ಗೀತಾ. ಬಿ.ಯು.

Home/Birthday/ಗೀತಾ. ಬಿ.ಯು.
Loading Events

೨-೧೨-೧೯೬೨ ಟಿ.ವಿ. ಧಾರಾವಾಹಿಗಳ ಸಂವೇದನಾಶೀಲ ಬರಹಗಾರ್ತಿಯಾದ ಗೀತಾ. ಬಿ.ಯು.ರವರು ಹುಟ್ಟಿದ್ದು ಬೆಂಗಳೂರು. ತಂದೆ ಎಚ್.ಎಸ್. ಉಪೇಂದ್ರರಾವ್, ತಾಯಿ ಶಾಂತಾ. ಪ್ರಾರಂಭಿಕ ಶಿಕ್ಷಣ ಬೆಂಗಳೂರು. ತಂದೆಗೆ ವರ್ಗವಾಗುತ್ತಿದ್ದುದರಿಂದ ಪ್ರೌಢಶಾಲಾ ವಿದ್ಯಾಭ್ಯಾಸ ಚಿಂತಾಮಣಿ ಮತ್ತು ಚೆನ್ನರಾಯಪಟ್ಟಣ. ನ್ಯಾಷನಲ್ ಕಾಲೇಜಿನಲ್ಲಿ ಬಿ.ಎ. ಪದವಿ. ಬೆಂಗಳೂರು ವಿಶ್ವವಿದ್ಯಾಲಯದಿಂದ ಸಂವಹನದಲ್ಲಿ ಬಿ.ಎಸ್. ಪದವಿ. ಕನ್ನಡ ಸಾಹಿತ್ಯ ಪರಿಷತ್ತಿನಿಂದ ಕನ್ನಡರತ್ನ. ಚಿಕ್ಕಂದಿನಿಂದಲೂ ಕಥೆ ಕೇಳುವುದು, ಕಥೆ ಹೇಳುವುದರಲ್ಲಿ ತುಂಬಾ ಆಸಕ್ತಿ. ಬರಹಕ್ಕಾಗಿ ಆಯ್ದುಕೊಂಡದ್ದು ಸಣ್ಣಕಥೆ ಮತ್ತು ಕಾದಂಬರಿ ಕ್ಷೇತ್ರ. ಹಲವಾರು ಕಾದಂಬರಿಗಳು ಪ್ರಮುಖ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಪ್ರಕಟಿತ. ಸೋಲು ಗೆಲುವಿನ ಹಾದಿಯಲ್ಲಿ (ಪ್ರಜಾಮತ), ಮರೀಚಿಕೆ (ಉಷಾಪತ್ರಿಕೆ), ಹೊಂಗೆ ನೆರಳು (ಮಲ್ಲಿಗೆ) ತಮಸೋಮ ಜ್ಯೋತಿರ್ಗಮಯ (ತರಂಗ), ಸಂಕೋಲೆ (ಕರ್ಮವೀರ) ಅವರ‍್ನ ಬಿಟ್ಟು ಇವರ‍್ನ ಬಿಟ್ಟು ಇವರ‍್ಯಾರು (ಸುಧಾ), ವಾರಸುದಾರ (ತರಂಗ) ಧಾರಾವಾಹಿಯಾಗಿ ಪ್ರಕಟಗೊಂಡವು. ಪ್ರಕಟಿತ ಕಥಾ ಸಂಕಲನಗಳು-ಆರದಿರಲಿ ಬೆಳಕು, ಕೈ ಹಿಡಿದು ನಡೆಸೆನ್ನನು, ಮತ್ತದೇ ಸಂಜೆ. ಇದೀಗ ಬಿಡುಗಡೆಯಾದ ಕಾದಂಬರಿ ‘ಮಿಥ್ಯ’. ಕಥೆಯಾಗಲೀ, ಕಾದಂಬರಿಯಾಗಲೀ ಓದುಗರ ಮನಸ್ಸನ್ನು ಮುಟ್ಟುವಂತೆ ಘಟನೆಗಳ ನಿರೂಪಣೆ, ಭಾವಪರವಶತೆಯ ಸಂಭಾಷಣೆಗಳಿಂದ ಹೃದಯ ತಟ್ಟುವ ಬರವಣಿಗೆ. ಆದುದರಿಂದಲೇ ಟಿ.ವಿ.ಯ ಮನ್ವಂತರ, ಮುಕ್ತಾ, ಮೌನರಾಗ, ಗುಪ್ತಗಾಮಿನಿ, ಜಗಳಗಂಟಿಯರು ಮುಂತಾದ ಧಾರಾವಾಹಿಗಳಿಗೆ ಕಥೆ, ಸಂಭಾಷಣೆ ಹೆಣೆದಿದ್ದಾರೆ. ಜಿ ಟಿ.ವಿ. ವಾಹಿನಿಯ ಸ್ಪಂದನ ಕಾರ‍್ಯಕ್ರಮದ ರೂವಾರಿಯೂ ಹೌದು.   ಇದೇ ದಿನ ಹುಟ್ಟಿದ ಸಾಹಿತಿ : ಎಂ.ಜಿ. ಈಶ್ವರಪ್ಪ – ೧೯೫೦

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top