Loading Events

« All Events

  • This event has passed.

ಜೆ.ಲೋಕೇಶ್‌

September 1

೦೧.೦೯.೧೯೫೦ ರಂಗ ಚಟುವಟಿಕೆಗಳಲ್ಲಿ ಸದಾ ಕ್ರಿಯಾಶೀಲರಾಗಿ ’ರಂಗಸಂಪದ’ ನಾಟಕ ಸಂಸ್ಥೆಯನ್ನು ಕಟ್ಟಿಬೆಳೆಸಿದವರಲ್ಲೊಬ್ಬರಾದ ಲೋಕೇಶ್‌ರವರು ಹುಟ್ಟಿದ್ದು ಬೆಂಗಳೂರು. ತಂದೆ ಜಯದೇವಯ್ಯ. ತಾಯಿ ಸಂಗೀತ ವಿದುಷಿ ಬಿ.ಎಸ್‌. ಚಂದ್ರಕಲಾ. ತಾಯಿಯಿಂದ ರಕ್ತದಲ್ಲಿ ಹರಿದು ಬಂದ ಸಾಹಿತ್ಯ ಪ್ರಜ್ಞೆ. ಶಾಲಾಕಾಲೇಜು ದಿನಗಳಿಂದಲೇ ಬೆಳೆದ ರಂಗಾಸಕ್ತಿ. ಬ್ಯಾಂಕಿನಲ್ಲಿ ಉದ್ಯೋಗ. ಉದ್ಯೋಗಿಗಳಲ್ಲೂ ಬೆಳೆಸಿದ ರಂಗಚಟುವಟಿಕೆ. ಶಕಶೈಲೂಷರು ಶಿಬಿರಾರ್ಥಿಗಳ ತಂಡಕಟ್ಟಿ ಜಸ್ಮಓಡನ್‌, ಸತ್ತವನ ನೆರಳು, ಸಂಧ್ಯಾಕಾಲ ನಾಟಕಗಳ ಪ್ರಯೋಗ. ೧೯೭೨ರಲ್ಲಿ ಕಟ್ಟಿದ ರಂಗಕಲಾಸಂಪದ. ಹೊಸ ಹೊಸ ನಾಟಕಗಳ ಪ್ರಯೋಗಗಳಿಗೆ ಕೊಟ್ಟ ಪ್ರಾಮುಖ್ಯತೆ. ಅನೇಕ ಬರಹಗಾರರಿಂದ ಬರೆಸಿದ ಹೊಸ ನಾಟಕಗಳು. ಇವರ ನೇತೃತ್ವದಲ್ಲಿ ಪ್ರದರ್ಶಿಸಿದ ನಾಟಕಗಳು ಹಲವಾರು. ಯಯಾತಿ, ಕದಡಿದ ನೀರು, ತ್ರಿಶಂಕು, ಅದೇ ಅಧೂರೆ, ಸಮಗ್ರ ಮಂಥನ, ಮಹಾಪ್ರಸ್ಥಾನ, ಗುಲಾಮನ ಸ್ವಾತಂತ್ರ್ಯ ಯಾತ್ರೆ, ಒಡಲಾಳ, ಮಹಾಚೈತ್ರ, ಸುಲ್ತಾನ ಟಿಪ್ಪು ಮುಂತಾದ ಚಿಂತನೆಗೆ ಹಚ್ಚಿದ ನಾಟಕಗಳು. ರಂಗಸಂಪದದ ಮೂಲಕ ಹಲವಾರು ನಾಟಕಗಳಿಗೆ ನಿರ್ದೇಶನ, ಬೆಳಕು ವಿನ್ಯಾಸ, ರಂಗ ವಿನ್ಯಾಸ, ಹಲವಾರು ಯುವ ಕಲಾವಿದರನ್ನು ಬೆಳಕಿಗೆ ತಂದ ಕೀರ್ತಿ. ರಂಗಭೂಮಿಯ ಕ್ರಿಯಾ ಸಮಿತಿಯ ಸಂಚಾಲಕರಾಗಿ ಕರ್ನಾಟಕದಾದ್ಯಂತ ನಾಟಕೋತ್ಸವ  ಏರ್ಪಡಿಸಿ ತಾಲ್ಲೂಕು ಕೇಂದ್ರ, ಹಳ್ಳಿ ಹಳ್ಳಿಗಳಿಗೂ ಹಬ್ಬಿಸಿದ ನಾಟಕಾಭಿರುಚಿ. ಸಾಹಿತ್ಯ ರಚನೆ, ಪ್ರಕಟಣೆ, ಪ್ರಯೋಗ, ಸಂಕಿರಣ, ಪ್ರದರ್ಶನ ಸಮ್ಮೇಳನ ಚಳುವಳಿಗಳ ರೂವಾರಿಗಳಲ್ಲೊಬ್ಬರು. ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯರಾಗಿ (ಎರಡು ಬಾರಿ) ನಾಮಕರಣ. ಕಾರ್ಯಗತಗೊಳಿಸಿದ ಹಲವಾರು ಯೋಜನೆಗಳು. ಕೆನಡಾದಲ್ಲಿ ನಡೆದ ೨೧ನೇ ಅಂತಾರಾಷ್ಟ್ರೀಯ ರಂಗಸಮ್ಮೇಳನದಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗಿ. ೧೯೯೨ ರಲ್ಲಿ ಕರ್ನಾಟಕ ನಾಟಕ ಅಕಾಡೆಮಿಯ ಪ್ರಶಸ್ತಿ. ಹಲವಾರು ಸಂಘ ಸಂಸ್ಥೆಗಳಿಂದ ಸನ್ಮಾನ.   ಇದೇ ದಿನ ಹುಟ್ಟಿದ ಕಲಾವಿದರು ಪುರಾಣಿಕ ಜಿ.ಜಿ. – ೧೯೦೯ ಸಂಗಮೇಶ್ ಆರ್‌.  ಗುರವ – ೧೯೪೯ ಪಿ. ರಮಾ – ೧೯೫೪ ಶಶಿಧರ ಅಡಪ – ೧೯೫೮ ಕರಿಬಸವಯ್ಯ – ೧೯೫೯ ರಾಜಕುಮಾರ್ ಎಸ್‌. – ೧೯೬೯

* * *

Details

Date:
September 1
Event Category: