
ಚಿಂತಲಪಲ್ಲಿ ರಾಮಚಂದ್ರರಾವ್
November 14
೧೪–೧೧–೧೯೧೬ ೨–೭–೧೯೮೫ ಮಹಾನ್ ಸಂಗೀತಗಾರರ ವಂಶವಾಹಿನಿಯಲ್ಲಿ ರಾಮಚಂದ್ರರಾವ್ ಹುಟ್ಟಿದ್ದು ಚಿಂತಲಪಲ್ಲಿಯಲ್ಲಿ. ತಂದೆ ಸಂಗೀತ ವಿದ್ವಾಂಸರಾದ ವೆಂಕಟರಾಯರು, ತಾಯಿ ರಾಮಕ್ಕ. ಶಾಲೆಗೆ ಹೋದರೂ, ಮನೆಯಲ್ಲಿದ್ದರೂ ಸದಾ ಸಂಗೀತದ ಜ್ಞಾನ. ಚಿಂತಲಪಲ್ಲಿ ಸಂಗೀತ ವಿದ್ವಾಂಸರ ಸಂಗಮ ಸ್ಥಾನ, ಭೈರವಿ ಕೆಂಪೇಗೌಡರಿಂದಲೇ ನಾಲ್ಕಾಣೆ ವಸೂಲುಮಾಡಿ ಹಾಡಿದ ಹುಡುಗ. ದೊಡ್ಡಪ್ಪ ವೆಂಕಟಾಚಲಯ್ಯನವರಿಂದ ಸಂಗೀತದ ಪ್ರಥಮ ಪಾಠ. ಅಣ್ಣಾಮಲೈ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪೊನ್ನಯ್ಯ ಪಿಳ್ಳೆಯವರಿಂದ ಮುಂದುವರೆದ ಶಿಕ್ಷಣ. ಟಿ. ಚೌಡಯ್ಯನವರ ನೆರವಿನಿಂದ ಮದರಾಸಿನಲ್ಲಿ ನಡೆಸಿಕೊಟ್ಟ ಕಚೇರಿಗಳು. ನಾಲ್ವಡಿ ಕೃಷ್ಣರಾಜ ಒಡೆಯರು ಮೈಸೂರಿಗೆ ಕರೆಸಿದಾಗ ನೀಡಿದ ಸಂಗೀತ ಕಚೇರಿ. ತಂದೆ ಹಾಗೂ ಮಗ ಇಬ್ಬರ ಗಾಯನಕ್ಕೂ ಮನ್ನಣೆ. ಆಸ್ಥಾನ ವಿದ್ವಾಂಸರಾಗಿ ನೇಮಕ. ೧೬ರ ಹರೆಯದಲ್ಲೇ ಆಸ್ಥಾನವಿದ್ವಾಂಸ ಪದವಿ. ಕೊಲಂಬಿಯಾ ಗ್ರಾಮಾಫೋನ್ ಕಂಪನಿಯಿಂದ ಹಲವಾರು ಧ್ವನಿ ಮುದ್ರಿಕೆಗಳು, ತಿರುಚಿ, ಮೈಸೂರು, ಬೆಂಗಳೂರು ಕೇಂದ್ರಗಳಿಂದ ಸಂಗೀತ ಕಾರ್ಯಕ್ರಮ ಪ್ರಸಾರ, ಆರ್.ಆರ್. ಕೇಶವಮೂರ್ತಿ, ಟಿ. ಚೌಡಯ್ಯ ಮುಂತಾದವರ ಪಕ್ಕವಾದ್ಯ. ಸೋಸಲೆ ಮಠಾಧಿಪತಿಗಳಿಂದ ಸ್ವರ್ಣಪದಕ, ಆಸ್ಥಾನ ಸಂಗೀತ ಚೂಡಾಮಣಿ, ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ, ಗಾಯನ ಸಮಾಜದ ಸಮ್ಮೇಳನಾಧ್ಯಕ್ಷತೆ, ಸಂಗೀತರತ್ನ ಪ್ರಶಸ್ತಿ, ಬಿ. ದೇವೇಂದ್ರಪ್ಪನವರಿಂದ ಸಂಗೀತ ಸಾಮ್ರಾಟ ಪ್ರಶಸ್ತಿ, ತ್ಯಾಗರಾಜ ಗಾನಸಭೆಯ ಕಲಾಭೂಷಣ ಮುಂತಾದ ಪ್ರಶಸ್ತಿಗಳು. ಇದೇ ದಿನ ಹುಟ್ಟಿದ ಕಲಾವಿದರು ಆರ್.ಕೆ. ಶ್ರೀನಿವಾಸಮೂರ್ತಿ – ೧೯೩೫ ಸುಬ್ಬಣ್ಣ ಕೆ.ಆರ್. – ೧೯೫೨ ವೀ.ಬ. ಹಿರೇಮಠ – ೧೯೫೪