
- This event has passed.
ಗುರುರಾವ್ ದೇಶಪಾಂಡೆ
October 21
೨೧–೧೦–೧೮೯೯ ೩–೧೨–೧೯೮೨ ಗಮಕವಾಚನಕ್ಕೆ ಹಿಂದೂಸ್ತಾನಿ ರಾಗಗಳನ್ನು ಜೋಡಿಸಿ ಪ್ರಚಾರಪಡಿಸಿದ ಗುರುರಾವ್ ದೇಶಪಾಂಡೆಯವರು ಹುಟ್ಟಿದ್ದು ಧಾರವಾಡದ ಬಳಿಯ ನರೇಂದ್ರ ಗ್ರಾಮ. ತಂದೆ ದೇಶಪಾಂಡೆ ನಾರಾಯಣರಾಯರು. ಓದಿದ್ದು ಇಂಟರ್‌ವರೆಗೆ. ಚಿಕ್ಕಂದಿನಿಂದಲೂ ಸಂಗೀತ ನಾಟಕಗಳತ್ತ ಒಲವು. ರಂಗಭೂಮಿಯ ನಟನಿಗೆ ಒಪ್ಪುವಂತಹ ವ್ಯಕ್ತಿತ್ವ. ವಾಮನರಾವ್ ಮಾಸ್ತರ ಕಂಪನಿಯ ಕೃಷ್ಣಾರ್ಜುನ ಕಾಳಗ ನಾಟಕದಲ್ಲಿ ಅರ್ಜುನನ ಪಾತ್ರಧಾರಿ, ಅಬ್ಬಿಗೇರಿ ನಾಟಕ ಮಂಡಲಿಗಾಗಿ ಶಿಷ್ಯೆ ಭಾಗೀರಥಮ್ಮನೊಡನೆ ಕೂಡಿಸಿದ ನಾಟಕ ‘ಮಹಾನಂದ’ ದಲ್ಲಿ ದೇವೇಂದ್ರನ ಪಾತ್ರವಹಿಸಿ ಪಡೆದ ಪ್ರಶಂಸೆ. ಸಂಗೀತ ಕಲಿಯುವ ಹುಚ್ಚಿನಿಂದ ರಾಮಕೃಷ್ಣ ಬುವಾ ವಝೆರವರಲ್ಲಿ ಶಿಷ್ಯತ್ವ ವಹಿಸಿ ಕಲಿತ ಗ್ವಾಲಿಯರ್ ಘರಾಣೆ. ಮರಾಠಿಯಲ್ಲಿ ಪಡೆದ ಪ್ರಾವಿಣ್ಯತೆ. ಸಂತ ಜ್ಞಾನೇಶ್ವರ್, ತುಕಾರಾಂ ಮೊದಲಾದವರ ಅಭಂಗಗಳ ಗ್ರಂಥಪಾರಾಯಣ. ಭಾರತ ಬಿಂದೂರಾಯರಲ್ಲಿ ಶಿಷ್ಯತ್ವ ವಹಿಸಿ ಕಲಿತ ಗಮಕವಾಚನ. ಗುರುರಾಯರ ವಾಚನಕ್ಕೆ ಬೆಟಗೇರಿ ಕೃಷ್ಣಶರ್ಮರ ವ್ಯಾಖ್ಯಾನ. ವರ್ಷಾನುಗಟ್ಟಲೆ ಸ್ನೇಹಿತರ ಮನೆಗಳಲ್ಲಿ ನಡೆಯುತ್ತಿದ್ದ ಗಮಕವಾಚನ. ಮುಂಬಯಿಯ ವಾಸ. ಅನೇಕ ಶಿಷ್ಯರಿಗೆ ಸಂಗೀತದ ತರಬೇತಿ. ಮುಂಬಯಿ ಆಕಾಶವಾಣಿಯಿಂದ ಹಲವಾರು ಕಾರ್ಯಕ್ರಮಗಳ ಬಿತ್ತರ. ಧಾರವಾಡದ ಆಕಾಶವಾಣಿಯಲ್ಲಿ ವಹಿಸಿಕೊಂಡ ಸಂಗೀತ ನಿರ್ಮಾಪಕರ ಹುದ್ದೆ. ಚುರುಮುರಿ ಶೇಷಗಿರಿರಾಯರ ಕನ್ನಡ ಶಾಕುಂತಲ ರೂಪಕದ ನಿರ್ಮಾಣ, ಪ್ರಸಾರ. ಕರ್ನಾಟಕ ಸಂಗೀತ ನೃತ್ಯ ಅಕಾಡಮಿಯಿಂದ ಗಾಯನಾಚಾರ್ಯ, ಪ್ರಶಸ್ತಿಯ ಜೊತೆಗೆ ಅನೇಕ ಪ್ರಶಸ್ತಿ ಸನ್ಮಾನಗಳು. ಇವರ ಸ್ಮರಣಾರ್ಥ ಗುರುರಾವ್ ದೇಶಪಾಂಡೆ ಸಂಗೀತ ಸಭಾ ಹೆಸರಿನಲ್ಲಿ ಪ್ರತಿವರ್ಷ ಪಂ.ವಿನಾಯಕ ತೊರವಿಯವರು ನಡೆಸುತ್ತಿರುವ ಸಂಗೀತೋತ್ಸವ ಕಾರ್ಯಕ್ರಮ. ಇದೇದಿನಹುಟ್ಟಿದಕಲಾವಿದರು ಚಿಂತನಪಲ್ಲಿ ಕೃಷ್ಣಮೂರ್ತಿ – ೧೯೨೦ ಚಂದ್ರಕಾಂತ ಕುಸನೂರ – ೧೯೩೧ ರಾಮೇಶ್ವರಿ ವರ್ಮ – ೧೯೩೬ ಶ್ರೀನಿವಾಸ ಪ್ರಭು – ೧೯೫೫
* * *