Loading Events

« All Events

  • This event has passed.

ಜಿ.ಪಿ. ರಾಜರತ್ನಂ

December 5, 2023

೫-೧೨-೧೯೦೮ ೧೩-೩-೧೯೭೯ ಕನ್ನಡ ಪರಿಚಾರಕರಾಗಿ, ಸಂಸ್ಕೃತಿ ಪ್ರಸಾರಕರಾಗಿ ಕಾವ್ಯ, ನಾಟಕ, ಶಿಶುಸಾಹಿತ್ಯ, ಹಾಸ್ಯ ಸಾಹಿತ್ಯ ಹೀಗೆ ಹಲವಾರು ಪ್ರಕಾರಗಳಲ್ಲಿ ದುಡಿದ ರಾಜರತ್ನಂರವರು ಹುಟ್ಟಿದ್ದು ರಾಮನಗರ. ತಂದೆ ಪಿ.ಗೋಪಾಲಕೃಷ್ಣ ಅಯ್ಯಂಗಾರ್, ನಾಲ್ಕರ ವಯಸ್ಸಿನಲ್ಲಿಯೇ ತಾಯಿಯ ಪ್ರೀತಿಯಿಂದ ವಂಚಿತರು. ಪ್ರಾರಂಭಿಕ ಶಿಕ್ಷಣ, ತಂದೆ ಉಪಾಧ್ಯಾಯರಾಗಿದ್ದರಿಂದ ಅವರು ಮಾಡುವ ತರಗತಿಗಳಲ್ಲೆಲ್ಲಾ ರಾಜರತ್ನಂಗೆ ಪ್ರವೇಶ, ಕಲಿಕೆ. ೧೯೨೮ರಲ್ಲಿ ಬೆಂಗಳೂರು ಸೆಂಟ್ರಲ್ ಕಾಲೇಜಿನಿಂದ ಬಿ.ಎ. ಪದವಿ. ೧೯೩೧ರಲ್ಲಿ ಮೈಸೂರು ಮಹಾರಾಜ ಕಾಲೇಜಿನಿಂದ ಎಂ.ಎ. ಪದವಿ. ಮೈಸೂರಿನ ‘ಶಿಶುವಿಹಾರ’ ವಿದ್ಯಾಸಂಸ್ಥೆಯಲ್ಲಿ ಉಪಾಧ್ಯಾಯರಾಗಿ ಕೆಲಕಾಲ. ನಂತರ ಮಹಾರಾಜ ಕಾಲೇಜಿನಲ್ಲಿ, ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ, ತುಮಕೂರು, ಶಿವಮೊಗ್ಗಗಳಲ್ಲಿ ಅಧ್ಯಾಪಕರಾಗಿ ಸೇವೆ. ಬೆಂಗಳೂರಿಗೆ ಬಂದು ರೀಡರ್ ಆಗಿ ನಿವೃತ್ತಿ. ರಾತ್ರಿ ಎರಡನೆ ಆಟ (ಸಿನಿಮಾ) ನೋಡಲು ಹೋದ ರತ್ನನಿಗೆ ಹೆಂಡದಂಗಡಿಯ ದರ್ಶನ. ಮುಂದೆ ಬೆಳೆದದ್ದೆ ರತ್ನನ ಪದಗಳಿಗೆ ಮೂಲಾಧಾರ. ನಂತರ ರಚಿಸಿದ್ದು ಹಲವಾರು ಪದ್ಯಗಳು. ಎಂಡ ಕುಡುಕ ರತ್ನ, ಪುಟ್ನಂಜಿ ಪದಗಳು, ಮುನಿಯನ ಪದಗಳು, ಹಲವಾರು ಶಿಶುಗೀತೆಗಳ ಸಂಗ್ರಹ ಪ್ರಕಟಿತ-ಕಂದನ ಕಾವ್ಯಮಾಲೆ, ಕಡಲೆಪುರಿ, ಕಲ್ಲು ಸಕ್ಕರೆ, ಕೆನೆಹಾಲು, ಚುಟುಕ, ತಾರೆ, ತುಂಟಗಣಪತಿ, ತುತ್ತೂರಿ, ಮುದ್ದುಕೃಷ್ಣ, ರಸಗವಳ. ಕಥೆಗಳು-ಅಣ್ಣತಮ್ಮ, ಅಯ್ಯಪ್ಪನ ಕಥೆಗಳು, ಆಲಿವರ್ ಟ್ವಿಸ್ಟ್ (ಅನುವಾದ), ಆಳ್ವಾರರ ಕಥೆಗಳು, ಆರು ಕೊಂಬಿನ ಆನೆ, ಏಕಲವ್ಯನ ಕಥೆಗಳು, ಕಥೆಗಳ ಬುಟ್ಟಿ, ಕಥಾಕೋಶ, ಕಥೆ ಬದಲು ಕಥೆ ಮೊದಲಾದುವು. ವಿಡಂಬನೆ-ಅಪಕಥಾವಲ್ಲರಿ, ಪರಗತಿ ಪಕ್ಷಿ, ರಾಘವಾಂಕನ ಹಲ್ಲು, ನಿರ್ಭಯಾಗ್ರಫಿ, ಪುರುಷ ಸರಸ್ವತಿ. ನಾಟಕ-ಕಂಬಳಿ ಸೇವೆ, ಗಂಡುಗೊಡಲಿ, ನರಕದ ನ್ಯಾಯ, ನೆನಪು, ಮಹಾಕವಿಮೇಳ, ಶಕಾರನ ಸಾರೋಟು, ಸೋಲಿಗರ ಸಿದ್ಧ, ಹೆಂಡದ ಹಣ ಮುಂತಾದುವು. ಇತರ-ಚೀನಾದೇಶದ ಬೌದ್ಧ ಯಾತ್ರಿಕರು, ತೀರ್ಥಕರೂ, ತೀರ್ಥಂಕರರೂ, ಧರ್ಮಪದ ಮೊದಲ್ಗೊಂಡು ೨೫೦ಕ್ಕೂ ಹೆಚ್ಚು ಕೃತಿ ಪ್ರಕಟಿತ. ಪಡೆದ ಪ್ರಶಸ್ತಿ ಗೌರವಗಳು. ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ (ನವದೆಹಲಿ-೧೯೭೮), ದೇವರಾಜ ಬಹದ್ದೂರ್ ಪ್ರಶಸ್ತಿ, ಮೈಸೂರು ವಿ.ವಿ.ದ ಗೌರವ ಡಾಕ್ಟರೇಟ್ ಮುಂತಾದುವು. ‘ರಾಜಮಾರ್ಗ’ದಿಂದ ಹಿಡಿದು ಐದು ಗೌರವ/ಸಂಸ್ಮರಣ ಗ್ರಂಥಗಳ ಅರ್ಪಣೆ.   ಇದೇ ದಿನ ಹುಟ್ಟಿದ ಸಾಹಿತಿಗಳು : ವಿಶಾಲಾಕ್ಷಿ ಲಕ್ಷ್ಮಣಗೌಡ – ೧೯೧೩ ಚಿರಂಜೀವಿ – ೧೯೩೯ ಗೀತಾ. ಸಿ.ವಿ. – ೧೯೪೦ ಕಬ್ಬಿನಾಲೆ ವಸಂತ ಭಾರದ್ವಾಜ್ – ೧೯೬೧ ವಿದ್ಯಾ ಉಮೇಶ್ – ೧೯೬೫

Details

Date:
December 5, 2023
Event Category: