
- This event has passed.
ಕೆ.ಎಂ. ರಾಮನ್
October 20
೨೦.೧೦.೧೯೩೦ ನೃತ್ಯಕ್ಷೇತ್ರದ ಕಲಾತಪಸ್ವಿ ಎನಿಸಿರುವ ಕೆ.ಎಂ. ರಾಮನ್‌ರವರು ಹುಟ್ಟಿದ್ದು ಕೇರಳ ನೀಲೇಶ್ವರದಲ್ಲಿ. ತಂದೆ ಕೆ.ಎಂ. ಕೃಷ್ಣಯೋಗಿ, ತಾಯಿ ಉಂಡಚ್ಚಿಯಮ್ಮ. ೯ನೇ ವಯಸ್ಸಿನಲ್ಲೇ ಮೈಸೂರಿನ ಪ್ರಖ್ಯಾತ ನೃತ್ಯಪಟು ರಾಜಗೋಪಾಲ್‌ರ ಬಳಿ ಕಥಕ್ಕಳಿ ಸಂಪ್ರದಾಯಬದ್ಧ ನೃತ್ಯಾಭ್ಯಾಸ. ಬೆಂಗಳೂರಿನ ವಿಶ್ವಮಾನ್ಯ ನೃತ್ಯಪಟು ಯು.ಎಸ್.ಕೃಷ್ಣರಾವ್ ಮತ್ತು ಚಂದ್ರಭಾಗಾ ದೇವಿಯವರಲ್ಲಿ ಪಂದನೂರು ಶೈಲಿಯ ಭರತನಾಟ್ಯದ ಶಿಕ್ಷಣ. ೧೯೬೨ರಲ್ಲಿ ತುಮಕೂರಿನಲ್ಲಿ ಪ್ರಾರಂಭಿಸಿದ ರಾಜರಾಜೇಶ್ವರಿ ನೃತ್ಯ ಕಲಾಮಂದಿರ, ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಲಿ ನಡೆಸುವ ಜ್ಯೂನಿಯರ್, ಸೀನಿಯರ್, ವಿದ್ವತ್ ಪರೀಕ್ಷೆಗಳಲ್ಲಿ ರ‍್ಯಾಂಕ್‌ಪಡೆದ ಶಿಷ್ಯರು. ಹಲವಾರು ಶಿಷ್ಯರಿಗೆ ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆ, ಸಂಗೀತ ನೃತ್ಯ ಅಕಾಡಮಿಯಿಂದ ದೊರೆತ ಫೆಲೋಷಿಪ್. ಬೆಂಗಳೂರು ದೂರದರ್ಶನದ ಎ ಶ್ರೇಣಿ ಕಲಾವಿದರು. ಅನೇಕ ನೃತ್ಯ ಕಾರ್ಯಕ್ರಮಗಳ ಪ್ರಸಾರ. ಶಿವರಾತ್ರಿಯಂದು ನೀಡಿದ ಮಹಾಶಿವರಾತ್ರಿ ನೃತ್ಯರೂಪಕ ಅಪಾರ ಜನಮನ್ನಣೆ ಗಳಿಸದ ಕಾರ್ಯಕ್ರಮ. ಭಾರತಾದ್ಯಂತ ನೀಡಿದ ೩೦೦ಕ್ಕೂ ಹೆಚ್ಚು ಕಾರ್ಯಕ್ರಮಗಳು. ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರಾಗಿ ಸಲ್ಲಿಸಿದ ಸೇವೆ. ಕರ್ನಾಟಕ ಸಂಗೀತ ನೃತ್ಯ ಅಕಾಡಮಿಯಿಂದ ಕರ್ನಾಟಕ ಕಲಾತಿಲಕ, ರಾಜ್ಯೋತ್ಸವ ಪ್ರಶಸ್ತಿ, ಶ್ರೇಷ್ಟನಾಟ್ಯಾಚಾರ್ಯ, ನಾಟ್ಯ ಕಲಾಪ್ರವೀಣ ಪ್ರಶಸ್ತಿ, ಹುಟ್ಟೂರು ಕೇರಳದ ನೀಲೇಶ್ವರದಲ್ಲಿ ಚಿನ್ನದ ತೋಡ ತೊಡಿಸಿ ನಾಟ್ಯಶ್ರೀ ಬಿರುದು, ಮೈಸೂರಿನ ಭಾರತೀಯ ನೃತ್ಯ ಕಲಾಪರಿಷತ್‌ನಿಂದ ನೃತ್ಯವಿದ್ಯಾನಿಧಿ ಪ್ರಶಸ್ತಿ, ಇಂದರಾಗಾಂಧಿ ೮೫ನೇ ಹುಟ್ಟು ಹಬ್ಬದ ಸಂದರ್ಭದಲ್ಲಿ ರಾಷ್ಟ್ರೀಯ ರತ್ನ ಪ್ರಶಸ್ತಿ ಮುಂತಾದುವು. ಇದೇದಿನಹುಟ್ಟಿದಕಲಾವಿದರು ಸದಾನಂದ ಎನ್. – ೧೯೨೦ ಎಚ್.ಕೆ. ರೆಡಿ – ೧೯೩೬ ರಾಜನಾರಾಯಣ್ ಜಿ. – ೧೯೪೮ ಶಶಿಕಲಾ ಡಿ. – ೧೯೫೧ ಜಯರಾಂ ಎಂ.ಎಸ್. – ೧೯೫೫
* * *