೧೪.೦೯.೧೯೧೭ ೧೧.೧೨.೨೦೧೦ ಊರಿಂದೂರಿಗೆ ತಿರುಗುತ್ತ ಜನರಲ್ಲಿ ಹಾಡಿನ ಮೂಲಕ ಸ್ವಾತಂತ್ರ್ಯದ ಕಿಚ್ಚು ಹಚ್ಚಿದ ಸುಗಮ ಸಂಗೀತ, ಲಾವಣಿ, ತತ್ತ್ವಪದ ಗಾಯಕ ರಾಮಾಚಾರ್ಯರು ಹುಟ್ಟಿದ್ದು ಕೋಲಾರ ಜಿಲ್ಲೆಯ ಗುಡಿಬಂಡೆಯಲ್ಲಿ. ತಂದೆ ಶ್ರೀನಿವಾಸಾಚಾರ್ಯ, ತಾಯಿ ಸೀತಮ್ಮ. ಹುಟ್ಟಿನಿಂದ ಬಳುವಳಿಯಾಗಿ ಬಂದುದು ಸಂಗೀತ. ಸಂಗೀತ ವಿದ್ವಾಂಸ ವೆಂಕೋಬಾಚಾರ್ಯರಲ್ಲಿ ಸಂಗೀತದ ಪ್ರಥಮ ಪಾಠ. ಬೆಳಕವಾಡಿ ಶ್ರೀನಿವಾಸ ಅಯ್ಯಂಗಾರ್ಯರಲ್ಲಿ ಉನ್ನತ ಸಂಗೀತ ಶಿಕ್ಷಣ. ಚಿತ್ರದುರ್ಗದ ಕೋಟೆಯಲ್ಲಿ ಕಾರ್ಯಕ್ರಮದ ಪ್ರಾರ್ಥನಾಗೀತೆ. ಕಂಚಿನ ಕಂಠಕ್ಕೆ ಮನಸೋತ ಬೇಂದ್ರೆಯಿಂದ ಸುಗಮ ಸಂಗೀತ ಹಾಡಲು ಸಲಹೆ. ಬಿಜಾಪುರದ ತೋರವೇ ನರಸಿಂಹನಗುಡಿ, ಧರ್ಮಸ್ಥಳದ ಸರ್ವಧರ್ಮ ಸಮ್ಮೇಳನದಲ್ಲಿ “ಇಳಿದುಬಾ ತಾಯೆ….” ಹಾಡಿದಾಗ ಕಾಕತಾಳೀಯವೆಂಬಂತೆ ಸುರಿದ ಮಳೆ. ಋಷ್ಯಶೃಂಗ ಬಿರುದು. ಊರೂರು ಸುತ್ತಿ ಸ್ವಾತಂತ್ರ್ಯದ ಗೀತೆ, ಲಾವಣಿ, ತತ್ವಪದದ ಜೊತೆಗೆ ಪಿಟೀಲು, ಮ್ಯಾಂಡೊಲಿನ್ ವಾದನ. ಸರಕಾರದ ಪ್ರಚಾರ ಇಲಾಖೆ ವತಿಯಿಂದ ಕುಟುಂಬಯೋಜನೆ, ಉಳಿತಾಯ ಯೋಜನೆಗಾಗಿ ಪ್ರಚಾರ ಗೀತೆ. ಮನೆಮನೆಯಲ್ಲೂ ನಡೆಸಿ ಕೊಟ್ಟ ಸಂತೀತ ಕಾರ್ಯಕ್ರಮ. ಕಾಸರಗೋಡಿನ ಕಕ್ಕಿಲಾಯರ ಮನೆ, ಅಮೆರಿಕನ್ ಎಂಬೆಸಿ (ಮುಂಬಯಿ) ಪುಣೆಯ ಓಣಂ ಸಂದರ್ಭ, ಕೋಲ್ಕತ್ತದ ಗೌಡೀಯ ಮಠ, ಸಂಗೀತ ನಿರ್ದೇಶ ಕಣದ ಪಂಕಜ್ ಮಲ್ಲಿಕ್, ಭೂಸೇನ್ ಹಜಾರಿಯಾ ಮುಂದೆ ಹಾಡಿದ ಬಂಗಾಲಿಗೀತೆ, ಬಿಸ್ರಾ ಹೆಸರಿನಲ್ಲಿ ಕೊರವಂಜಿ ಹಾಸ್ಯ ಪತ್ರಿಕೆಗೆ ಬರೆದ ಅನೇಕ ಅಣಕು ಹಾಡುಗಳು. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ ಕರ್ನಾಟಕ ಕಲಾಶ್ರೀ, ಕೈವಾರದಲ್ಲಿ ನಡೆದ ಜಿಲ್ಲಾ ಮಟ್ಟದ ಗಮಕ ಸಮ್ಮೇಳನದ ಅಧ್ಯಕ್ಷತೆ, ಹಲವಾರು ಸಂಘ ಸಂಸ್ಥೆಗಳಿಂದ ಸನ್ಮಾನ ಇದೇ ದಿನ ಹುಟ್ಟಿದ ಕಲಾವಿದರು ಮಂಗಳಾ ಅನಂತಸ್ವಾಮಿ – ೧೯೪೬ ಶಾರದಾ ರುದ್ರ – ೧೯೪೬ ಅ.ನ. ರಮೇಶ್ – ೧೯೫೭
* * *