ಟಿ.ವಿ.ರಾಜು

Home/Birthday/ಟಿ.ವಿ.ರಾಜು
Loading Events
This event has passed.

೧೯೩೦ ಪ್ರಖ್ಯಾತ ಸುಗಮಸಂಗೀತಗಾರರಾದ ಟಿ.ವಿ. ರಾಜು ರವರು ಹುಟ್ಟಿದ್ದು ತುಮಕೂರು. ಕರ್ನಾಟಕ ಸಂಗೀತ ಹಾಗೂ ಹಿಂದೂಸ್ತಾನಿ ಸಂಗೀತಗಾರರ ಮನೆತನ. ತಂದೆ ವಾಣಿ ಮಲ್ಲಪ್ಪ, ತಾಯಿ ಜಿ.ಎಸ್. ವೀರಮ್ಮ, ತಂದೆಯಿಂದಲೇ ಸಂಗೀತದ ಮೊದಲಪಾಠ. ಭೋಜರಾವ್ ಬೋಳಾರ್ ಬಳಿ ಹಿಂದೂಸ್ತಾನಿ ಸಂಗೀತ ಶಿಕ್ಷಣ. ಮೈಸೂರು ವಸ್ತುಪ್ರದರ್ಶನದಲ್ಲಿ ಕನ್ನಡ ಗೀತೆಗಳ ಮೊಟ್ಟಮೊದಲ ಕಾರ್ಯಕ್ರಮ, ಪಡೆದ ಸುವರ್ಣಪದಕ. ನಾಡಿನಾದ್ಯಂತ ನಡೆಸಿಕೊಟ್ಟ ಸುಗಮಸಂಗೀತ ಕಚೇರಿಗಳು. ೧೯೫೮ರಲ್ಲಿ ಮೆಡೊಡಿಮೇಕರ್ ಸಂಗೀತ ಸಂಸ್ಥೆ ಸ್ಥಾನೆ. ಭಗವಾನ್ ಬುದ್ಧ ನಾಟಕಕ್ಕೆ ನೀಡಿದ ಸಂಗೀತ. ೧೯೬೩ರಲ್ಲಿ ಮುಂಬಯಿಯ ಕನ್ನಡ ಪತ್ರಿಕೆಯ ಸಂಪಾದಕರಾಗಿದ್ದ ತಾಂಡನ್‌ರವರು, ಜಹಂಗೀರ್ ಹಾಲ್‌ನಲ್ಲಿ ಏರ್ಪಡಿಸಿದ ಎರಡು ದಿನಗಳ ಕಾರ್ಯಕ್ರಮದಲ್ಲಿ ನಡೆಸಿಕೊಟ್ಟ ಸುಗಮ ಸಂಗೀತ ಕಚೇರಿ, ಜನಪದ ಗೀತೆಗಳು, ಸುಗಮ ಸಂಗೀತದ ಹಲವಾರು ಕಾರ್ಯಕ್ರಮಗಳು, ಆಕಾಶವಾಣಿಯಿಂದ ಪ್ರಸಾರ. ಮದರಾಸಿನ ಎಚ್.ಎಂ.ವಿ., ಕೊಲಂಬಿಯಾ ಕಂಪನಿಗಳಿಂದ ಜನಪದ ಗೀತೆಗಳ ಹಾಗೂ ಸುಗಮ ಸಂಗೀತದ ಧ್ವನಿಮುದ್ರಿಕೆಗಳ ಬಿಡುಗಡೆ. ಎಸ್.ಪ್. ಬಾಲಸುಬ್ರಹ್ಮಣ್ಯಂ, ಪಿ.ಬಿ. ಶ್ರೀನಿವಾಸ್, ವಾಣಿ ಜಯರಾಂ ರೊಡನೆ, ಉಪೇಂದ್ರಕುಮಾರ್, ಎಂ. ರಂಗರಾವ್ ರವರ ಸಂಗೀತ ನಿರ್ದೇಶನದಲ್ಲಿ ನಾ ಕಂಡ ಎಡೆಯೂರವಾಸ, ಕೂಡಲಸಂಗಮ, ಮಹಾಶಕ್ತಿ ಗಣಪತಿ, ನಿನಗೆ ಶರಣು ಶ್ರೀ ಸಿದ್ಧಲಿಂಗ, ಶೃಂಗೇರಿ ಶಾರದೆ, ಜಯಜಯಶ್ರೀ ರಾಘವೇಂದ್ರ ಮುಂತಾದ ಅನೇಕ ಧ್ವನಿಸುರಳಿಗಳ ಗಾಯಕ. ಹಲವಾರು ಸಂಘ ಸಂಸ್ಥೆಗಳಿಂದ ಸನ್ಮಾನ, ಕರ್ನಾಟಕ ಸಂಗೀತ ನೃತ್ಯ ಅಕಾಡಮಿಯಿಂದ ಕರ್ನಾಟಕ ಕಲಾಶ್ರೀ ಪ್ರಶಸ್ತಿ, ಸಂಗೀತ ನಾಟಕ ಅಕಾಡಮಿಯ ಸದಸ್ಯರಾಗಿ ಸಲ್ಲಿಸಿದ ಸೇವೆ.   ಇದೇ ದಿನ ಹುಟ್ಟಿದ ಕಲಾವಿದರು : ರೇವಣಾರಾಧ್ಯ ಜಿ.ಬಿ. – ೧೯೩೮ ಹನುಮಂತಪ್ಪ ಹೂಗಾರ್ – ೧೯೪೪ ಕುಮಾರಸ್ವಾಮಿ ಎಂ.ಎಸ್. – ೧೯೬೫

* * *

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top