ಕೆ. ಸಣ್ಣೇಗೌಡ

Home/Birthday/ಕೆ. ಸಣ್ಣೇಗೌಡ
Loading Events

೧೯.೧೦.೧೯೫೫ ಹಾಸನದಲ್ಲಿ ರಂಗ ಚಟುವಟಿಕೆಯನ್ನು ಜೀವಂತವಾಗಿರಿಸಿರುವ ರಂಗಕರ್ಮಿ ಕೆ. ಸಣ್ಣೇಗೌಡರು ಹುಟ್ಟಿದ್ದು ಹಾಸನ ಜಿಲ್ಲೆಯ ಬೀಕನಹಳ್ಳಿ. ತಂದೆ ಕೆಂಪೇಗೌಡ, ತಾಯಿ ಪುಟ್ಟನಂಜಮ್ಮ. ಬಿಎಸ್ಸಿ ನಂತರ ಮೈಸೂರು ವಿಶ್ವವಿದ್ಯಾಲಯದಿಂದ ಸಮಾಜ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಬೆಂಗಳೂರು ವಿಶ್ವವಿದ್ಯಾಲಯದಿಂದ ಪಡೆದ ಕಾನೂನು ಪದವಿ. ೧೯೭೨ರಲ್ಲಿ ಭವಾನಿ ಶಂಕರ್‌ ನಿರ್ದೇಶಿಸಿದ ’ಮನೆ’ ನಾಟಕದಲ್ಲಿ ಪ್ರಮುಖಪಾತ್ರ ವಹಿಸುವುದರೊಂದಿಗೆ ರಂಗಭೂಮಿ ಪ್ರವೇಶ. ಇವರು ನಿರ್ದೇಶಿಸಿದ ಹಲವಾರು ನಾಟಕಗಳಿಗೆ ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ ಬಹುಮಾನ. ಹಲವಾರು ಸಂಘ ಸಂಸ್ಥೆಗಳೊಂದಿಗೆ ಒಡನಾಟ. ಗಜಾನನ ಯುವಕಸಂಘ, ವಿದ್ಯಾರ್ಥಿ ಕಲಾಸಂಘ, ಸಂವೇದನಾ, ರಾಜ್ಯಸರಕಾರಿ ನೌಕರರ ಸಂಘ, ರಂಗಸಿರಿ, ಹಾಸನ ಕಲಾವಿದರು, ಭಾರತ ಜ್ಞಾನ – ವಿಜ್ಞಾನ ಸಮಿತಿ, ಸಾಕ್ಷರತಾ ಸಮಿತಿ, ಅನಿಕೇತನ ಮುಂತಾದ ತಂಡಗಳಿಗಾಗಿ ಜೋಕುಮಾರ ಸ್ವಾಮಿ, ಯಮಳಪ್ರಶ್ನೆ, ಜಾತ್ರೆ, ಎಲ್ಲರಂಥವನಲ್ಲ ನನ್ನ ಗಂಡ, ಸಾಯೋ ಆಟ, ಇದಕ್ಕೆ ಸಂಶಯವಿಲ್ಲ, ಗಾಳಿಪಟ, ೩೬ ಅಲ್ಲ ೬೩, ಮೃಚ್ಛಕಟಿಕ, ನರಬಲಿ, ಕೇಳು ಜನಮೇಜಯ, ಬದುಕ ಮನ್ನಿಸು ಪ್ರಭುವೆ, ಮಾನಿಷಾದ, ಸಂಗ್ಯಾಬಾಳ್ಯಾ, ವಿದೂಷಕ, ಕೊಡೆಗಳು, ಕುಂಟಕುಂಟ ಕುರವತ್ತಿ, ಕೋತಿಕಥೆ, ಕತ್ತೆ ಮತ್ತು ಧರ್ಮ, ಸರಸ್ವತಿ, ಪತ್ರ, ವಿಸರ್ಜನೆ, ಕಿಂದರಜೋಗಿ, ಕಿರುಗೂರಿನ ಗಯ್ಯಾಳಿಗಳು, ಜಲಗಾರ, ಗುಣಮುಖ ಮುಂತಾದವು. ಹಲವಾರು ನಾಟಕಗಳಲ್ಲಿ ವಹಿಸಿದ ಪ್ರಮುಖ ಪಾತ್ರ, ಸರಳ ರಂಗಪರಿಕರ, ರಂಗ ಸಜ್ಜಿಕೆ, ಕಡಿಮೆ ಅವಧಿಯ ನಾಟಕಗಳ ನಿರ್ದೇಶನಗಳನ್ನೊಳಗೊಂಡ ವಿಶಿಷ್ಟ ಕಾರ್ಯಚಟುವಟಿಕೆ ಮಕ್ಕಳ ರಂಗಭೂಮಿ ಬೆಳವಣಿಗೆಗೆ ವಹಿಸಿದ ವಿಶಿಷ್ಟ ಕಾಳಜಿ, ರಾಜ್ಯಮಟ್ಟದ ನಾಟಕಸ್ಪರ್ದೆಗಳಲ್ಲಿ ಇವರು ನಿರ್ದೇಶಿಸಿದ ನಾಟಕಗಳಿಗೆ ಬಹುಮಾನ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ೨೦೦೨ರಲ್ಲಿ ನಾಟಕ ಅಕಾಡಮಿ ಪ್ರಶಸ್ತಿ, ಹಲವಾರು ಸಂಘ ಸಂಸ್ಥೆಗಳಿಂದ ಸನ್ಮಾನ.

* * *

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top