Loading Events

« All Events

ಜಯತೀರ್ಥ ರಾಜಪುರೋಹಿತ

July 1

೧-೭-೧೯೨೫ ೨೬-೪-೧೯೮೬ ದಕ್ಷ ಆಡಳಿತಗಾರ, ಸಾಹಿತಿ, ಜಯತೀರ್ಥ ರಾಜಪುರೋಹಿತರು ಹುಟ್ಟಿದ್ದು ಗಂಗಾವತಿ ತಾಲ್ಲೂಕಿನ ಕನಕಗಿರಿಯಲ್ಲಿ. ತಂದೆ ಶೇಷಾಚಾರ‍್ಯ, ತಾಯಿ ರಂಗಮ್ಮ. ಶಾಲೆಯಲ್ಲಿ ಕಲಿತದ್ದರ ಜೊತೆಗೆ ತಂದೆಯಿಂದ ಸಂಸ್ಕೃತಾಭ್ಯಾಸ. ಮಧ್ವ ಪಂತಕ್ಕೆ ಸೇರಿದ ಹರಿದಾಸರ ಹಾಡುಗಳನ್ನು ಕಲಿತು, ಚಿಕ್ಕವರಿದ್ದಾಗಲೇ ಜಾತ್ರೆ, ಉತ್ಸವಗಳಲ್ಲಿ ಹರಿಕಥೆ ಮಾಡಿ ಸೈ ಎನಿಸಿಕೊಂಡವರು. ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ಎಸ್.ಎಸ್.ಎಲ್.ಸಿ. ನಂತರ ಇಂಟರ್ ಪರೀಕ್ಷೆ. ಹೈದರಾಬಾದ್ ಉಸ್ಮಾನಿಯ ವಿಶ್ವವಿದ್ಯಾಲಯದಿಂದ ಪಡೆದ ಬಿ.ಎ. ಪದವಿ. ಡೆಪ್ಯುಟಿ ಕಮೀಷನರ್, ಮುನಿಸಿಪಲ್ ಕಮೀಷನರ್, ವಿ.ವಿ.ದ ಪರೀಕ್ಷಾ ನಿಯಂತ್ರಣಾಕಾರಿ, ನೀರಾವರಿ ಯೋಜನೆಗಳ ಆಡಳಿತಾಕಾರಿ, ವಿಶೇಷ ಜಿಲ್ಲಾಕಾರಿ, ಕನ್ನಡ ಅಭಿವೃದ್ಧಿ ನಿರ್ದೇಶನದ ಪ್ರಥಮ ನಿರ್ದೇಶಕರಾಗಿ, ವಿದ್ಯಾ ಇಲಾಖೆಯ ಉಪಕಾರ‍್ಯದರ್ಶಿಯಾಗಿ, ಆಗ ಸ್ಥಾಪನೆಯಾಗಬೇಕಿದ್ದ ಗುಲಬರ್ಗಾ ವಿಶ್ವವಿದ್ಯಾಲಯದ ನಿಯೋಜಿತ ಅಕಾರಿ, ಸ್ಥಾಪನೆ ನಂತರ ಪ್ರಥಮ ಕುಲ ಸಚಿವರಾಗಿ ಹೀಗೆ ವಿವಿಧ ಹುದ್ದೆಗಳಲ್ಲಿದ್ದು, ಕನ್ನಡ ಅಭಿವೃದ್ಧಿ ನಿರ್ದೇಶನಾಲಯದ ನಿರ್ದೇಶಕರಾಗಿದ್ದಾಗ ಕನ್ನಡ ಅಭಿವೃದ್ಧಿಗೆ ಭದ್ರಬುನಾದಿ ಹಾಕಿದರು. ಸಾಹಿತಿಯಾಗಿಯೂ ಹೆಸರು ಗಳಿಕೆ. ಕಾದಂಬರಿಗಳು-ಹಾಲುಜೇನು, ಸುಳಿಗಾಳಿ, ಕಡಲತೋಳ (ಅನುವಾದ). ಕಥಾಸಂಕಲನಗಳು – ಪಾರವ್ವನ ಪಂಚಾಯಿತಿ, ರೋಹಿಣಿ, ಮೌಲ್ಯಗಳು, ಶಿಥಿಲ ಶಿಲೆ. ಗೀತರೂಪಕ – ತುಂಗೆಯಂಗಳದಲ್ಲಿ. ನಾಟಕ-ಕುಮಾರವ್ಯಾಸ, ಜಯಬಾಂಗ್ಲಾ. ಜೀವನಚರಿತ್ರೆ-ವ್ಯಾಸರಾಯರು, ಜಗನ್ನಾಥದಾಸರು, ಸುರಪುರದ ಶೂರನಾಯಕರು, ಸ್ವಾಮಿರಾಮತೀರ್ಥ. ಕನ್ನಡ ತೀರ್ಪುಗಳು ಖ್ಯಾತಿ ತಂದುಕೊಟ್ಟ ಕೃತಿ. ಕನ್ನಡ ತೀರ್ಪುಗಳು ಕೃತಿಗೆ ರಾಜ್ಯಸರಕಾರದ ವಿಶೇಷ ಬಹುಮಾನ, ಸುಳಿಗಾಳಿ ಕಾದಂಬರಿಗೆ ಸುಧಾ ಪತ್ರಿಕೆಯ ರಾಜ್ಯಮಟ್ಟದ ಬಹುಮಾನ, ರಾಜ್ಯಸಾಹಿತ್ಯ ಅಕಾಡಮಿ ಪುರಸ್ಕಾರ ಮೊದಲ್ಗೊಂಡು ಹಲವಾರು ಪ್ರಶಸ್ತಿಗಳು. ಇವರ ಕನ್ನಡ ಮನಸ್ಸನ್ನು ಗುರುತಿಸಿ ಅರ್ಪಿಸಿದ ಗೌರವ ಗ್ರಂಥ ‘ಜಯತೀರ್ಥ.’   ಇದೇ ದಿನ ಹುಟ್ಟಿದ ಸಾಹಿತಿಗಳು : ಕುಂಬಾಸ – ೧೯೩೬ ಹಿ.ಮ. ನಾಗಯ್ಯ – ೧೯೨೪-೨೫.೭.೯೨ ಎಚ್.ಆರ್. ದಾಸೇಗೌಡ – ೧೯೩೪ ಮೋಗಳ್ಳಿ ಗಣೇಶ್ – ೧೯೬೨ ವಿಷ್ಣುನಾಯ್ಕ – ೧೯೪೪ ಎಚ್.ಕೆ. ರಾಮಚಂದ್ರಮೂರ್ತಿ – ೧೯೨೫ ಹರಿದಾಸ್ ಕೆ.ಕೆ. ಕಾಳಾವರ್ – ೧೯೪೩ ಕವಿತಾ ಕೃಷ್ಣ – ೧೯೪೪ ಬಾಳಣ್ಣ ಸೀಗೀಹಳ್ಳಿ – ೧೯೪೭ ಡಾ. ಚಂದ್ರಶೇಖರ ದಾಮ್ಲೆ – ೧೯೫೧

Details

Date:
July 1
Event Category: