೦೮.೪.೧೯೨೪ ೧೨.೧.೧೯೯೨ ಹಿಂದೂಸ್ತಾನಿ ಸಂಗೀತದ ಅದ್ಭುತ ತಾರೆ ಎನಿಸಿದ್ದ ಕುಮಾರಗಂಧರ್ವರು ಹುಟ್ಟಿದ್ದು ಬೆಳಗಾವಿ ಜಿಲ್ಲೆಯಸೂಳೆಭಾವಿ. ತಂದೆ ಸಿದ್ಧರಾಮಯ್ಯ, ಸ್ವತಃ ಸಂಗೀತಗಾರರು. ಹುಟ್ಟಿನಿಂದಲೇ ಬಂದ ಸಂಗೀತ ಕಲೆ. ಐದು ವರ್ಷದವನಾಗಿದ್ದಾಗಲೇ ದಾವಣಗೆರೆಯಲ್ಲಿ ನೀಡಿದ ಪ್ರಥಮ ಕಚೇರಿ. ಹನ್ನೊಂದನೆಯ ವಯಸ್ಸಿನಲ್ಲಿ ಅಲಹಾಬಾದ್ನಲ್ಲಿ ನಡೆದ ಸಂಗೀತ ಸಮ್ಮೇಳನದಲ್ಲಿ. ಕಾಫಿ ರಾಗವನ್ನು ಅರ್ಧಗಂಟೆ ಹಾಡಿ ಶೋತೃಗಳನ್ನು ಮಂತ್ರಮುಗ್ಧರನ್ನಾಗಿಸಿದಾಗ ಸುಮಾರು ೧೫ ನಿಮಿಷ ಚಪ್ಪಾಳೆಸುರಿಮಳೆ. ಸಂಗೀತ ಸಮ್ಮೇಳನಾಧ್ಯಕ್ಷರಾದ ತೇಜ್ ಬಹದ್ದೂರ್ ಸಪ್ರುರವರಿಂದ ಸ್ವರ್ಣಪದಕ ಪಡೆದುದಲ್ಲದೆ ಬಾಚಿತಬ್ಬಿಕೊಂಡು ಶೋತೃಗಳು ನೀಡಿದ ಕಾಣಿಕೆ. ಹೆಚ್ಚಿನ ಸಂಗೀತ ಕಲಿಕೆಗೆ ಸೇರಿದ್ದು ಮುಂಬಯಿಯ ಪ್ರೊ.ಬಿ.ಆರ್. ದೇವಧರ್ರವರ ಸ್ಕೂಲ್ ಆಫ್ ಇಂಡಿಯನ್ ಮ್ಯೂಸಿಕ್. ಸುಮಾರು ಹತ್ತು ವರ್ಷಕಾಲ ಸತತ ಅಭ್ಯಾಸ. ನಂತರ ಕಲಿತದ್ದು ಅಂಜನಿಬಾಯಿ ಮಾಲ್ಪೆಕರದಲ್ಲಿ. ಸಂಗೀತದ ದೃಷ್ಟಿಬದಲಾದುದೇ ಇಲ್ಲಿ. ಸಂಗೀತದ ಪ್ರತಿಯೊಂದು ಸ್ವರದ ತಾತ್ವಿಕರೂಪದ ಬೋಧನೆ, ಮನನ, ತಾಲೀಮು. ಭೂಪಾಲ ಸಂಗೀತ ಸಮ್ಮೇಳನಕ್ಕೆ ಹೋದಾಗ ಗಂಗೂಬಾಯಿ ಹಾನಗಲ್ಲ, ಭೀಮಸೇನಜೋಶಿ, ಓಂಕಾರನಾಥ್ಠಾಕೂರ್, ಇವರಿಗೆ ಒಂದೆಡೆವಸತಿ. ಕೊಠಡಿಯಲ್ಲಿ ಕುಳಿತು ಓಂಕಾರನಾಥರ ಅನುಕರಣೆ ಮಾಡಿ ಹಾಡಿ ಅಲ್ಲಿದ್ದವರಿಗೆ ಮೂಡಿಸಿದ ದಿಗ್ಭ್ರಮೆ. ೧೯೪೭ರಲ್ಲಿ ಬಂದೆರಗಿದ ದುರಂತ. ಪಪ್ಪುಸ ಕ್ಷಯ. ಮಾತನಾಡಲೂ ಬಾರದೆಂದು ವೈದ್ಯರ ಕಟ್ಟಾಜ್ಞೆ, ಅನಾರೋಗ್ಯವನ್ನೇ ವರವಾಗಿಸಿಕೊಂಡು ಮಾಡಿದ ಸಂಗೀತ ಸಾಧನೆ. ಪುನಃ ಹಾಡಿದ್ದು ಅಲಹಾಬಾದ್ ಪ್ಯಾಲೇಸ್ ಥಿಯೇಟರಿನಲ್ಲಿ. ಪಡೆದ ಸಂಗೀತದ ಪುನರ್ಜನ್ಮ. ಅಸ್ತಿತ್ವದಲ್ಲಿದ್ದ ರಾಗಗಳ ಜೊತೆಗೆ ತಮ್ಮದೇ ರಾಗಗಳನ್ನು ಋತುಮಾನಕ್ಕನುಗುಣವಾಗಿ ಹಾಡುವ ವಿಶಿಷ್ಟಗಾಯಕ . ಗೀತವರ್ಷ(ಮಳೆಗಾಲ), ಗೀತ ಹೇಮಂತ(ಚಳಿಗಾಲ) ಗೀತವಸಂತ(ವಸಂತಕಾಲ). ’ತ್ರಿವೇಣಿ’ಯು ನೂರದಾಸ, ಕಬೀರದಾಸ, ಮೀರಭಜನೆಗಳ ಗುಚ್ಛ ಅವರ ಕಾಲ, ಪರಿಸರ, ಘಟನೆಗಳ ವ್ಯಾಪಕ ಅಧ್ಯಯನಮಾಡಿ ಭಾವನಾತ್ಮಕವಾಗಿ ಹಾಡುತ್ತಿದ್ದ ರೀತಿ. ೧೯೬೫ರಲ್ಲಿ ಪ್ರಕಟಿಸಿದ್ದು ’ಅನೂಪರಾಗವಿಲಾಸ’ ಹತ್ತು ವರ್ಷಗಳ ಸಂಶೋಧನೆಯ ಫಲ. ಹಲವಾರು ರಾಗಗಳ ಹೊಸ ಪ್ರಯೋಗ. ಸಂದ ಪ್ರಶಸ್ತಿಗೌರವಗಳಿಗೆ ಲೆಕ್ಕವಿಲ್ಲ. ಉಜ್ಜಯಿನಿ ವಿಕ್ರಮ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಕೇಂದ್ರ ಸಂಗೀತನಾಟಕ ಅಕಾಡಮಿ ಪುರಸ್ಕಾರ, ಪದ್ಮವಿಭೂಷಣ, ಕಾಳಿದಾಸ ಸಮ್ಮಾನ ಮುಂತಾದುವು. ಇದೇದಿನಹುಟ್ಟಿದಕಲಾವಿದರು ಅಪ್ಪಗೆರೆ ತಿಮ್ಮರಾಜು-೧೯೫೫ ನಂದಿನಿ ಕೆ.ಮೆಹ್ರಾ-೧೯೬೫ ಚಂದ್ರಶೇಖರ್.ಎ.ಪಿ-೧೯೬೮
* * *