ಕುವೆಂಪು

Home/Birthday/ಕುವೆಂಪು
Loading Events

೨೯-೧೨-೧೯೦೪ ೧೦-೧೧-೧೯೯೪ ರಾಷ್ಟ್ರಕವಿ ಕುವೆಂಪುರವರು ಹುಟ್ಟಿದ್ದು ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳಿಯಲ್ಲಿ. ತಂದೆ ವೆಂಕಟಪ್ಪ, ತಾಯಿ ಹಿರೇಕೂಡಿಗೆಯವರಾದ ಸೀತಮ್ಮ. ಪ್ರಾರಂಭಿಕ ಶಿಕ್ಷಣ ತೀರ್ಥಹಳ್ಳಿ. ಕಾಲೇಜು ವಿದ್ಯಾಭ್ಯಾಸ ಮೈಸೂರು. ೧೯೨೭ರಲ್ಲಿ ಬಿ.ಎ, ೧೯೨೯ರಲ್ಲಿ ಎಂ.ಎ. ಪದವಿ ಪಡೆದು ಓದಿದ ಮೈಸೂರು ಮಹಾರಾಜಾ ಕಾಲೇಜಿನಲ್ಲೇ ಅಧ್ಯಾಪಕ ವೃತ್ತಿ ಪ್ರಾರಂಭಿಸಿ ೧೯೫೫ರಲ್ಲಿ ಪ್ರಾಂಶುಪಾಲರಾಗಿ, ೧೯೫೬-೬೦ರವರೆಗೆ ಮೈಸೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಕಾರ‍್ಯ ನಿರ್ವಹಣೆ. ಬಾಲ್ಯದಿಂದಲೂ ಇಂಗ್ಲಿಷ್ ಭಾಷೆ, ಛಂದಸ್ಸು ಮೇಲಣ ಪ್ರಭುತ್ವ. ೧೯೨೨ರಲ್ಲಿ ಇಂಗ್ಲಿಷ್ ಕವನ ಸಂಕಲನ ಬಿಗಿನರ್ಸ್‌ ಮ್ಯೂಸ್ ಪ್ರಕಟಿತ. ಓದಿದ ಐರಿಷ್ ಕವಿ ಜೇಮ್ಸ್ ಕಸಿನ್ಸ್‌ರವರಿಂದ ದೊರೆತ ಪ್ರಶಂಸೆ. ಕನ್ನಡದಲ್ಲಿ ಕಾವ್ಯ ರಚಿಸಲು ಪ್ರೋತ್ಸಾಹ. ‘ಏಪ್ರಿಲ್’ ಎಂಬ ಕವನದ ಅನುವಾದ ಚೈತ್ರವೈಶಾಖ. ಮೊದಲ ಕವನ ಸಂಕಲನ ಅಮಲನಕಥೆ. ೧೯೨೪ರಲ್ಲಿ ಪ್ರಕಟಿತ. ಬೊಮ್ಮನಹಳ್ಳಿ ಕಿಂದರಿ ಜೋಗಿ, ಕೊಳಲು, ಕೃತ್ತಿಕೆ, ಅಗ್ನಿಹಂಸ, ಕಥನ ಕವನಗಳು, ಕಲಾ ಸುಂದರಿ, ನವಿಲು, ಪಕ್ಷಿಕಾಶಿ, ಶ್ರೀರಾಮಾಯಣ ದರ್ಶನಂ ಮಹಾಕಾವ್ಯವೂ ಸೇರಿ ೩೦ಕ್ಕೂ ಹೆಚ್ಚು ಕಾವ್ಯ ಕೃತಿಗಳು. ನಾಟಕ-ಜಲಗಾರ, ಯಮನಸೋಲು, ವಾಲ್ಮೀಕಿ ಭಾಗ್ಯ ಸ್ಮಶಾನ ಕುರುಕ್ಷೇತ್ರ, ಮಹಾರಾತ್ರಿ, ರಕ್ತಾಕ್ಷಿ, ಬಿರುಗಾಳಿ, ಬೆರಳ್‌ಗೆ ಕೊರಳ್, ಶೂದ್ರ ತಪಸ್ವಿ, ಬಲಿದಾನ, ಚಂದ್ರಹಾಸ. ಕಾದಂಬರಿ-ಕಾನೂರು ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು. ಕಥಾಸಂಕಲನ-ಸಂನ್ಯಾಸಿ ಮತ್ತು ಇತರ ಕಥೆಗಳು, ಮಲೆನಾಡಿನ ಚಿತ್ರಗಳು. ವಿಮರ್ಶೆ/ಕಾವ್ಯ ಮೀಮಾಂಸೆ-ಕಾವ್ಯ ವಿಹಾರ, ತಪೋನಂದನ, ವಿಭೂತಿ ಪೂಜೆ, ದ್ರೌಪದಿಯ ಶ್ರೀಮುಡಿ, ರಸೋವೈಸಃ. ಜೀವನಚರಿತ್ರೆ-ಸ್ವಾಮಿ ವಿವೇಕಾನಂದ, ಶ್ರೀರಾಮಕೃಷ್ಣ ಪರಮಹಂಸ. ಶಿಶುಸಾಹಿತ್ಯ-ನನ್ನ ಗೋಪಾಲ, ಮೋಡಣ್ಣನ ತಮ್ಮ, ನನ್ನ ಮನೆ, ಮರಿವಿಜ್ಞಾನಿ ಮೊದಲ್ಗೊಂಡು ೭೫ಕ್ಕೂ ಹೆಚ್ಚು ಕೃತಿ ಪ್ರಕಟಿತ. ಸಂದ ಪ್ರಶಸ್ತಿಗಳಿಗೆ ಲೆಕ್ಕವಿಲ್ಲ. ೧೯೫೭ರ ಧಾರವಾಡದ ೩೯ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರಿಂದ ಹಿಡಿದು ಹಲವಾರು ಸಮ್ಮೇಳನಗಳ ಅಧ್ಯಕ್ಷತೆ. ರಾಜ್ಯ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಪದ್ಮಭೂಷಣ, ವರ್ಧಮಾನ ಪ್ರಶಸ್ತಿ, ಪಂಪ ಪ್ರಶಸ್ತಿ, ಜ್ಞಾನಪೀಠ ಪ್ರಶಸ್ತಿ, ರಾಷ್ಟ್ರಕವಿ ಪ್ರಶಸ್ತಿ, ಮೈಸೂರು, ಕರ್ನಾಟಕ, ಬೆಂಗಳೂರು, ಗುಲಬರ್ಗಾ ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್ ಮೊದಲಾದ ಹಲವಾರು ಪ್ರಶಸ್ತಿಗಳು.   ಇದೇ ದಿನ ಹುಟ್ಟಿದ ಸಾಹಿತಿಗಳು : ಡಿ.ಕೆ. ಭಾರದ್ವಾಜ್ – ೧೮೯೧ ದೇವುಡು ನರಸಿಂಹಶಾಸ್ತ್ರಿ – ೧೮೯೬ ಸಿ. ಅಶ್ವತ್ಥ್  – ೧೯೩೯

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top