Loading Events

« All Events

  • This event has passed.

ಕಾಸರಗೋಡು ಚಿನ್ನ

September 11

೧೧.೦೯.೧೯೫೭ ಕಾಸರಗೋಡಿನಲ್ಲಿ ಕನ್ನಡ ಸಂಸ್ಕೃತಿಯ ಬೆಳವಣಿಗೆಗೆ ಅಪಾರವಾಗಿ ಶ್ರಮಿಸುತ್ತಿರುವ ಶ್ರೀನಿವಾಸರಾವ್‌ ಸುಜೀರ್‌ (ಕಾಸರಗೋಡು ಚಿನ್ನ) ಜನಿಸಿದ್ದು ಕಾಸರಗೋಡು. ತಂದೆ ಶೇಷಗಿರಿ ನಾಯಕ್, ತಾಯಿ ಪದ್ಮಾವತಿ ನಾಯಕ್. ಬಾಲ್ಯದಿಂದಲೇ ಬೆಳೆದ ನಾಟಕಾಸಕ್ತಿ. ಶಾಲಾ ಕಾಲೇಜು ನಾಟಕಗಳಲ್ಲಿ ಅಭಿನಯ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗಿ. ಆದರ್ಶ ಫಿಲಂ ಇನ್ಸ್ಟಿಟ್ಯೂಟ್‌ನಿಂದ ಚಿನ್ನದ ಪದಕದೊಡನೆ ಗಳಿಸಿದ ರ‍್ಯಾಂಕ್‌. ಅಭಿನಯಿಸಿದ ಮೊದಲ ನಾಟಕ ತಾಳಿ ಕಟ್ಟೋಕೆ ತಯಾರ್, ಕನ್ನಡ, ಕೊಂಕಣಿ, ತುಳು, ಮಲೆಯಾಳಂ, ಇಂಗ್ಲಿಷ್‌ ಭಾಷೆಗಳಲ್ಲಿ ೫೦೦ ಕ್ಕೂ ಹೆಚ್ಚು ಪ್ರದರ್ಶನ. ತುಳು, ಇಂಗ್ಲಿಷ್, ಮಲೆಯಾಳಂ, ಕೊಂಕಣಿ, ಕನ್ನಡ ನಾಟಕಗಳಲ್ಲಿ ಪ್ರಮುಖ ಪಾತ್ರ ಮತ್ತು ನಿರ್ದೇಶನ. ಕೌನ್ಸಿಲರ್‌ ಕೊಗ್ಗಣ್ಣೆ, ಸೀಂಕ್ರನ ಕಿತಾಪತಿ, DUMB WIFE OF CHEAPSIDE, REFUND, ಡ್ರಾಕುಲ, ದೋನಿಘಡಿ ಹಾಸ್ಸೂನು ರೌಡಿ, ಜಾಕ್‌ಪೋಟ್‌ಜೆನ್ನ, ಶಾಂತಿನಿವಾಸ, ನಾಯಿಗಳು, ಪ್ರಶ್ನೆ, ಸಿದ್ಧತೆ, ಕುರುಡು ಕಾಂಚಾಣ, ಗಣಗಣರಾಜ್ಯ ಮುಂತಾದುವು. ಪ್ರಪ್ರಥಮವಾಗಿ ಲಾರಿಯ ಮೇಲೆ ನಾಟಕ ಪ್ರದರ್ಶಿಸಿ ರಂಗಭೂಮಿಗೆ ಕೊಟ್ಟ ವಿನೂತನ ಶೈಲಿ. ಗಡಿ ಪ್ರದೇಶದಲ್ಲಿ ಗೀತ ಸಂಗೀತ ರಥ, ಯಕ್ಷಗಾನದ ಯಕ್ಷತೇರು ಇವರ ವಿಶಿಷ್ಟ ಸಾಧನೆಗಳು. ಹಲವಾರು ರಂಗಸಂಸ್ಥೆಗಳ ಸಂಚಾಲಕ, ನಿರ್ದೇಶಕ, ಸಲಹೆಗಾರ, ಕಾರ್ಯದರ್ಶಿ. ಸಂಗೀತ ನಾಟಕ ಅಕಾಡೆಮಿಯ ಸದಸ್ಯರಾಗಿ ಸೇವೆ. ಕನ್ನಡ, ತುಳು, ಕೊಂಕಣಿ ಭಾಷೆಯ ’ಬಿ’ ಹೈಗ್ರೇಡ್‌ ಕಲಾವಿದ. ಆಕಾಶವಾಣಿ ನಾಟಕಗಳಲ್ಲಿ ಪಾತ್ರಧಾರಿ. ಹಿಂದಿ ಧಾರವಾಹಿ, ಟೆಲಿಚಿತ್ರ, ಕನ್ನಡ ಧಾರವಾಹಿಗಳ ನಟ, ಫಣಿಯಮ್ಮ, ಕೆಂಡದ ಮಳೆ, ಆಸ್ಫೋಟ, ಮೈಸೂರು ಮಲ್ಲಿಗೆ ಮುಂತಾದ ಚಲನಚಿತ್ರಗಳಲ್ಲೂ ಅಭಿನಯ. ರಾಜ್ಯಮಟ್ಟದ ಹಲವಾರು ನಾಟಕ ಸ್ಪರ್ಧೆಗಳಲ್ಲಿ ಉತ್ತಮ ನಟನೆ, ನಿರ್ದೇಶನಕ್ಕಾಗಿ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ದುಬಾಯಿ ತುಳುಕೂಟ, ಬೆಹ್ರೈನ್‌ ಕನ್ನಡ ಕೂಟ ಮುಂತಾದ ವಿದೇಶಿ ಕನ್ನಡ ಸಂಸ್ಥೆಗಳಿಂದ ಸನ್ಮಾನ. ಇದೀಗ ಐವತ್ತು ತುಂಬಿದ ಸಂದರ್ಭದಲ್ಲಿ ಹುಟ್ಟು ಹಬ್ಬಕ್ಕಾಗಿ ಮಂಗಳೂರಿನಲ್ಲಿ ಹಿತೈಷಿಗಳಿಂದ ತ್ರಿಭಾಷಾ ನಾಟಕೋತ್ಸವ.   ಇದೇ ದಿನ ಹುಟ್ಟಿದ ಕಲಾವಿದ ಅನಂತ್‌ ಎಸ್.ವಿ. – ೧೯೩೫

* * *

Details

Date:
September 11
Event Category: