ಕ್ಷೀರಸಾಗರ

Home/Birthday/ಕ್ಷೀರಸಾಗರ
Loading Events
This event has passed.

೩೦-೪-೧೯೦೬ ೨೧-೨-೧೯೭೭ ಕ್ಷೀರಸಾಗರ ಕಾವ್ಯನಾಮದ ಬಿ. ಸೀತಾರಾಮ ಶಾಸ್ತ್ರಿಗಳು ಹುಟ್ಟಿದ್ದು ಚಿತ್ರದುರ್ಗ ಜಿಲ್ಲೆಯ ಚಳ್ಳೇಕೆರೆ ತಾಲ್ಲೂಕಿನ ಬೆಳಗೆರೆಯಲ್ಲಿ. ತಂದೆ ಚಂದ್ರಶೇಖರ ಶಾಸ್ತ್ರಿ, ತಾಯಿ ಅನ್ನಪೂರ್ಣಮ್ಮ. ಬೆಳಗೆರೆ ವಂಶದಲ್ಲಿ ಹುಟ್ಟಿದ ಇವರ ಸಹೋದರ ಬೆಳಗೆರೆ ಕೃಷ್ಣಶಾಸ್ತ್ರಿ, ತಂಗಿಯರಾದ ಬೆಳಗೆರೆ ಜಾನಕಮ್ಮ, ಬೆಳಗೆರೆ ಪಾರ್ವತಮ್ಮ ಎಲ್ಲರದೂ ಸಾಹಿತ್ಯಕ್ಕೆ ಅದ್ವಿತೀಯ ಕೊಡುಗೆ. ಇದು ತಂದೆಯಿಂದ ಬಂದ ಬಳುವಳಿ. ತಂದೆ ಚಂದ್ರಶೇಖರ ಶಾಸ್ತ್ರಿಗಳು ಜಾನಪದ ಗೀತೆ, ಲಾವಣಿಗಳ ಅದ್ವಿತೀಯ ಹಾಡುಗಾರರು. ಪ್ರಾರಂಭಿಕ ಶಿಕ್ಷಣ ಚಿತ್ರದುರ್ಗ. ಇಂಟರ್ ಮೀಡಿಯೆಟ್ ಓದಿದ್ದು ಮೈಸೂರಿನಲ್ಲಿ. ಬೆಂಗಳೂರಿನ ಸೆಂಟ್ರಲ್ ಕಾಲೇಜಿನಿಂದ ಪದವಿ, ಕಲ್ಕತ್ತೆಯ ವಿಶ್ವವಿದ್ಯಾಲಯದಿಂದ ಗಣಿತ ಶಾಸ್ತ್ರದಲ್ಲಿ ಎಂ.ಎ. ಪದವಿ. ಕೈತುಂಬ ಸಂಬಳ ತರುವ ಹಲವಾರು ಹುದ್ದೆಗಳಿಗೆ ಆಹ್ವಾನ ಬಂದರೂ ಆರಿಸಿಕೊಂಡದ್ದು ಅಧ್ಯಾಪಕ ವೃತ್ತಿ. ಮೈಸೂರು ವಿಶ್ವವಿದ್ಯಾಲಯದಲ್ಲಿ ೧೯೨೮ರಲ್ಲಿ ಸೇರಿ ೩೪ ವರ್ಷಗಳ ಸೇವೆಯ ನಂತರ ೧೯೬೨ರಲ್ಲಿ ನಿವೃತ್ತಿ. ಋಷಿಮೋಹಿನಿ, ನಿಶ್ಚಿತಾರ್ಥ, ಕಾಶಿಯಾತ್ರೆ, ಲಕ್ಕೀ ಲಕ್ಷ್ಮಣನ್, ದೀಪಾವಳಿ, ನಿತ್ಯನಾಟಕದ ಮೊದಲ ಸಂಪುಟ. ಎರಡನೇ ಸಂಪುಟದಲ್ಲಿ-ಕಲಹ ಕುತೂಹಲ, ಅರ್ಧನಾರಿ, ಪಾಟೀಪಾದ, ಅರ್ಧಾಂಗಿ, ರುಪಾಯಿಗಿಡ, ಪರಪಾಟು, ಚೋರ, ಚಪ್ಪಾಳೆ ವೈದ್ಯ, ನಮ್ಮೂರಿನ ಪಶ್ಚಿಮಕ್ಕೆ, ಬೆಸ್ಟ್ ಆಫ್ ತ್ರೀ (ಗಣಿತ ಶಾಸ್ತ್ರದ ನಾಟಕಗಳು) ಪ್ರಕಟಿತ. ಋಷಿಮೋಹಿನಿ ನಾಟಕವು ೧೯೬೭ರಲ್ಲಿ ಎಸ್.ಎಸ್.ಎಲ್.ಸಿ. ತರಗತಿಯ ಐಚ್ಛಿಕ ವಿಷಯವಾಗಿ ಆಯ್ಕೆ. ಬೆಸ್ಟ್ ಆಫ್ ತ್ರೀ ನಾಟಕವು ಬಾಂಬೆ ವಿಶ್ವವಿದ್ಯಾಲಯದ ೧೯೭೦-೭೨ನೇ ಸಾಲಿನ ಇಂಟರ್ ಮೀಡಿಯೆಟ್ ತರಗತಿಯ ಪಠ್ಯಪುಸ್ತಕ. ಕಥಾಸಂಕಲನ-ವೀಳ್ಯ. ಕವಿತಾಸಂಕಲನ-ರಾಧೆ, ಶ್ರೀರಂಗ ನಗರದ ಕೊನೆ ದಿವಸ. ಜೀವನಚರಿತ್ರೆ-ನೆಪೋಲಿಯನ್ ಬೊನಪಾರ್ಟೆ. ಈ ಪುಸ್ತಕವು ೧೯೪೧ರಲ್ಲಿ ಇಂಟರ್ ಮೀಡಿಯೆಟ್ ತರಗತಿಯ ಪಠ್ಯಪುಸ್ತಕವಾಗಿ ಆಯ್ಕೆ. ಹಲವಾರು ದತ್ತಿ ನಿ ಸ್ಥಾಪನೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅತ್ಯುನ್ನತ ಶ್ರೇಣಿಯ ಪದವಿ ಪಡೆದವರಿಗೆ ಪ್ರಶಸ್ತಿ, ಮೈಸೂರು ವಿ.ವಿ.ದಲ್ಲಿ ಭಾಷಾಶಾಸ್ತ್ರದಲ್ಲಿ, ಎಂ.ಎ. ತರಗತಿಯಲ್ಲಿ ಉನ್ನತ ಶ್ರೇಣಿಯಲ್ಲಿ ಪದವಿ ಪಡೆದವರಿಗೆ ‘ಕ್ಷೀರಸಾಗರ ಪ್ರಶಸ್ತಿ.’ ಬೆಳಗೆರೆಯಲ್ಲಿ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಕಾರ‍್ಯಕ್ರಮವೇರ‍್ಪಡಿಸಲು ಶಾರದಾ ಮಂದಿರ ಕಟ್ಟಡ ನಿರ್ಮಾಣ, ಬೆಳಗೆರೆಯಲ್ಲಿ ಇವರ ಹೆಸರಿನಲ್ಲಿ ಹೈಸ್ಕೂಲು. ಟಿ.ಎಸ್. ವೆಂಕಣ್ಣಯ್ಯ ಮತ್ತು ಬಿ. ಸೀತಾರಾಮಶಾಸ್ತ್ರಿಯವರ ಹೆಸರಿನ ಚಳ್ಳೇಕೆರೆ ಕಾಲೇಜಿನಲ್ಲಿ ಪರ‍್ಯಾಯ ಪಾರಿತೋಷಕ ಮುಂತಾದುವು. ಕೆಲವರು ಪ್ರಶಸ್ತಿಗಾಗಿ ಹಪಹಪಿಸಿದರೆ ಇವರು ಇತರರಿಗೆ ಪ್ರಶಸ್ತಿ ಕೊಡುವುದರಲ್ಲಿ  ಸಂತಸದಿಂದ ದಾನಿಗಳಾಗಿ ತೋರಿದ ಔದಾರ‍್ಯ.   ಇದೇ ದಿನ ಹುಟ್ಟಿದ ಸಾಹಿತಿಗಳು : ಸಾವಿತ್ರಮ್ಮ ದೇ.ಜ.ಗೌ – ೧೯೨೪ ಸಿ.ಎನ್. ಮುಕ್ತಾ – ೧೯೫೧ ಬಿ.ವಿ. ರಾಧಾಕೃಷ್ಣ – ೧೯೧೮

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top