ಗುರುದಾಸ

Home/Birthday/ಗುರುದಾಸ
Loading Events
This event has passed.

೨೨.೦೩.೧೯೭೧ ವಾಗ್ಗೇಯಕಾರರ ಸಂತತಿ ಕ್ಷೀಣಿಸುತ್ತಿರುವ ಇಂದಿನ ಸಂದರ್ಭದಲ್ಲಿ ಕೀರ್ತನೆ, ದೇವರ ನಾಮ, ಉಗಾಭೋಗ, ಶ್ಲೋಕಗಳನ್ನು ರಚಿಸುತ್ತಿರುವ ಸಂಪತ್ ಜಯಾರವರು ಹುಟ್ಟಿದ್ದು ಬೆಂಗಳೂರು. ತಂದೆ ಜಯ ರಾಘವನ್, ತಾಯಿ ಅಲಮೇಲ, ನರ್ತನ ಹಾಗು ಗಾಯನದಲ್ಲಿ ಪರಿಣತರು. ಬೆಳೆದದ್ದು ಸಂಗೀತದ ವಾತಾವರಣದಲ್ಲಿ, ಕಾಲೇಜಿಗೆ ಬರುವಷ್ಟರಲ್ಲಿ ಕೀರ್ತನೆಗಳನ್ನು ಸುಶ್ರಾವ್ಯವಾಗಿ ಹಾಡುತ್ತಿದ್ದು ಕಲಿತದ್ದು ಶಾಸ್ತ್ರೀಯ ಸಂಗೀತ. ಬಿ.ಕಾಂ. ಪದವಿಯ ಜೊತೆಗೆ ಸಂಗೀತದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಡೆದ ಸ್ನಾತಕೋತ್ತರ ಪದವಿ. ಉದ್ಯೋಗಕ್ಕಾಗಿ ಸೇರಿದ್ದು ಭಾರತೀಯ ಜೀವ ವಿಮಾ ನಿಗಮ. ರಚಿಸಿರುವ ಗೀತ ಸಾಹಿತ್ಯವೇ ೪೫೦೦ ಕ್ಕೂ ಹೆಚ್ಚು. ಸ್ವರಸಂಯೋಜನೆ, ಹರಿಕಥೆ, ಪ್ರವಚನ, ಉಪನ್ಯಾಸ ಕಾರ್ಯಕ್ರಮಗಳಿಂದ ಯಾವಾಗಲೂ ಒಂದು ರೀತಿಯ ಬಿಜಿ ಬೀ (Busy Bee). ಕರ್ನಾಟಕದಲ್ಲಷ್ಟೇ ಅಲ್ಲದೆ ಆಂಧ್ರಪ್ರದೇಶ, ಕೇರಳ ರಾಜ್ಯದಲ್ಲೂ ನಡೆಸಿಕೊಟ್ಟಿರುವ ಹಲವಾರು ಕಾರ್ಯಕ್ರಮಗಳು. ತಿರುವಾಯ್ಯೂರ್‌ನಲ್ಲಿ ನಡೆಯುವ ತ್ಯಾಗರಾಜರ ಆರಾಧನಾ ಮಹೋತ್ಸವದಲ್ಲಿ ಪ್ರತಿವರ್ಷವೂ ಸಲ್ಲಿಸುತ್ತಿರುವ ಸಂಗೀತ ಸೇವೆ. ತಾವೊಬ್ಬರೇ ಹಾಡುವುದಲ್ಲದೆ ಸಾಮೂಹಿಕ ಹಾಡುಗಾರಿಕೆಯಿಂದ ಭಕ್ತಿಯ ಪರಾಕಾಷ್ಠತೆಯ ವಾತಾವರಣ ನಿರ್ಮಾಣವಾಗಲು ಭಜನೆಯೆ ಸಹಕಾರಿ ಎಂದರಿತು ಅದಕ್ಕಾಗಿ ಸ್ಥಾಪಿಸಿದ್ದು ಗುರುದಾಸ ಭಜನಾಮಂಡಲಿ. ಇವರ ಕೃತಿ ರಚನಾ ಪ್ರತಿಭೆಯನ್ನು ಗುರುತಿಸಿ ನೀಡಿದ್ದು ‘ಗುರುದಾಸ’ ಅಂಕಿತ. ಈ ಅಂಕಿತದಿಂದ ಕೀರ್ತನೆಗಳು, ದೇವರ ನಾಮಗಳು, ಉಗಾಭೋಗ, ಶ್ಲೋಕಗಳು, ಭಜನೆಯ ಹಾಡುಗಳನ್ನು ಶುದ್ಧ ಶಾಸ್ತ್ರೀಯ ಸಂಗೀತ ರೂಪಕದಲ್ಲಿ ಐದು ಭಾಷೆಗಳಲ್ಲಿ ರಚಿಸಿದ ಒಟ್ಟು ರಚನೆಗಳೇ ಸುಮಾರು ೪೫೦೦ಕ್ಕೂ ಹೆಚ್ಚು. ಇವರ ರಚನೆಗಳಲ್ಲಿ ಷಡ್ಚಕ್ರಗೀತಂ, ಶ್ರೀಚಕ್ರ ತರಂಗಿಣಿ, ೭೨ ಮೇಳಕರ್ತ ಗೀತಂ, ಷೋಡಾಕ್ಷರ ಗೀತಂ, ವರಾಳಿ, ಕಾಮಾಕ್ಷಿ ಪಂಚಕಂ, ದ್ವಾದಶ ರಾಗಮಾಲಿಕಾ ಮುಂತಾದುವು. ‘ಸಾಧನದಾಸ’, ಕನ್ನಡ ನಾಗೇಶ ಶರ್ಮ, ಬಾಲ ವಾಲ್ಮೀಕಿ ಮುಂತಾದ ಬಿರುದು ಗೌರವಗಳು. ಇದೇ ದಿನ ಹುಟ್ಟಿದ ಕಲಾವಿದರು : ಲಕ್ಷ್ಮಣ ಭಟ್ – ೧೯೪೧ ಸುರೇಖಾ ಕುಲಕರ್ಣಿ – ೧೯೬೩

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top