ಕೆ.ಕೆ.ಹೆಬ್ಬಾರ್‌

Home/Birthday/ಕೆ.ಕೆ.ಹೆಬ್ಬಾರ್‌
Loading Events

೧೫.೦.೧೯೧೧ ೨೬.೦.೧೯೯೬ ಭಾರತೀಯ ಚಿತ್ರಕಲಾವಿದರಲ್ಲಿ ಚಿಂತನಶೀಲ ಕಲಾವಿದರೆಂದೇ ಪ್ರಖ್ಯಾತರಾಗಿದ್ದ ಕೃಷ್ಣ ಹೆಬ್ಬಾರರು ಹುಟ್ಟಿದ್ದು ಉಡುಪಿಯ ಬಳಿಯ ಕಟ್ಟಂಗೇರಿ. ತಂದೆ ನಾರಾಯಣ ಹೆಬ್ಬಾರ, ತಾಯಿ ಸೀತಮ್ಮ. ಉಡುಪಿಯ ಮಿಷನ್ ಹೈಸ್ಕೂಲಿನಲ್ಲಿ ವಿದ್ಯಾಭ್ಯಾಸ. ಉಡುಪಿಯ ದೇವಸ್ಥಾನಗಳಲ್ಲಿ ಕಂಡ ರವವಿರ್ಮನ ಚಿತ್ರಗಳಿಂದ ಪ್ರೇರಣೆ. ತಂದೆಯ ಅಕಾಲ ಮರಣದಿಂದ ಆದ ಅತಂತ್ರ ಬದುಕು. ಧೃತಿಗೆಡದೆ ಕಲಾಭ್ಯಾಸಕ್ಕೆ ಸೇರಿದ್ದು ಮೈಸೂರಿನ ಚಾಮರಾಜೇಂದ್ರ ಟೆಕ್ನಿಕಲ್ ಇನ್‌‌ಸ್ಟಿಟ್ಯೂಟ್. ಶಿಕ್ಷಣ ರೀತಿ ಹಿಡಿಸದೆ ಸೇರಿದ್ದು ಮುಂಬಯಿಯ ಜೆ.ಜೆ. ಕಲಾಶಾಲೆ, ಪಡೆದ ಡಿಪ್ಲೊಮ ಪದವಿ. ಬೌದ್ಧ ಸಂಸ್ಕೃತಿಯನ್ನು ಬಿಂಬಿಸುವ ಎರಡನೆಯ ಶತಮಾನದ ಕಾರ್ಲಿಗುಹೆಗಳನ್ನು ಸಂದರ್ಶಿಸಿ ಬರೆದ ಚಿತ್ರಕ್ಕೆ ೧೯೪೧ ರಲ್ಲಿ ಕೋಲ್ಕತ್ತಾದ ಅಕಾಡಮಿ ಆಫ್ ಫೈನ್ ಆರ್ಟ್ಸ್ ನಿಂದ ದೊರೆತ ಚಿನ್ನದ ಪದಕ. ೧೯೩೯ರಲ್ಲಿ ಉದ್ಯೋಗಕ್ಕೆ ಸೇರಿದ್ದು, ಕಲಿತ ಜೆ.ಜೆ. ಕಲಾಶಾಲೆಯಲ್ಲೇ ಅಧ್ಯಾಪಕರಾಗಿ, ಸಾಮಾಜಿಕ ಪರಿಸರಕ್ಕೆ ತೀಕ್ಷ್ಣವಾದ ಮಾನವೀಯ ನೆಲೆಯಲ್ಲಿ ಸ್ಪಂದಿಸುವ ಚಿತ್ರಗಳ ರಚನೆ. ಮುಂಬಯಿಯ ಬಳಿಯ ಬೆಹರಾಂ ಪಾಡಾದಲ್ಲಿ ನಡೆದ ಜಾತೀಯ ಹತ್ಯಾಕಾಂಡದ ನೋವಿನಿಂದ ಬರೆದ ಚಿತ್ರಗಳು. ಹಸಿವು, ಭಿಕ್ಷುಕರು, ನಿರಾಶ್ರಿತರು, ಶೆಲ್ಟರ್ರ್‌‍ (ನೀರಿನ ದೊಡ್ಡ ದೊಡ್ಡ ಕೊಳಾಯಿಗಳಲ್ಲಿ ವಾಸಿಸುವ), ಹೊಲೋಕ್ಯಾಫ್ಲೈ (ಹಿರೋಷಿಮಾದ ಅಣುಬಾಂಬಿನಿಂದ ಸರ್ವನಾಶವನ್ನು ನೆನಪಿಸುವ), ಹೀಗೆ ನೋವು, ಹಸಿವು, ಕ್ರೌರ್ಯ, ಬಡತನ ಇವುಗಳೇ ಹೆಬ್ಬಾರರ ರಚನೆಯ ವಸ್ತುಗಳು. ಟು ಮೈಡನ್ ಹುಡ್ ಚಿತ್ರಕ್ಕೆ ಮುಂಬಯಿ ಆರ್ಟ್ ಸೊಸೈಟಿಯ ಚಿನ್ನದ ಪದಕ, ಇವರ ಕಲಾಪರಿಶ್ರಮಕ್ಕೆ ಕೇಂದ್ರ ಸರಕಾದಿಂದ ದೊರೆತ ೨೫೦೦ ರೂ ಬಹುಮಾನ, ಪುರಸ್ಕಾರ. ಹೆಚ್ಚಿನ ಕಲಾಭ್ಯಾಸ, ಅಧ್ಯಯನಕ್ಕಾಗಿ ಯೂರೋಪಿನತ್ತ ಪ್ರವಾಸ. ಪ್ಯಾರಿಸ್ಸಿನ ಅಕಾಡಮಿಯ ಜ್ಯೂಲಿಯನ್‌ನಲ್ಲಿ ಪ್ರೊ. ಕಾವೈಲ್ಸ್ ಬಳಿ ಅಧ್ಯಯನ, ಪುನಃ ೧೯೫೩ ರಲ್ಲಿ ಸಾಂಸ್ಕೃತಿಕ ತಂಡದ ಸದಸ್ಯರಾಗಿ ಯೂರೋಪಿನ ಪೂರ್ವ ಪಶ್ಚಿಮ ರಾಷ್ಟ್ರಗಳ ಸಂದರ್ಶನ. ‘ಬರ್ತ್ ಆಫ್ ಪೊಯಿಟ್ರಿ’ ರಾಮಾಯಣದ ರಚನೆಯನ್ನು ಸಂಕೇತಿಸುವ ಚಿತ್ರ, ಕಲಾ ಪಂಡಿತರ ಮೆಚ್ಚುಗೆ ಪಡೆದದ್ದು. ಮಾಹೀಂದರ್ಗಾ ಚಿತ್ರಕ್ಕೆ ೧೯೫೫ ರಲ್ಲಿ ಲಲಿತ ಕಲಾ ಅಕಾಡಮಿ ಬಹುಮಾನ. ಜೋಪಡಿಗಳಲ್ಲಿ ಗಣೇಶೋತ್ಸವ, ರ‍್ಯಾಗ್‌ಪಿಕರ್ಸ್, ಮುಂಬಯಿಯ ಕೋಮು ಗಲಭೆ ಮುಂತಾದ ಚಿತ್ರಗಳ ರಚನೆ. ಕೇಂದ್ರ ಹಾಗೂ ರಾಜ್ಯ ಲಲಿತ ಕಲಾ ಅಕಾಡಮಿ ಅಧ್ಯಕ್ಷ ಪದವಿ. ಭಾರತ ಸರಕಾರದ ಪದ್ಮಶ್ರೀ, ಪದ್ಮ ಭೂಷಣ, ಸೋವಿಯತ್ ಲ್ಯಾಂಡ್ ನೆಹರು ಪ್ರಶಸ್ತಿ, ಕರ್ನಾಟಕ ಲಲಿತ ಕಲಾ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಕಲಾವಿದ ವೆಂಕಟಪ್ಪ ಪ್ರಶಸ್ತಿ, ಮೈಸೂರು ವಿ.ವಿ.ದ ಗೌರವ ಡಾಕ್ಟರೇಟ್ ಮುಖ್ಯವಾದ ಪ್ರಶಸ್ತಿ ಗರಿಗಳು.   ಇದೇ ದಿನ ಹುಟ್ಟಿದ ಕಲಾವಿದರು ಪಿ.ಬಿ.ಧುತ್ತರಗಿ – ೧೯೨೮ ಪರಮೇಶ್ವರಪ್ಪ.ಸಿ.ಪಿ. – ೧೯೨೯ ಭೀಮಪ್ಪ ಸನದಿ – ೧೯೪೦ ಕನಕತಾರಾ- ೧೯೫೬ ಗೀತಪ್ರಿಯ – ೧೯೩೧.

* * *

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top