ಚಿಂತಾಮಣಿ ಕೊಡ್ಲೆಕೆರೆ

Home/Birthday/ಚಿಂತಾಮಣಿ ಕೊಡ್ಲೆಕೆರೆ
Loading Events
This event has passed.

೧೮-೧-೧೯೬೧ ಕವಿ, ಕಥೆಗಾರ, ವಿಮರ್ಶಕ, ಪ್ರಬಂಧಕಾರ ಚಿಂತಾಮಣಿ ಕೊಡ್ಲೆಕೆರೆಯವರು ಹುಟ್ಟಿದ್ದು ಗೋಕರ್ಣದ ಬಳಿಯ ಅಘನಾಶಿನಿ. ತಂದೆ ಎಂ.ಎ. ಭಟ್ಟ, ತಾಯಿ ಶ್ರೀಮತಿ ರಾಧೆ. ಆರಂಭಿಕ ವಿದ್ಯಾಭ್ಯಾಸ ಹಿರೇಗುತ್ತಿಯಲ್ಲಿ. ಕಾಲೇಜು ಕಲಿತದ್ದು ಕುಮಟಾ, ಶಿರ್ಶಿ, ಧಾರವಾಡಗಳಲ್ಲಿ. ಧಾರವಾಡದಲ್ಲಿ ಓದಿದ್ದು ಬಿ.ಎಸ್ಸಿ, ತ್ರಿವೆಂಡ್ರಮ್‌ನಲ್ಲಿ ಒಂದು ವರ್ಷದ ಟೆಲಿಕಮ್ಯುನಿಕೇಶನ್  ಎಂಜನಿಯರಿಂಗ್ ತರಬೇತಿ. ಬೆಂಗಳೂರಿನಲ್ಲಿ ಎಂ.ಬಿ.ಎ. ಪದವಿ. ಎಳೆವೆಯಿಂದಲೇ ಬೆಳೆದ ಕಾವ್ಯಾಸಕ್ತಿ. ಬೆಳೆದ ಪರಿಸರದ ಲಾಭ. ಮಾಸಿಕ ಪತ್ರಿಕೆಗಳಿಗೆ ಮೊದಲು ಬರೆದದ್ದು ಹನಿಗವನಗಳು. ಮೊದಲ ಕವಿತೆ ಉದಯವಾಣಿಯಲ್ಲಿ ಪ್ರಕಟ. ವಿದ್ಯಾರ್ಥಿ ದೆಸೆಯಲ್ಲೇ ಬರೆದ ‘ಬದುಕು ಬೇಡ ಅನ್ನಿಸಲ್ಲಿಲ್ಲ’ ಎಂಬ ಪದ್ಯಕ್ಕೆ ಬಹುಮಾನ. ಹೊನ್ನಾವರದ ಸ್ಥಳೀಯ ಪತ್ರಿಕೆಗೆ ‘ಮುಖಾಮುಖಿ’ ಎಂಬ ತಲೆಬರಹದ ಅಂಕಣ ಬರಹ. ಕನ್ನಡಪ್ರಭ, ಕರ್ಮವೀರ ವಿಶೇಷಾಂಕಗಳಲ್ಲಿ  ಬಹುಮಾನಿತ ಕಥೆಗಳು. ಕನ್ನಡಪ್ರಭ, ವಿಜಯಕರ್ನಾಟಕ ಪತ್ರಿಕೆಯಲ್ಲಿ ಕಾವ್ಯ ವಿಮರ್ಶೆ. ಒಂದರ ಹಿಂದೊಂದರಂತೆ ಹಲವಾರು ಕೃತಿಗಳ ಪ್ರಕಟಣೆ. ಈ ಜಗತ್ತು, ಭೂಮಧ್ಯರೇಖೆ-ಕವನ ಸಂಕಲನ ; ಬಭ್ರುವಾಹನ ಮತ್ತು ಇರುವೆ-ಕಥಾಸಂಕಲನ ; ಸಿಂಡ್ರೆಲಾ-ಅಂಬ್ರಲಾ-ಮಕ್ಕಳ ಕವಿತೆಗಳು ; ಮೊದಲ ಮನೆಯ ಮೆಟ್ಟಿಲು-ಪ್ರಬಂಧ ಸಂಕಲನ ; ೬೮ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ  ಪ್ರಕಟವಾದ ಜನಕನ ಕನಸು ಲೇಖನ ಸಂಗ್ರಹ. ವೃತ್ತಿಯಲ್ಲಿ ಎಂಜನಿಯರಾದರೂ ಮೈಗೂಡಿಸಿಕೊಂಡದ್ದು ಸಾಹಿತ್ಯ ಪ್ರವೃತ್ತಿ. “ಕನ್ನಡ ಕಾವ್ಯದ ಪರಿಪ್ರೇಕ್ಷ್ಯದಲ್ಲಿ  ಕಾವ್ಯ ಮತ್ತು ತಾತ್ವಿಕತೆಗಳ ಸಂಬಂಧ” ಮಹಾಪ್ರಬಂಧಕ್ಕೆ ಹಂಪಿ ವಿಶ್ವವಿದ್ಯಾಲಯದ ಡಾಕ್ಟರೇಟ್. ಸಂದ ಪ್ರಶಸ್ತಿಗಳು ಹಲವಾರು. ತಲೆಮಾರಿನ ಕೊನೆಯ ಕೊಂಡಿ ಕೃತಿಗೆ ಬಿ.ಎಚ್. ಶ್ರೀಧರ ಪ್ರಶಸ್ತಿ, ಎರಡು ಬಾರಿ ರತ್ನಾಕರವರ್ಣಿ ಮುದ್ದಣ ಅನಾಮಿಕ ಪ್ರಶಸ್ತಿ, ಆರ್.ಬಿ.ಐ.ನ ಬೆಳ್ಳಿ ಹಬ್ಬದ ಪ್ರಶಸ್ತಿ ಮುಂತಾದುವು. ಪ್ರಸ್ತುತ ಬಿ.ಎಸ್.ಎನ್.ಎಲ್.ನಲ್ಲಿ ಸಬ್ ಡಿವಿಜನಲ್ ಇಂಜಿನಿಯರ್ ಹುದ್ದೆಯಲ್ಲಿ ಕಾರ‍್ಯನಿರತರು.   ಇದೇ ದಿನ ಹುಟ್ಟಿದ ಸಾಹಿತಿಗಳು : ಜಿ.ವಿ. ಗಣೇಶಯ್ಯ – ೧೯೪೭ ಕನ್ನಿಕಾ ಹೆಗಡೆ – ೧೯೫೧ ಅಗ್ರಹಾರ ಕೃಷ್ಣಮೂರ್ತಿ – ೧೯೫೩ ಪಿ.ಕೆ. ಗಾಯತ್ರಿ – ೧೯೫೭ ಜಗನ್ನಾಥರಾವ್ ಬಹುಳೆ – ೧೯೬೫

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top