Warning: mysqli_query(): MySQL server has gone away in E:\kanaja_new\wp-includes\wp-db.php on line 2056

Warning: mysqli_query(): Error reading result set's header in E:\kanaja_new\wp-includes\wp-db.php on line 2056

ಜಿ.ಎನ್‌. ಲಕ್ಷ್ಮಣ ಪೈ – ಕಣಜ

ಜಿ.ಎನ್‌. ಲಕ್ಷ್ಮಣ ಪೈ

Home/Birthday/ಜಿ.ಎನ್‌. ಲಕ್ಷ್ಮಣ ಪೈ
Loading Events

೧೧..೧೯೦೪ ೨೮..೧೯೭೫ ಹೊಯ್ಸಳರಂತೆ ಶಿಶುಸಾಹಿತ್ಯವನ್ನು ಶ್ರೀಮಂತಗೊಳಿಸಿದ ಮತ್ತೊಬ್ಬ ಸಾಹಿತಿಗಳೆಂದರೆ ಗುರುಪುರ ನರಸಿಂಹ ಲಕ್ಷ್ಮಣ ಪೈ (ಜಿ.ಎನ್‌. ಲಕ್ಷ್ಮಣ ಪೈ)ರವರೂ ಪ್ರಮುಖರು. ಮಂಗಳೂರು ತಾಲ್ಲೂಕಿನ ಮರಕಡ ಎಂಬಲ್ಲಿ ೧೯೦೪ರ ಮೇ ೧೧ ರಂದು ಹುಟ್ಟಿದ ಲಕ್ಷ್ಮಣ ಪೈರವರ ತಂದೆ ನರಸಿಂಹ ಪೈ, ತಾಯಿ ರುಕ್ಮಿಣಿಯಮ್ಮ. ಪ್ರಾರಂಭಿಕ ಶಿಕ್ಷಣ ಪುತ್ತೂರು. ಹೈಸ್ಕೂಲಿಗೆ ಸೇರಿದ್ದು ಮಂಗಳೂರಿನಲ್ಲಿ. ಉಗ್ರಾಣ ಮಂಗೇಶರಾಯರು ಇವರ ಉಪಾಧ್ಯಾಯರಾಗಿದ್ದರು. ಉಪಾಧ್ಯಾಯರ ಪದ್ಯಗಳಾದ ರಂಗ ಹಿತ್ತಲಲ್ಲಿ ಆಡು/ಅಮ್ಮ, ಆಡುತೇನೆ ನೋಡು/ ಮುಂತಾದ ರಚನೆಗಳನ್ನೂ ಓದುತ್ತಾ ಹೋದಂತೆಲ್ಲಾ ಸಾಹಿತ್ಯದ ಬಗ್ಗೆ ವಿಶೇಷ ಒಲವು ಬೆಳೆದು ತಾವೂ ಪದ್ಯಗಳನ್ನೂ ರಚಿಸತೊಡಗಿದರು. ಮದರಾಸು ವಿಶ್ವವಿದ್ಯಾಲಯದಿಂದ ವಿದ್ವಾನ್‌ ಪದವಿ ಪಡೆದ ನಂತರ ಪುತ್ತೂರಿನ ಸ್ಥಳೀಯ ಬ್ಯಾಂಕೊಂದರಲ್ಲಿ ಏಜೆಂಟರಾಗಿ ಕೆಲಸಕ್ಕೆ ಸೇರಿದರಾದರೂ ಬ್ಯಾಂಕ್‌ ದಿವಾಳಿಯಾದಾಗ ನಿರುದ್ಯೋಗಿಯಾಗಿ ಕಷ್ಟ ಅನುಭವಿಸಬೇಕಾಯಿತು. ನಂತರ ಸೇಲ್ಸ್‌ ಟ್ಯಾಕ್ಸ್‌ ಪ್ರ್ಯಾಕ್ಟೀಷನರಾಗಿ ಜೀವನ ಸಾಗಿಸತೊಡಗಿದರು. ಇಂಟರ್ಮೀಡಿಯೆಟ್‌ ಓದುತ್ತಿದ್ದಾಗಲೇ ಹಲವಾರು ಪದ್ಯಗಳನ್ನೂ ರಚಿಸಿದ್ದು ಅವುಗಳು ‘ಸ್ವದೇಶಾಭಿಮಾನ’ ಪತ್ರಿಕೆಯಲ್ಲಿ ಪ್ರಕಟವಾಗತೊಡಗಿದವು. ಇವರ ಸಾಹಿತ್ಯ ಬೆಳವಣಿಗೆಗೆ ಪ್ರಭಾವ ಬೀರಿದ ಇತರ ಸಾಹಿತಿಗಳೆಂದರೆ ಪಂಜೆಮಂಗೇಶರಾಯರು ಹಾಗೂ ಎಂ.ಎನ್‌. ಕಾಮತರು. ‘ಬಾಳೆಯ ತೋಟದ ಪಕ್ಕದ ಕಾಡೊಳು ವಾಸಿಸುತ್ತಿದ್ದವು ಮಂಗಗಳು’ ಎಂಬ ‘ಮಂಗಗಳ ಉಪವಾಸ’ ಪದ್ಯ ಬರೆದ ಮಚ್ಚಿಮಲೆ ಶಂಕರನಾರಾಯಣರಾಯರು ಇವರ ಸಮಕಾಲೀನರಾದರೆ ಗೋವಿಂದ ಪೈ, ಬಿ.ಎಂ.ಶ್ರೀ, ರಾಜರತ್ನಂ ಮುಂತಾದವರೊಡನೆ ಆತ್ಮೀಯ ಒಡನಾಟವಿತ್ತು. ಮೂಲತಃ ಸ್ಥಿತಿವಂತ ಕುಟುಂಬದಲ್ಲೇ ಹುಟ್ಟಿ ಬೆಳೆದಿದ್ದರೂ ಹಲವಾರು ಕಾರಣಗಳಿಂದ ಬಡತನದ ಬಾಳು ಬಾಳಬೇಕಾಗಿ ಬಂದದ್ದು ದುರ್ವಿಧಿಯಾದರೂ ಸಾಹಿತ್ಯಾಕಾಂಕ್ಷಿಯಾದ ಲಕ್ಷ್ಮಣ ಪೈರವರು ಹೊಟ್ಟೆಗಿಲ್ಲದಿದ್ದರೂ ಪುಸ್ತಕ ಖರೀದಿಸುವುದನ್ನು ನಿಲ್ಲಿಸುತ್ತಿರಲಿಲ್ಲ. ಕನ್ನಡ ಪದ್ಯರತ್ನಾವಳಿ, ಕೀರ್ತಿನಾಂಜಲಿ, ಶಿಶಿರುಗೀತಮಾಲೆ, ಅಭಿನಯ ಗೀತಮಂಜರಿ, ದಸರೆಯ ಕಾಣಿಕೆ, ಅಭಿನಯ ಗೀತಾವಳಿ ಮುಂತಾದ ಕವನ ಸಂಕಲನಗಳನ್ನೂ ಪ್ರಕಟಿಸಿದ್ದಾರೆ. ಅವುಗಳಲ್ಲಿ-

ಬಿಸಿಲು ಮಳೆಯು ಕೂಡಿದವು ಧಗೆಯನು ಕಡಿಮೆ ಮಾಡಿದವು ಕೋತಿಯು ಮಾಡಿತು ತುಂಟತನ ಕೋಳಿಯು ಮಾಡಿತು ಮೂರ್ಖತನ …………………………………. ………………………………….

ಸಂಭ್ರಮದೊಳಾಯಿತು ಮದುವೆ ಮರ್ಕಟ ಕುಕ್ಕಟರಾ ಮದುವೆ

ಎಂಬ ‘ಮಂಗನ ಮದುವೆ’ ಪದ್ಯ, ತೋಳ ಕುರಿಮರಿಯು, ಸ್ವರ್ಗನರಕ, ಮುಂತಾದ ಪದ್ಯಗಳು ಅಂದಿನ ಮಕ್ಕಳ ನಾಲಗೆಯಲ್ಲಿ ಹರಿದಾಡುತ್ತಿದ್ದವು. ದಾಮಾಜಿ ಪಂತ-ಕನ್ನಡನಾಟಕ, ಸತ್ಯವಾನ ಸಾವಿತ್ರಿ-ಕೊಂಕಣಿನಾಟಕ ‘ರಮಣ ಮಹರ್ಷಿ ಉಪದೇಶಗಳು’ -ಅನುವಾದ ಕೃತಿ, ಇವರ ಇತರ ಕೃತಿಗಳು. ಲಕ್ಷ್ಮಣ ಪೈರವರು ಸಂಗೀತಗಾರರಾಗಿದ್ದುದರಿಂದ ‘ಮಂಗನ ಮದುವೆ’ ಮತ್ತು ‘ತೋಳ ಕುರಿಮರಿ’ ಪದ್ಯಗಳನ್ನು ಸುಶ್ರಾವ್ಯವಾಗಿ ಹಾಡುತ್ತಿದ್ದುದನ್ನು ಅಂದಿನ ಸಮಕಾಲೀನರು ಕೇಳಿ ಆನಂದ ಪಟ್ಟಿದ್ದಾರೆ. ಶಿಶುಸಾಹಿತ್ಯದಲ್ಲಿ ಹಲವಾರು ಉತ್ತಮ ಪದ್ಯಗಳನ್ನು ನೀಡಿ, ಇಂದಿಗೂ ಓದುಗರನ್ನು ಸೆರೆಯಹಿಡಿಯಬಲ್ಲ ಪದ್ಯಬರೆದ, ಸುಮಾರು ೭೦ ವರ್ಷಗಳ ಸಾರ್ಥಕ ಜೀವನ ನಡೆಸಿದ ಲಕ್ಷ್ಮಣ ಪೈರವರಿಗೆ ಸೋಂಕಿನಿಂದ ಆನೆಕಾಲು ರೋಗಕ್ಕೆ ತುತ್ತಾಗಿ ೧೯೭೫ ರ ಜುಲೈಃ ೨೮ ರಂದು ತೀರಿಕೊಂಡದ್ದು ಶಿಶುಸಾಹಿತ್ಯ ಕ್ಷೇತ್ರಕ್ಕಾದ ನಷ್ಟ ಅಪಾರ.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

ಕೇಂದ್ರ ಸರ್ಕಾರದ ಜಾಲತಾಣಗಳು

ತಾಂತ್ರಿಕ‌ ಜಾಲತಾಣಗಳು

ಕನ್ನಡ ಸಂಬಂಧಿ ಜಾಲತಾಣಗಳು

ಆಯೋಗಗಳು

ನ್ಯಾಯಾಲಯಗಳು

ಡೌನ್‌ಲೋಡ್‌ಗಳು

Go to Top