ಟಿ.ಆರ್‌. ಶ್ರೀನಾಥ್‌

Home/Birthday/ಟಿ.ಆರ್‌. ಶ್ರೀನಾಥ್‌
Loading Events
This event has passed.

೦೧.೦೫.೧೯೫೮ ಪ್ರಖ್ಯಾತ ಕೊಳಲು ವಾದಕರಲ್ಲಿ ಒಬ್ಬರಾದ ಶ್ರೀನಾಥ್‌ರವರು ಹುಟ್ಟಿದ್ದು ಬೆಂಗಳೂರು. ತಂದೆ ಟಿ.ಎನ್. ರಾಮಮೂರ್ತಿ, ತಾಯಿ ಕಮಲಮ್ಮ. ಓದಿದ್ದು ಮೈಸೂರಿನಲ್ಲಿ. ಮೈಸೂರು ವಿಶ್ವವಿದ್ಯಾಲಯದ ಆಹಾರ ಮತ್ತು ಸಂಶೋಧನಾ ಕೇಂದ್ರ (CFTRI) ದಿಂದ ಸ್ವರ್ಣಪದಕದೊಡನೆ ಪಡೆದ ಎಂ.ಎಸ್ಸಿ. ಪದವಿ. ಆಹಾರ ಸಂಶೋಧನಾ ವಿಭಾಗದಲ್ಲಿದ್ದ ಸಂಶೋಧನೆ ಮತ್ತು ಸಲಹೆಗಾರರು. ಬಾಲ್ಯದಿಂದಲೂ ಸಂಗೀತದಲ್ಲಿ ಬೆಳೆದು ಬಂದ ಆಸಕ್ತಿಯಿಂದ ಕಲಿತದ್ದು ಕೊಳಲು. ಮೈಸೂರಿನ ಪ್ರಖ್ಯಾತ ಕೊಳಲು ವಾದಕರಾದ ಎ.ವಿ.ಪ್ರಕಾಶ್‌. ದಿಂಡಿಗಲ್ ಎಸ್.ವಿ.ನಟರಾಜನ್ ಮತ್ತು ಬಿ.ಎನ್. ಸುರೇಶ್‌ರವರಲ್ಲಿ ಕೊಳಲು ವಾದನ ಶಿಕ್ಷಣ ಮತ್ತು ರುದ್ರ ಪಟ್ಟಣದ ಆರ್‌.ಎನ್. ತ್ಯಾಗರಾಜನ್‌ರವರಲ್ಲಿ ಕಲಿತ ಹಾಡುಗಾರಿಕೆ. ಶಾಲಾ ಕಾಲೇಜು ದಿನಗಳಿಂದಲೇ ಸ್ಪರ್ಧೆಯಲ್ಲಿ ಪಡೆದ ಹಲವಾರು ಬಹುಮಾನಗಳು. ಅಂತರ ಕಾಲೇಜು ಸಂಗೀತ ಸ್ಪರ್ಧೆಗಳು, ಆಕಾಶವಾಣಿಯ ಶಾಸ್ತ್ರೀಯ ಸಂಗೀತದ ಸಹವಾದ್ಯ ವಾದಕ ಸ್ಪರ್ಧೆಯಲ್ಲಿ ಬಹುಮಾನ. ಆಕಾಶವಾಣಿಯಲ್ಲಿ ’ಬಿ ಹೈ’ ಗ್ರೇಡ್ ಕೊಳಲು ವಾದಕರಾಗಿ ನೇಮಕ. ನಂತರ ’ಎ’ ಗ್ರೇಡ್ ಕಲಾವಿದರಾಗಿ ಆಯ್ಕೆ. ಕರ್ನಾಟಕ ಗಾನ ಕಲಾ ಪರಿಷತ್ತಿನ ಕಾರ್ಯದರ್ಶಿ, ಸಂಗೀತ ನೃತ್ಯ ಅಕಾಡೆಮಿ ಸದಸ್ಯ, ಆಕಾಶವಾಣಿ ಆಯ್ಕೆ ಸಮಿತಿ ಸದಸ್ಯರಾಗಿ ಸಲ್ಲಿಸಿದ ಸೇವೆ. ಮದರಾಸಿನ ಸಂಗೀತ ಕಂಪನಿಯಿಂದ ಹಲವಾರು ಧ್ವನಿ ಸುರುಳಿಗಳ ಬಿಡುಗಡೆ. ಆಕಾಶವಾಣಿಯ ಅನೇಕ ಕಾರ್ಯಕ್ರಮಗಳಲ್ಲಿ ಭಾಗಿ. ದಕ್ಷಿಣ ವಲಯ ಸಂಗೀತ ಕಚೇರಿ, ರಾಷ್ಟ್ರೀಯ ಆಕಾಶವಾಣಿ ಕಾರ್ಯಕ್ರಮಗಳು, ದೂರದರ್ಶನದ ರಾಷ್ಟ್ರೀಯ ಸಂಗೀತ ಕಾರ್ಯಕ್ರಮಗಳಲ್ಲದೆ ಸಾರ್ಕ್‌ ಸಮ್ಮೇಳನ, ಮುಂಬಯಿಯ ’ನಾಡ ಕರ್ನಾಟಕ’, ಸಂಗೀತ ನೃತ್ಯ ಅಕಾಡೆಮಿಯ ರಾಷ್ಟ್ರೀಯ ಸಂಗೀತೋತ್ಸವ, ಹಂಪಿ ಉತ್ಸವ, ಗೋವಾ ಕೇಂದ್ರದ ಸಂಗೀತೋತ್ಸವ ಮುಂತಾದವುಗಳಲ್ಲಿ ಭಾಗಿ. ವಿದೇಶಗಳಲ್ಲಿಯೂ ಶಿಬಿರ, ಪ್ರಾತ್ಯಕ್ಷಿಕೆ, ಸಂಗೀತ ಕಾರ್ಯಕ್ರಮ, ಹೀಗೆ ಹಲವಾರು ಕಾರ್ಯಕ್ರಮ ನಡೆಸಿಕೊಟ್ಟ ಖ್ಯಾತಿ. ಯು.ಕೆ.ಯ ಯೂನಿವರ್ಸಿಟಿ ಆಫ್ ಸರ್‌ಕ್ಯೂಟ್ ಫಾರ್‌ ಇಂಡಿಯನ್ ಕ್ಲಾಸಿಕಲ್ ಮ್ಯೂಸಿಕ್, ಯು.ಕೆ.ಆರ್ಟ್ಸ್‌‌ಕೌನ್ಸಿಲ್ ಮುಂತಾದೆಡೆಗಳಲ್ಲಿ ನೀಡಿದ ಕಾರ್ಯಕ್ರಮಗಳು. ಸಂದ ಪ್ರಶಸ್ತಿ ಗೌರವಗಳು ಹಲವಾರು. ೧೯೯೮ ರಲ್ಲಿ ಅನನ್ಯ ಯುವ ಪುರಸ್ಕಾರ, ಜಗದ್ಗುರು ರಂಭಾಪುರಿ ಪೀಠದಿಂದ ವೇಣುಗಾನಪಾಣಿ, ಕರ್ನಾಟಕ ಗಾನ ಕಲಾ ಪರಿಷತ್ತಿನಿಂದ ’ಗಾನಕಲಾಶ್ರೀ’, ೧೯೯೮ ರಲ್ಲಿ ಯುವ ಸಂಗೀತೋತ್ಸವದ ಅಧ್ಯಕ್ಷ ಪದವಿ ಮುಂತಾದ ಗೌರವಗಳು.   ಇದೇ ದಿನ ಹುಟ್ಟಿದ ಕಲಾವಿದರು ರಾಮಚಂದ್ರನ್. ಕೆ.ಎನ್. – ೧೯೩೭ ಮಾಲತಿ.ಎಸ್. – ೧೯೫೨ ಸುಬ್ರಹ್ಮಣ್ಯನ್‌.ಜಿ. – ೧೯೫೨ ಮಾಲತಿ ಮೈಸೂರು – ೧೯೫೪ ಮಾಧವಿ ಭಂಡಾರಿ – ೧೯೫೫

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top