Loading Events

« All Events

  • This event has passed.

ಕೆ. ಗೋಪಾಲ್‌ ಆಚಾರ್

October 9, 2023

೦೯.೧೦.೧೯೪೨ ಲೋಹ ಶಿಲ್ಪಕಲೆಯಲ್ಲಿ ಅದ್ವಿತೀಯ ಸಾಧನೆ ಮಾಡಿರುವ ಗೋಪಾಲ ಆಚಾರ್ಯರು ಹುಟ್ಟಿದ್ದು ಉಡುಪಿಯ ಬಳಿ ಕುಂದಾಪುರದಲ್ಲಿ. ತಂದೆ ಅಂಬು ಆಚಾರ್ಯ, ತಾಯಿ ಶ್ರೀದೇವಿ. ತಂದೆಯಿಂದ ಬಳುವಳಿಯಾಗಿ ಬಂದ ಕಂಚಿನ ಪ್ರತಿಮೆ ರಚನೆಯ ವಿದ್ಯೆ. ಕಂಚು, ಹಿತ್ತಾಳೆ, ಚಿನ್ನ, ಬೆಳ್ಳಿ ಪಂಚಲೋಹಗಳಲ್ಲಿ ಕೃತಿಗಳ ರಚನೆ. ಪಶ್ಚಿಮ ಬಂಗಾಳ, ಅಹಮದಾಬಾದ್, ಚೆನ್ನೈ, ಹೊಸದೆಹಲಿ, ಮುಂಬಯಿ, ಗ್ವಾಲಿಯರ್‌ ಮತ್ತು ಕರ್ನಾಟಕದಾದ್ಯಂತ ಕಲಾಪ್ರದರ್ಶನಗಳು. ಅಹಮದಾಬಾದಿನಲ್ಲಿ ನಡೆದ ಅಖಿಲಭಾರತ ಕರಕುಶಲ ಮತ್ತು ವಸ್ತುಪ್ರದರ್ಶನದಲ್ಲಿ ಪ್ರದರ್ಶನ, ಪ್ರಾತ್ಯಕ್ಷಿಕೆ. ಕರ್ನಾಟಕದಲ್ಲಿ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಧ್ವಜಸ್ತಂಭ, ಹೊಸನಗರ ಶಿವಪಾರ್ವತಿ, ಶಂಕರನಾರಾಯಣದ ಉತ್ಸವಮೂರ್ತಿ, ವೆಂಕಟರಮಣ ದೇವಸ್ಥಾನಕ್ಕಾಗಿ ಬೃಹತ್‌ ಗಂಟೆ, ಶಾರದಾ ಭದ್ರಕಾಳಿ ದೇವಸ್ಥಾನ (ಕೇರಳ)ಕ್ಕಾಗಿ ತ್ರಿಶೂಲ, ಚೆನ್ನೈನಗರಕ್ಕಾಗಿ ಜಂಕಾರೇಶ್ವರ ಮೂರ್ತಿ, ಪಾಂಡಿಚೆರಿಯ ಮೂಕಾಂಬಿಕಾ ಉತ್ಸವಮೂರ್ತಿ, ಮಂಗಳೂರಿನ ಕಾಳಿಕಾಂಬ ವಿಗ್ರಹ, ಸಿದ್ಧಾಪುರಕ್ಕಾಗಿ ದಶಭುಜದುರ್ಗೆ, ದುರ್ಗಾಪರಮೇಶ್ವರಿ ದೇವಸ್ಥಾನಕ್ಕಾಗಿ ದಶಭುಜ ಗಣಪತಿ, ಲಕ್ಷ್ಮೀ. ವಿಠಲದೇವರ ವಿಗ್ರಹಕ್ಕೆ ಪಂಚಲೋಹ ಪ್ರಭಾವಳಿ, ಪಂಚಲೋಹದ ಆಂಜನೇಯ ವಿಗ್ರಹ ಮುಂತಾದವುಗಳ ರಚನೆ. ಕೊಚ್ಚಿನ್‌, ಚೆನ್ನೈ, ಪಾಂಡಿಚೆರಿ, ದೆಹಲಿ, ಆಂಧ್ರಪ್ರದೇಶ ಮತ್ತು ಕರ್ನಾಟಕದ ಹಲವಾರು ಸ್ಥಳಗಳಲ್ಲಿ ಕಲಾಕೃತಿಗಳು ಸಂಗ್ರಹಿತ. ಬೆಂಗಳೂರಿನ ಭೂಮಾದಲ್ಲಿ, ಕುಂದಾಪುರದಲ್ಲಿ ಶ್ರೀಮೂಕಾಂಬಿಕಾ ಮೋಲ್ಡಿಂಗ್‌ ಮತ್ತು ಕ್ಯಾಸ್ಟಿಂಗ್‌ ಸಂಸ್ಥೆ ತೆರೆದು ವಿದ್ಯಾರ್ಥಿಗಳಿಗೆ ನೀಡುತ್ತಿರುವ ತರಬೇತಿ. ಜಿಲ್ಲಾ ಕೈಗಾರಿಕಾ ಮಂಗಳೂರು, ಜೆ.ಸಿ. ಕುಂದಾಪುರ, ಕ್ರಾಫ್ಟ್‌ ಕೌನ್ಸಿಲ್‌ ಬೆಂಗಳೂರು, ಕರ್ನಾಟಕ ಶಿಲ್ಪಕಲಾ ಅಕಾಡಮಿ ಮುಂತಾದವುಗಳಿಂದ ಸಂದ ಪ್ರಶಸ್ತಿಗಳು.   ಇದೇದಿನಹುಟ್ಟಿದಕಲಾವಿದರು ಗಿರಿಜಾ ನಾರಾಯಣ್ ೧೯೫೦ ಶ್ರೀಪಾದ ಹೆಗಡೆ – ೧೯೭೧

* * *

ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ, ಮೀನಾಕ್ಷಿ ಸುಂದರಂ ಕಲ್ಚರ್‌ ಫಾರ್‌ಫಾರ್ಮಿಂಗ್‌ ಆರ್ಟ್ಸ್‌ ‌ವತಿಯಿಂದ ಸನ್ಮಾನ ಮುಖ್ಯವಾದವುಗಳು.     ಇದೇದಿನಹುಟ್ಟಿದಕಲಾವಿದರು: ಅನಂತಸ್ವಾಮಿ ಸಿ.ಜಿ. – ೧೯೩೭

* * *

Details

Date:
October 9, 2023
Event Category: