ಜಯಶ್ರೀ ಗುತ್ತಲ

Home/Birthday/ಜಯಶ್ರೀ ಗುತ್ತಲ
Loading Events
This event has passed.

೨೬.೦೬.೧೯೪೫ ಸುಗಮ ಸಂಗೀತ, ಜನಪದ ಗೀತೆಗಳ ವಿಶಿಷ್ಟ ಗಾಯಕಿ ಜಯಶ್ರೀಯವರು ಹುಟ್ಟಿದ್ದು ವಿಜಾಪುರ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಹುಲ್ಲಿಕೇರಿ ಗ್ರಾಮದಲ್ಲಿ. ತಂದೆ ತಿರುಮಲ ರಾವ್ ದೇಶಪಾಂಡೆ, ಹವ್ಯಾಸಿ ನಾಟಕ ಕಲಾವಿದರು ಮತ್ತು ವಾಸುದೇವ ವಿನೋದಿನಿ ನಾಟ್ಯ ಮಂಡಲಿಯ ಸಂಸ್ಥಾಪಕ ಸದಸ್ಯರು. ತಾಯಿ ಲಕ್ಷ್ಮೀಬಾಯಿ ಕೂಡಾ ಸಂಗೀತ ಕಲಾವಿದರು. ಪ್ರಾಥಮಿಕ ಶಿಕ್ಷಣ ಬಾಗಲಕೋಟೆ ಮತ್ತು ಸಕ್ರಿ ಹೈಸ್ಕೂಲಿನಲ್ಲಿ. ಕಲಾವಿದರ ಕುಟುಂಬದಲ್ಲಿ ಹುಟ್ಟಿದ್ದರ ಪ್ರಭಾವದಿಂದ ಎಳೆತನದಲ್ಲೇ ಸಂಗೀತದ ಬಗ್ಗೆ ಮೂಡಿದ ಆಸಕ್ತಿ. ಪಂ. ಭೀಮಸೇನ ಜೋಶಿಯವರ ಕಕ್ಕಂದಿರಾದ ಶ್ಯಾಮಾಚಾರ್ಯ ಜೋಶಿಯವರಲ್ಲಿ ಹಿಂದೂಸ್ತಾನಿ ಸಂಗೀತ ಶಿಕ್ಷಣ. ಧಾರವಾಡದ ಆಕಾಶವಾಣಿ ಕಲಾವಿದರಾಗಿದ್ದ ಜಿ. ಆರ್‌. ನಿಂಬರಗಿಯವರಲ್ಲಿ ಮುಂದುವರೆದ ಸಂಗೀತ ಶಿಕ್ಷಣ. ಶಾಸ್ತ್ರೀಯ ಸಂಗೀತಕ್ಕಿಂತ ಜಾನಪದ ಶೈಲಿ, ದಾಸರ ಪದಗಳು, ಭಕ್ತಿಗೀತೆಗಳ ಹಾಡುಗಾರರಾಗಿ ಪಡೆದ ಪ್ರಾವೀಣ್ಯತೆ, ನಡೆಸಿಕೊಟ್ಟ ಕಾರ್ಯಕ್ರಮಗಳು. ಬೆಳಗಾವಿಯ ಕನ್ನಡ ಸಾಹಿತ್ಯ ಸಮ್ಮೇಳನ, ವಿಜಾಪುರದ ನವರಸಪುರದ ಕಾರ್ಯಕ್ರಮ, ಮುದ್ದೇ ಬಿಹಾಳ, ಹೊಸಪೇಟೆ, ಮುನಿರಾಬಾದ್, ಮುತ್ತಗಿ, ಬೆಂಗಳೂರು, ಮೈಸೂರು, ತಿರುಪತಿ, ಶಿವಮೊಗ್ಗ, ರಾಣಿಬೆನ್ನೂರು, ಗೋವಾಗಳಲ್ಲಿ ನಡೆಸಿಕೊಟ್ಟ ಕಾರ್ಯಕ್ರಮಗಳು. ಆಕಾಶವಾಣಿ, ದೂರದರ್ಶನಗಳಲ್ಲಿಯೂ ನಡೆಸಿಕೊಟ್ಟ ಹಲವಾರು ಜಾನಪದ ಗಾಯನ, ಆಶುಭಾಷಣ, ಸಂದರ್ಶನಗಳ ಪ್ರಸಾರ. ಜಾನಪದ ಸಂಗೀತದ ಬಗ್ಗೆ ಮಾಡಿದ ಆಳವಾದ ಅಧ್ಯಯನ. ಪತ್ರಿಕೆಗಳಿಗೆ ಬರೆದ ಹಲವಾರು ಲೇಖನಗಳು. ಉತ್ತರ ಕರ್ನಾಟಕದ ಹಾಡುಗಳು, ಸೋಬಾನೆ ಪದಗಳು, ಕೋಲಾಟದ ಪದಗಳನ್ನು “ಜನಪದ ಮಂಗಲ ಗೀತೆಗಳು” ಎಂಬ ಹೆಸರಿನಿಂದ ಯಕ್ಷಗಾನ ಅಕಾಡಮಿಯಿಂದ ಪ್ರಕಟಿತ. ಹರಿದಸ ಸಾಹಿತ್ಯ ಸುಧೆ, ಹರಿದಾಸರ ಅಪೂರ್ವ ಕೀರ್ತನೆಗಳ ಸಂಗ್ರಹ, ಜನಪದ ಗೀತ ಗುಚ್ಛ ಕೃತಿಗಳೂ ಪ್ರಕಟಿತ. ಹಲವಾರು ಸಂಘ ಸಂಸ್ಥೆಗಳೊಡನೆ ಒಡನಾಟ. ಕರ್ನಾಟಕ ಜಾನಪದ ಮಹಿಳಾ ವೇದಿಕೆ, ಧಾರವಾಡದ ಸುರ ಸಂಗೀತ ಸಭಾ, ಕರ್ನಾಟಕ ರಾಜ್ಯ ಜಾನಪದ ಅಕಾಡಮಿ ಜವಾಬ್ದಾರಿಯುತ ಹುದ್ದೆ. ಸಂದ ಪ್ರಶಸ್ತಿ ಗೌರವಗಳು: ಗೊರೂರು ಸಾಹಿತ್ಯ ಪ್ರಶಸ್ತಿ, ಅತ್ತಿಮಬ್ಬೆ ರನ್ನ ಸಾಹಿತ್ಯ ಪ್ರಶಸ್ತಿ, ಬೈಲಹೊಂಗಲ ಯುವಕ ಸಂಘದಿಂದ ಪ್ರವೀಣ ಪ್ರಶಸ್ತಿ, ಮಹಾರಾಷ್ಟ್ರದ ಅಖಿಲ ಭಾರತ ಕವಯಿತ್ರಿಯರ ಸಮ್ಮೇಳನದಿಂದ ಪ್ರಶಸ್ತಿ, ಕರ್ನಾಟಕ ಭೂಷಣ ಪ್ರಶಸ್ತಿ, ತಿರುಪತಿ ದೇವಸ್ಥಾನದಿಂದ ಹರಿದಾಸ ಜಾನಪದ ಪ್ರಶಸ್ತಿ ಮುಂತಾದುವು.   ಇದೇ ದಿನ ಹುಟ್ಟಿದ ಕಲಾವಿದರು ಕೃಷ್ಣಮೂರ್ತಿ ಎಚ್.ಎಸ್. – ೧೯೫೭ ಸುಶೀಲ ಮೆಹತಾ – ೧೯೫೭ ಸುಗ್ಗನಹಳ್ಳಿ ಷಡಕ್ಷರಿ – ೧೯೬೦

* * *

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top