ಜಿ.ವಿ. ಹಿರೇಮಠ

Home/Birthday/ಜಿ.ವಿ. ಹಿರೇಮಠ
Loading Events
This event has passed.

೦೫.೦೪.೧೯೧೭ ರಂಗಭೂಮಿಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ’ರೇಡಿಯೊಕಾಕ’ ಎಂದೇ ಪ್ರಸಿದ್ಧರಾಗಿರುವ ಹಿರೇಮಠ ರವರು ಹುಟ್ಟಿದ್ದು ಗದಗುತಾಲ್ಲೂಕಿನ ಡಂಬಳದಲ್ಲಿ. ಪ್ರಾಥಮಿಕ ಶಿಕ್ಷಣ ಗದಗ್‌ನಲ್ಲಿ. ಸಂಸ್ಕೃತ ನಾಟಕ ಕುರುಕ್ಷೇತ್ರದಲ್ಲಿ ಪಾತ್ರವಹಿಸಿ ಪಡೆದರಂಗ ಪ್ರವೇಶ. ಪಂ.ಭೀಮಸೇನ ಜೋಶಿಯವರ ತಂದೆ ಗುರಾಚಾರ್ಯ ಜೋಶಿಯವರೇ ಇವರಿಗೆ ಸಂಸ್ಕೃತ ಕಲಿಸಿದ ಗುರುಗಳು. ಗಣೇಶನ ಹಬ್ಬ, ನವರಾತ್ರಿ, ಉಗಾದಿ ಹಬ್ಬ ಹುಣ್ಣಿಮೆ ದಿವಸಗಳಲ್ಲಿ ಯುವಕ ಯುವತಿಯರು ಗುಂಪುಕಟ್ಟಿ, ಅಂಗಡಿಗಳಿಂದ ಚಂದಾವಸೂಲುಮಾಡಿ ಮಾಡುತ್ತಿದ್ದ ‘ಕೋಲುಮೇಳ’. ಹವ್ಯಾಸಿಗುಂಪು ತಯಾರಿಸಿ ಆಡುತ್ತಿದ್ದ ನಾಟಕಗಳು. ನವಜೀವನ ನಾಟಕದಿಂದ ಬಂದ ಖ್ಯಾತಿ. ವೃತ್ತಿರಂಗಭೂಮಿಯಿಂದ ಬಂದ ಆಹ್ವಾನ. ಮಹಮದ್ ಪೀರ್‌ರವರ ’ಸಂಸಾರನೌಕ’, ಗರೂಡ ಸದಾಶಿವರಾಯರ ’ಎಚ್ಚಮನಾಯಕ’, ಹಂದಿಗನೂರು ಸಿದ್ಧರಾಮಪ್ಪನವರ ಅಕ್ಷಯಾಂಬರ ನಾಟಕದ ಕೃಷ್ಣನ ಪಾತ್ರ, ಕೊಟ್ಟೂರಪ್ಪನವರ ’ದಾನಶೂರಕರ್ಣ’ ನಾಟಕದ ಕರ್ಣನ ಪಾತ್ರದಿಂದ ಪ್ರೇಕ್ಷಕರಿಂದ ದೊರೆತ ಪ್ರಶಂಸೆ. ಬಿ.ಎಂ.ಶ್ರೀ. ವಿ.ಸೀಯವರಿಂದ ’ನವಜೀವನ’ ನಾಟಕದ ಪ್ರಶಂಸೆ. ಶಾಂತಿನಿಕೇತನದ ರವೀಂದ್ರರು, ಪುತ್ತೂರಿನ ಕಾರಂತರನ್ನು ಭೇಟಿಯಾದರೂ ಜೀವನ ಸಾಗಿಸಲು ಹೆಣಗಿ ಕಡೆಗೆ ಸೇರಿದ್ದು ನರಸಿಂಗ್‌ಸಾ ಬೀಡಿಕಾರ್ಖಾನೆಯ ಪ್ರಚಾರಕರಾಗಿ. ಹಂದಿಗನೂರು ಸಿದ್ಧರಾಮಪ್ಪನವರ ನಾಟಕ ’ಉತ್ತರಭೂಪ’ದಲ್ಲಿ ದೊರೆತ ಪಾತ್ರದಿಂದ ಬಂದಖ್ಯಾತಿ. ಐವತ್ತು ಪ್ರಯೋಗಗಳಲ್ಲಿ ಸತತವಾಗಿ ಅಭಿನಯಿಸಿ ಗಳಿಸಿದ ಜನಮೆಚ್ಚುಗೆ. ನಾಟ್ಯಾಚಾರ್ಯ ಶ್ರೀನಿವಾಸಕುಲಕರ್ಣಿಯವರು ಗದುಗಿಗೆ ಬಂದಾಗ ಅವರೊಡನೆ ಪ್ರಯಾಣಿಸಿದ್ದು ಮದರಾಸಿಗೆ. ನಾಟ್ಯತಂಡ, ವಾದ್ಯಗಾರರೊಡನೆ ಸೇರ‍್ಪಡೆ. ನೃತ್ಯಾಭ್ಯಾಸಿಗಳಿಗೆ ಅಧ್ಯಾಪಕರಾಗಿ ಹೊತ್ತ ಜವಾಬ್ದಾರಿ. ಗೀತಾಕುಲಕರ್ಣಿಯವರ ಪತಿ ಶೇಷಗಿರಿ ಕುಲಕರ್ಣಿಯವರ ಪ್ರೇರಣೆಯಿಂದ ಹಂಸಭಾವಿಯಲ್ಲಿ ತೆರೆದ ನೃತ್ಯಶಾಲೆ. ಶ್ರೀರಂಗರ ಕನ್ನಡ ನಾಟ್ಯ ವಿಲಾಸಿಗಳ ಸಂಘ, ಜಿ.ಬಿ.ಜೋಶಿಯವರ ಕಲೋಪಾಸಕಮಂಡಲಿ, ಕರ್ನಾಟಕ ಕಲೋದ್ಧಾರಕ ಸಂಘ ಮುಂತಾದ ತಂಡಗಳಲ್ಲಿ ನಟ. ಶ್ರೀರಂಗರ ಶೋಕ ಚಕ್ರ, ಕರ್ನಾಟಕ ಕಲೋದ್ಧಾರಕ ಸಂಘದ ‘ಗೌರಿ’ ನಾಟಕಗಳು ಹೆಚ್ಚು ಪ್ರಖ್ಯಾತಿ ತಂದುಕೊಟ್ಟ ನಾಟಕಗಳು. ೯೧ನೇ ವರ್ಷಕ್ಕೆ ಕಾಲಿಡುತ್ತಿರುವ ಹಿರಿಯ ಕಲಾವಿದರು.   ಇದೇ ದಿನ ಹುಟ್ಟಿದ ಕಲಾವಿದರು: ತುಕಾರಾಂ ಸಾ ವಿಠಲ್ ಸಾ ಕಬಾಡಿ-೧೯೩೮ ಶಿವಾನಂದಯ್ಯ.ಸಿ.-೧೯೫೮ ಹನುಮಯ್ಯ ದೊ.ತಿ.-೧೯೪೦.

* * *

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top