ಜಯವಂತಿ ದೇವಿ ಹಿರೇಬೆಟ್

Home/Birthday/ಜಯವಂತಿ ದೇವಿ ಹಿರೇಬೆಟ್
Loading Events
This event has passed.

೨೪.೦೪.೧೯೨೭ ಸಂಗೀತ ಕ್ಷೇತ್ರದಲ್ಲಿ ಅಗಾಧ ಸಾಧನೆ ಮಾಡಿದ್ದರೂ ಕಲಿಕೆಯ ವಿಷಯ ಬಂದಾಗ ವಯಸ್ಸನ್ನೂ ಮರೆತು ತೀರದ ದಾಹ ಪ್ರಕಟಿಸುತ್ತಿದ್ದ ಜಯವಂತ ದೇವಿ ಹಿರೇಬೆಟ್ ರವರು ಹುಟ್ಟಿದ್ದು ಮಂಗಳೂರಿನಲ್ಲಿ. ತಂದೆ ಪಡುಕೋಣೆ ರಮಾನಂದರಾಯರು. ತಾಯಿ ಸೀತಾದೇವಿ. ಮನೆತನವೇ ಸಂಗೀತ ಸಾಹಿತ್ಯ, ನಾಟಕ ಮುಂತಾದ ಕಲೆಗಳ ಆಗರ. ಓದಿದ್ದು ಹೈಸ್ಕೂಲಿನವರೆಗೆ, ತಂದೆಗೆ ಮದರಾಸಿಗೆ ವರ್ಗವಾಗಿ ಕನ್ನಡ ಶಾಲೆಯಲ್ಲದೆ ವಿದ್ಯೆ ಅಪೂರ್ಣ. ತಾಯಿಯವರೇ ಸಂಗೀತದ ಮೊದಲ ಗುರು. ತಾಯಿ ಹಾಡುತ್ತಿದ್ದ ಹಾಡುಗಳ ಜೊತೆಗೆ ಸೇರಿದ ಧ್ವನಿ. ಚಿಕ್ಕಪ್ಪ ಪ್ರಭಾಕರ ರಾಯದಿಂದ ಹಿಂದೂಸ್ತಾನಿ ಸಂಗೀತದ ಪಾಠ. ಮುಂಬಯಿಯಿಂದ ಬರುತ್ತಿದ್ದ ಕಲಾವಿದರಿಂದ ಹಿಂದಿ, ಮರಾಠಿ ಹಾಡುಗಳನ್ನು ಕಲಿಯಲು ತಾಯಿಯಿಂದ ದೊರೆತ ಪ್ರೋತ್ಸಾಹ. ಮದರಾಸಿನಲ್ಲಿ ಇವರ ಮನೆಪಕ್ಕದಲ್ಲೇ ಸಂಗೀತ ನಿರ್ದೇಶಕ ವಿ. ನಾಣಯ್ಯನವರ ಕಚೇರಿ. ಪ್ರತಿದಿನ ಪಕ್ಕದ ಮನೆಯಿಂದ ಕೇಳಿಬರುತ್ತಿದ್ದ ಹಾಡುಕೇಳಿ, ಎಚ್.ಎಂ.ವಿ. ಕಂಪನಿಗಾಗಿ ಇವರ ನಿರ್ದೇಶನದಲ್ಲೇ ಹೊರ ತಂದ ಧ್ವನಿಮುದ್ರಿಕೆಗಳು. ಮದರಾಸಿನ ಆಲ್ ಇಂಡಿಯಾ ರೇಡಿಯೋದಲ್ಲೂ ನಡೆಸಿಕೊಟ್ಟ ಕಾರ್ಯಕ್ರಮಗಳು. ತ್ಯಾಗಯ್ಯಚಿತ್ರದಲ್ಲಿ ಉತ್ತರ ಭಾರತದಿಂದ ಬಂದ ಗಾಯಕಿಯ ಪಾತ್ರವಹಿಸಿ ಹಾಡಿದ ಹಿಂದಿ ಗಜ಼ಲ್, ’ಕಲ್ಪನ’ ಹಿಂದಿ ಚಿತ್ರಕ್ಕಾಗಿ ಹಿಂಬದಿಯ ಗಾಯಕಿಯಾಗಿ ಒಂದೆರಡು ಹಾಡುಗಳು. ಮಹಾತ್ಮಾ ಗಾಂಧಿಯವರ ಪ್ರಾರ್ಥನಾ ಸಭೆಯಲ್ಲಿ ವಂದೇ ಮಾತರಂ ಹಾಡುವ ಅವಕಾಶ. ಹೀಗೆ ಹಲವಾರು ಸಂದರ್ಭದಲ್ಲಿ ದೊರೆತ ಹಾಡುಗಾರಿಕೆಗೆ ಅವಕಾಶ. ಮದುವೆಯ ನಂತರ ಪುಣೆಗೆ ಹೋದಾಗ ಮುಂಬಯಿ ಆಕಾಶವಾಣಿಯಿಂದ ಹಲವಾರು ಕಾರ್ಯಕ್ರಮಗಳ ಪ್ರಸಾರ. ಬಬನ್ ರಾವ್ ನಾವಡೀಕರ್‌, ಮುಂಬಯಿಯ ವಸಂತದೇವ್, ಹಫೀಜ್ ಅಹಮದ್ ಮುಂತಾದವರಿಂದ ಮರಾಠಿ ಭಾವಗೀತೆ, ಅಭಂಗ್, ಹಿಂದಿ ಗೀತೆಗಳನ್ನು ಕಲಿತು, ಪುಣೆ, ಮುಂಬಯಿ ಆಕಾಶವಾಣಿಗಾಗಿ ಹಾಡಿದರು, ಕನ್ನಡದ ಭಾವಗೀತೆಯನ್ನು ಹಾಡಲು ಬೇಂದ್ರೆಯವರಿಂದ ದೊರೆತ ಪ್ರೋತ್ಸಾಹ. ಎಚ್.ಎಂ.ವಿ. ಸಂಸ್ಥೆಯಿಂದ ಕೆ.ಎಸ್.ನರಸಿಂಹಸ್ವಾಮಿಗಳ ಹಾಡುಗಳ ಧ್ವನಿಮುದ್ರಿಕೆ ಬಿಡುಗಡೆ. ಹಲವಾರು ಪ್ರಶಸ್ತಿ ಗೌರವಗಳು. ಸಂಗೀತ ಗಂಗಾ ಸಂಸ್ಥೆಯು ಸಂಗೀತ ಸಮ್ಮೇಳನದ ಅಧ್ಯಕ್ಷ ಪದವಿ ನೀಡಿ ತೋರಿದ ಗೌರವ. ಕರ್ನಾಟಕದ ಪ್ರತಿಷ್ಠಿತ ಪ್ರಶಸ್ತಿಯಾದ ಸಂತ ಶಿಶುನಾಳ ಶರೀಫ್ ಪ್ರಶಸ್ತಿಯ ಮೊದಲ ಪುರಸ್ಕೃತೆ ಎಂಬ ಹೆಗ್ಗಳಿಕೆ.   ಇದೇದಿನಹುಟ್ಟಿದಕಲಾವಿದರು: ಅಚ್ಯುತರಾವ್ ಪದಕಿ – ೧೯೪೭ ರಾಮಾನುಜನ್ ಜಿ.ಎಸ್. – ೧೯೫೮ ಕೆ.ವಿ.ಅಕ್ಷರ – ೧೯೬೦ ನಿರ್ಮಲ ಕುಮಾರಿ – ೧೯೬೨ ಶ್ರೀಧರ್‌ ಎಸ್.ಚವಾಣ್ – ೧೯೭೧.

* * *

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top