನೆ. ಶೃಂಗೇರಿ ಮಠಕ್ಕಾಗಿ ಲಕ್ಷ್ಮೀ, ಶಾರದೆ, ಕೃಷ್ಣರ ಬಂಗಾರದ ಮೂರ್ತಿ, ಪೂಜಾ ಸಾಮಗ್ರಿಗಳ ಸಂಪುಟ, ಮಣ್ಣು, ಹಿತ್ತಾಳೆ, ಬೆಳ್ಳಿ ಮುಂತಾದುವುಗಳಿಂದಲೂ ಕೃತಿ ರಚನೆ. ರಂಗಭೂಮಿ ಪ್ರೀತಿಯ ಮತ್ತೊಂದು ಕ್ಷೇತ್ರ. ಯಲಬುರ್ಗಿ, ಕೊಪ್ಪಳ, ಗಂಗಾವತಿ ತಂಡಗಳು ಅಭಿನಯಿಸುತ್ತಿ‌ದ್ದ ನಾಟಕಗಳಿಗೆ ನೀಡಿದ ಸಂಗೀತ. ತಳಕಲ್ಲಿನ ಪ್ರಸಿದ್ಧ ರೆಡ್ಡಿ ಕಂಪನಿ, ಹಮ್ಮಿಗಿ ನೀಲಕಂಠಪ್ಪನವರ ಭುವನೇಶ್ವರಿ ನಾಟ್ಯ ಸಂಘ ಮುಂತಾದುವುಗಳಲ್ಲಿ ನಾರದ, ಕೃಷ್ಣನ ಪಾತ್ರ. ತಬಲ ವಾದಕರಾಗಿ ತೋರಿದ ಅಪ್ರತಿಮ ಪ್ರತಿಭೆ, ಹಿಂದೂಸ್ತಾನಿ ಗಾಯಕರಾದ ಮಲ್ಲಿಕಾರ್ಜುನ ಮನಸೂರರ, ಹೇಮರೆಡ್ಡಿ ನಾಟಕಕ್ಕೆ ತಬಲವಾದನ, ಭೀಮಸೇನ ಜೋಶಿ, ಗಂಗೂಬಾಯಿ ಹಾನಗಲ್, ಕುಮಾರ ಗಂಧರ್ವ ಮೊದಲಾದವರಿಗೆ ನೀಡಿದ ತಬಲ ಸಾಥಿ. ಪ್ರಸಿದ್ಧರ ನಡುವೆ ಇದ್ದರೂ ಪ್ರಚಾರ ಬಯಸದೆ ನೇಪಥ್ಯದಲ್ಲೆ ಸರಿದು ಹೋದ ವ್ಯಕ್ತಿ.   ಇದೇ ದಿನ ಹುಟ್ಟಿದ ಕಲಾವಿದರು : ಶರಣಪ್ಪ ಜಿ. ಶೆಟಗಾರ – ೧೯೫೧ ವಾಗೀಶ್ ಭಟ್ – ೧೯೫೮ ಸಿಂಧೆ ಡಿ.ಕೆ. – ೧೯೫೯ * * *

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top