Warning: mysqli_query(): MySQL server has gone away in E:\kanaja_new\wp-includes\wp-db.php on line 2056

Warning: mysqli_query(): Error reading result set's header in E:\kanaja_new\wp-includes\wp-db.php on line 2056

ಗುರುರಾವ್‌ ದೇಶಪಾಂಡೆ – ಕಣಜ

ಗುರುರಾವ್‌ ದೇಶಪಾಂಡೆ

Home/Birthday/ಗುರುರಾವ್‌ ದೇಶಪಾಂಡೆ
Loading Events

೨೧೧೦೧೮೯೯ ೩೧೨೧೯೮೨ ಗಮಕವಾಚನಕ್ಕೆ ಹಿಂದೂಸ್ತಾನಿ ರಾಗಗಳನ್ನು ಜೋಡಿಸಿ ಪ್ರಚಾರಪಡಿಸಿದ ಗುರುರಾವ್‌ ದೇಶಪಾಂಡೆಯವರು ಹುಟ್ಟಿದ್ದು ಧಾರವಾಡದ ಬಳಿಯ ನರೇಂದ್ರ ಗ್ರಾಮ. ತಂದೆ ದೇಶಪಾಂಡೆ ನಾರಾಯಣರಾಯರು. ಓದಿದ್ದು ಇಂಟರ್‌ವರೆಗೆ. ಚಿಕ್ಕಂದಿನಿಂದಲೂ ಸಂಗೀತ ನಾಟಕಗಳತ್ತ ಒಲವು. ರಂಗಭೂಮಿಯ ನಟನಿಗೆ ಒಪ್ಪುವಂತಹ ವ್ಯಕ್ತಿತ್ವ. ವಾಮನರಾವ್‌ ಮಾಸ್ತರ ಕಂಪನಿಯ ಕೃಷ್ಣಾರ್ಜುನ ಕಾಳಗ ನಾಟಕದಲ್ಲಿ ಅರ್ಜುನನ ಪಾತ್ರಧಾರಿ, ಅಬ್ಬಿಗೇರಿ ನಾಟಕ ಮಂಡಲಿಗಾಗಿ ಶಿಷ್ಯೆ ಭಾಗೀರಥಮ್ಮನೊಡನೆ ಕೂಡಿಸಿದ ನಾಟಕ ‘ಮಹಾನಂದ’ ದಲ್ಲಿ ದೇವೇಂದ್ರನ ಪಾತ್ರವಹಿಸಿ ಪಡೆದ ಪ್ರಶಂಸೆ. ಸಂಗೀತ ಕಲಿಯುವ ಹುಚ್ಚಿನಿಂದ ರಾಮಕೃಷ್ಣ ಬುವಾ ವಝೆರವರಲ್ಲಿ ಶಿಷ್ಯತ್ವ ವಹಿಸಿ ಕಲಿತ ಗ್ವಾಲಿಯರ್‌ ಘರಾಣೆ. ಮರಾಠಿಯಲ್ಲಿ ಪಡೆದ ಪ್ರಾವಿಣ್ಯತೆ. ಸಂತ ಜ್ಞಾನೇಶ್ವರ್‌, ತುಕಾರಾಂ ಮೊದಲಾದವರ ಅಭಂಗಗಳ ಗ್ರಂಥಪಾರಾಯಣ. ಭಾರತ ಬಿಂದೂರಾಯರಲ್ಲಿ ಶಿಷ್ಯತ್ವ ವಹಿಸಿ ಕಲಿತ ಗಮಕವಾಚನ. ಗುರುರಾಯರ ವಾಚನಕ್ಕೆ ಬೆಟಗೇರಿ ಕೃಷ್ಣಶರ್ಮರ ವ್ಯಾಖ್ಯಾನ. ವರ್ಷಾನುಗಟ್ಟಲೆ ಸ್ನೇಹಿತರ ಮನೆಗಳಲ್ಲಿ ನಡೆಯುತ್ತಿದ್ದ ಗಮಕವಾಚನ. ಮುಂಬಯಿಯ ವಾಸ. ಅನೇಕ ಶಿಷ್ಯರಿಗೆ ಸಂಗೀತದ ತರಬೇತಿ. ಮುಂಬಯಿ ಆಕಾಶವಾಣಿಯಿಂದ ಹಲವಾರು ಕಾರ್ಯಕ್ರಮಗಳ ಬಿತ್ತರ. ಧಾರವಾಡದ ಆಕಾಶವಾಣಿಯಲ್ಲಿ ವಹಿಸಿಕೊಂಡ ಸಂಗೀತ ನಿರ್ಮಾಪಕರ ಹುದ್ದೆ. ಚುರುಮುರಿ ಶೇಷಗಿರಿರಾಯರ ಕನ್ನಡ ಶಾಕುಂತಲ ರೂಪಕದ ನಿರ್ಮಾಣ, ಪ್ರಸಾರ. ಕರ್ನಾಟಕ ಸಂಗೀತ ನೃತ್ಯ ಅಕಾಡಮಿಯಿಂದ ಗಾಯನಾಚಾರ್ಯ, ಪ್ರಶಸ್ತಿಯ ಜೊತೆಗೆ ಅನೇಕ ಪ್ರಶಸ್ತಿ ಸನ್ಮಾನಗಳು. ಇವರ ಸ್ಮರಣಾರ್ಥ ಗುರುರಾವ್‌ ದೇಶಪಾಂಡೆ ಸಂಗೀತ ಸಭಾ ಹೆಸರಿನಲ್ಲಿ ಪ್ರತಿವರ್ಷ ಪಂ.ವಿನಾಯಕ ತೊರವಿಯವರು ನಡೆಸುತ್ತಿರುವ ಸಂಗೀತೋತ್ಸವ ಕಾರ್ಯಕ್ರಮ.   ಇದೇದಿನಹುಟ್ಟಿದಕಲಾವಿದರು ಚಿಂತನಪಲ್ಲಿ ಕೃಷ್ಣಮೂರ್ತಿ – ೧೯೨೦ ಚಂದ್ರಕಾಂತ ಕುಸನೂರ – ೧೯೩೧ ರಾಮೇಶ್ವರಿ ವರ್ಮ – ೧೯೩೬ ಶ್ರೀನಿವಾಸ ಪ್ರಭು – ೧೯೫೫

* * *

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top