Loading Events

« All Events

  • This event has passed.

ಚ. ವಾಸುದೇವಯ್ಯ

August 2, 2023

೨-೮-೧೮೫೨ ೨೬-೧೨-೧೯೪೩ ಹೊಸಗನ್ನಡದ ಭಾಷಾ ಸಾಹಿತ್ಯದ ಪ್ರವರ್ತಕರಲ್ಲೊಬ್ಬರಾದ ವಾಸುದೇವಯ್ಯನವರು ಹುಟ್ಟಿದ್ದು ಚನ್ನಪಟ್ಟಣದಲ್ಲಿ. ಪ್ರಾರಂಭಿಕ ಶಿಕ್ಷಣ ಚನ್ನಪಟ್ಟಣದ ಆಂಗ್ಲೋವರ್ನಾಕ್ಯುಲರ್ ಶಾಲೆಯಲ್ಲಿ. ಸೆಂಟ್ರಲ್ ಕಾಲೇಜಿಗೆ ಎಫ್.ಎ. ತರಗತಿಗೆ ಸೇರಿದರಾದರೂ ಕಾರಣಾಂತರದಿಂದ ವಿದ್ಯಾಭ್ಯಾಸಕ್ಕೆ ಅಡೆತಡೆ. ೧೯ನೇ ವಯಸ್ಸಿನಲ್ಲಿಯೇ ಉದ್ಯೋಗ ಪ್ರಾರಂಭ. ಕೆಲಕಾಲ ಸೆಂಟ್ರಲ್ ಕಾಲೇಜಿನಲ್ಲಿ ಉಪಾಧ್ಯಾಯ ವೃತ್ತಿ. ನಂತರ ವಿದ್ಯಾ ಇಲಾಖೆಯ ಇನ್‌ಸ್ಪೆಕ್ಟರ್ ಜನರಲ್ ಕಚೇರಿಯಲ್ಲಿ ಗುಮಾಸ್ತರ ಹುದ್ದೆ. ಆ ಕಚೇರಿಯಲ್ಲಿಯೇ ಮ್ಯಾನೇಜರ್. ಆಫೀಸ್ ಅಸಿಸ್ಟೆಂಟ್ ಆಗಿ ೧೯೧೦ರಲ್ಲಿ ನಿವೃತ್ತಿ. ಮನೆ ಮಾತು ತೆಲುಗು. ಕನ್ನಡ, ಸಂಸ್ಕೃತ, ಇಂಗ್ಲಿಷ್ ಭಾಷೆಗಳಲ್ಲಿ ಪಾಂಡಿತ್ಯ. ಬಂಗಾಳಿ ಭಾಷೆಯಲ್ಲಿಯೂ ಪರಿಶ್ರಮ. ಮಕ್ಕಳಿಗಾಗಿ ಹಲವಾರು ಪುಸ್ತಕಗಳ ರಚನೆ. ಕನ್ನಡ ಬಾಲಬೋಧೆಗಳು ಸರಳ ಗದ್ಯ, ಆಕರ್ಷಕ ನಿರೂಪಣೆಯಿಂದ ಕೂಡಿದ್ದು ಗಳಿಸಿದ ಜನಪ್ರಿಯತೆ. ಹಲವಾರು ವರ್ಷ ಪ್ರಾಥಮಿಕ ಶಾಲೆಗಳಿಗೆ ಪಠ್ಯಪುಸ್ತಕಗಳಾಗಿ ಪರಿಗಣಿತ. ಲಕ್ಷಾಂತರ ಮಕ್ಕಳ ಭವಿಷ್ಯ ರೂಪಿಸುವಲ್ಲಿ ನೆರವಾದ ಪುಸ್ತಕಗಳು. ಹೊಸಗನ್ನಡದ ಅರುಣೋದಯ ಕಾಲದಲ್ಲಿ ತಮ್ಮ ಭಾಷಾಂತರದಿಂದ ಸೆಳೆದ ಹಲವಾರು ಜನರ ಗಮನ. ಕನ್ನಡ ಕಟ್ಟುವ ಕೆಲಸದಲ್ಲಿ ಗುರುತರ ಸೇವೆ. ರಜನಿಕಾಂತ ಗುಪ್ತರವರು ಬಂಗಾಳಿ ಭಾಷೆಯಲ್ಲಿ ಬರೆದಿದ್ದ ‘ರಾಜಪುತ್ರ ಮಹಿಮೆ’ ಎಂಬ ಪುಸ್ತಕವನ್ನು ಆರ್ಯಕೀರ್ತಿ ಭಾಗ-೧ (೧೮೯೬) ಎಂಬ ಹೆಸರಿನಿಂದ ಕನ್ನಡಕ್ಕೆ ಭಾಷಾಂತರ. ಸತ್ಯ ಚರಣ ಶಾಸ್ತ್ರಿಗಳ ‘ಮಹಾರಾಷ್ಟ್ರಾಪತಿ ಶಿವಾಜಿ’ ಮಹಾರಾಜರ ಚರಿತ್ರೆಯನ್ನು ‘ಆರ್ಯಕೀರ್ತಿ-ಭಾಗ-೨’ (೧೮೯೮) ಎಂಬ ಹೆಸರಿನಿಂದ ಭಾಷಾಂತರ. ಈ ಪುಸ್ತಕದಲ್ಲಿ ಶಿವಾಜಿಯ ಸ್ವಧರ್ಮ ದೀಕ್ಷೆ, ರಾಜಪುತ್ರರ ಧೈರ‍್ಯ, ದೇಶಾಭಿಮಾನ, ರಾಜಪುತ್ರಿಯರ ಉಗ್ರ ವ್ರತನಿಷ್ಠೆ ಮುಂತಾದ ವಿಷಯಗಳ ಮಂಡನೆ. ಮಹಾಭಾರತವನ್ನು ಆಧರಿಸಿ ರಚಿಸಿದ ಕೃತಿ ‘ಭೀಷ್ಮನ ಸತ್ಯ ಪ್ರತಿಜ್ಞೆ’ ೧೯೨೭ರಲ್ಲಿ ಪ್ರಕಟಿತ. ಬೆಂಗಳೂರಿನ ಮಲ್ಲೇಶ್ವರಂ ಸಹಕಾರಿ ಸಂಸ್ಥೆಯ ಸ್ಥಾಪಕರಲ್ಲೊಬ್ಬರು. ಹಲವಾರು ವರ್ಷ ಶ್ರೀರಾಮಮಂದಿರದ ಅಧ್ಯಕ್ಷರು. ಕನ್ನಡ ಸಾಹಿತ್ಯ ಪರಿಷತ್ತಿನ ಕಾರ‍್ಯಕಾರಿ ಸಮಿತಿಯ ಸದಸ್ಯರು. ಇವರ ಸರಳ ಸಜ್ಜನಿಕೆಯನ್ನು ಗುರುತಿಸಿ ಸೆಂಟ್ರಲ್ ಕಾಲೇಜಿನ ಕರ್ನಾಟಕ ಸಂಘ ೧೯೨೬ರಲ್ಲಿ ಬಿನ್ನವತ್ತಳೆ ಅರ್ಪಿಸಿ ಗೌರವಿಸಿತು. ೧೯೪೨ರಲ್ಲಿ ಸಾಹಿತ್ಯ ಪರಿಷತ್ತಿನಿಂದ ಸನ್ಮಾನ. ಇವರ ನಿಧನಾನಂತರ ಮಗ ಚ.ವಾ. ರಾಘವೇಂದ್ರಯ್ಯನವರಿಂದ ಇವರ ಜೀವನಚರಿತ್ರೆ ಪ್ರಕಟಿತ.   ಇದೇ ದಿನ ಹುಟ್ಟಿದ ಸಾಹಿತಿಗಳು : ಡಿ.ಸಿ. ಪಾರ್ವತಿ – ೧೮೯೯ ಮನೋಹರ ಭಾಲಚಂದ್ರ ಘಾಣೇಕರ್ – ೧೯೨೫ ಎಂ.ಜಿ. ಗಂಗನಪಳ್ಳಿ – ೧೯೪೬

Details

Date:
August 2, 2023
Event Category: