ಟಿ.ವಿ. ವೆಂಕಟರಮಣಯ್ಯ

Home/Birthday/ಟಿ.ವಿ. ವೆಂಕಟರಮಣಯ್ಯ
Loading Events

೮-೧೦-೧೯೩೩ ಗ್ರಂಥಪಾಲಕರಾಗಿ, ವಿದ್ಯಾರ್ಥಿಗಳಿಗೆ ದಾರಿದೀಪವಾಗಿ, ಬೋಧಕರಿಗೆ ಆಕರ ಗ್ರಂಥಗಳ ದಿಕ್ಸೂಚಿಯಾಗಿ, ಸಾಮಾನ್ಯ ಜನರಿಗೆ ಜ್ಞಾನದೀವಿಗೆಯಾಗಿರುವ ವೆಂಕಟರಮಣಯ್ಯನವರು ಹುಟ್ಟಿದ್ದು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ತೊಣ್ಣೂರಿನಲ್ಲಿ. ತಂದೆ ವೆಂಕಟರಮಣಯ್ಯ, ತಾಯಿ ತಿಮ್ಮಮ್ಮ. ಪ್ರಾರಂಭಿಕ ಶಿಕ್ಷಣ ತೊಣ್ಣೂರು, ಹಿರೇಸಾವೆ, ಕೃಷ್ಣರಾಜ ನಗರಗಳಲ್ಲಿ. ಇಂಟರ್ ಮೀಡಿಯೆಟ್ ಓದಿದ್ದು ಮೈಸೂರಿನ ಯುವರಾಜ ಕಾಲೇಜು. ಮಹಾರಾಜ ಕಾಲೇಜಿನಿಂದ ಬಿ.ಎ. ಪದವಿ. ಕಾಶಿ ಹಿಂದೂ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಗ್ರಂಥಾಲಯ ವಿಜ್ಞಾನ ಡಿಪ್ಲೊಮ. ಇನ್ಸ್‌ಡಾಕ್ ದೆಹಲಿಯಿಂದ ವೈಜ್ಞಾನಿಕ ಪ್ರಲೇಖನ ತರಬೇತಿ. ಬೆಂಗಳೂರು ವಿಶ್ವವಿದ್ಯಾಲಯದಿಂದ ಲೈಬ್ರರಿ ಸೈನ್ಸ್ ಎಂ.ಲಿಬ್ ಪ್ರಥಮ ದರ್ಜೆಯಲ್ಲಿ ತೇರ್ಗಡೆ. ಮೈಸೂರಿನ ಸಾರ್ವಜನಿಕ ಗ್ರಂಥಾಲಯದಲ್ಲಿ ಸಹಾಯಕ ಗ್ರಂಥಪಾಲಕರಾಗಿ ವೃತ್ತಿ ಪ್ರಾರಂಭ. ಓರಿಯೆಂಟೇಷನ್ ಅಂಡ್ ಸ್ಟಡಿ ಸೆಂಟರ್‌ನಲ್ಲಿ ಗ್ರಂಥಪಾಲಕರಾಗಿ, ಕಲ್ಕತ್ತಾದ ರಾಷ್ಟ್ರೀಯ ಗ್ರಂಥ ಸೂಚಿ, ಕೇಂದ್ರ ಪರಾಮರ್ಶನ ಗ್ರಂಥಾಲಯದಲ್ಲಿ ಉಪಸಂಪಾದಕರಾಗಿ, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸಹಾಯಕ ಗ್ರಂಥಪಾಲಕರಾಗಿ, ಉಪಗ್ರಂಥಪಾಲಕರಾಗಿ, ಕೆಲಕಾಲ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ, ಸ್ವ ಇಚ್ಛೆಯಿಂದ ೧೯೮೬ರಲ್ಲಿ ಪಡೆದ ನಿವೃತ್ತಿ. ಗ್ರಂಥಾಲಯದ ಪುಸ್ತಕ ರಾಶಿಯೊಳಗೆ ಹುದುಗಿಹೋಗದೆ ತಾವೂ ಓದುತ್ತಾ, ಓದುಗರೊಡನೆ ಸೌಹಾರ್ದದಿಂದ ಗ್ರಂಥಗಳನ್ನೊದಗಿಸಿ ಸ್ಪಂದಿಸುತ್ತ ರಚಿಸಿದ ಕೃತಿಗಳು ಹಲವಾರು. ಜಾನಪದ, ಗ್ರಂಥಸೂಚಿ/ಲೇಖನ ಸೂಚಿ, ಪ್ರಸಂಗ, ಸೂಕ್ತಿ ಸಂಗ್ರಹ, ಧಾರ್ಮಿಕ, ಸಾಂಸ್ಕೃತಿಕ ಮಹತ್ವದ ಕೃತಿಗಳ ರಚನೆ. ಜೊತೆಗೆ ಹಾಸ್ಯ ಪುಸ್ತಕಗಳು ಮತ್ತು ಕೆಲವು ಇಂಗ್ಲಿಷ್‌ನಲ್ಲೂ ರಚಿಸಿದ ಕೃತಿ. ಜಾನಪದ-ಕನ್ನಡ ಗಾದೆಗಳ ಕೋಶ, ಗಾದೆಗಳು, ಆಧುನಿಕ ಗಾದೆಗಳು, ಕನ್ನಡ ಪಡೆನುಡಿಕೋಶ. ಗ್ರಂಥಸೂಚಿ-ಕನ್ನಡ ಭಾಷಾ-ಸಾಹಿತ್ಯ ಲೇಖನ ಸೂಚಿ, ಪತ್ರಿಕೋದ್ಯಮ, ರಾಷ್ಟ್ರೀಯ ಗ್ರಂಥಸೂಚಿ. ನಗೆ/ಹಾಸ್ಯ- ಹಾಸ್ಯರಸಾಯನ, ಜೋಕಿನ ಜಡಿಮಳೆ, ನಗೆಬಾಂಬು, ನಕ್ಕು ನಗಿಸಿ, ಆಸ್ಪತ್ರೆ, ಕಚೇರಿ-ಹೊಟೇಲ್ ಜೋಕುಗಳು. ಸೂಕ್ತಿ ಸಂಗ್ರಹಗಳು-ನುಡಿರತ್ನಕೋಶ, ಹಲವರ ಕಣ್ಣಲ್ಲಿ ಹಣ, ವಿವಿಧರ ಕಣ್ಣಲ್ಲಿ ವಿವಾಹ ಹೀಗೆ ಸೂಕ್ತಿಗಳ ತೊಂಬತ್ತು ಕೃತಿಗಳನ್ನೊಳಗೊಂಡಂತೆ ನೂರೈವತ್ತಕ್ಕೂ ಹೆಚ್ಚು ಕೃತಿ ರಚನೆ. ಇಂಗ್ಲಿಷ್‌ನಲ್ಲಿ LITERARY PSEUDONYMS AND OTHER ESSAYS, HISTORY OF PRINTING AND PUBLISHING IN INDIA. ಮಾರ್ಗದರ್ಶಕ ಗ್ರಂಥ ಪಾಲಕರಿಗೆ ಸಂದ ಗೌರವಗಳು ಹಲವಾರು. ಕರ್ನಾಟಕ ಜಾನಪದ ಯಕ್ಷಗಾನ ಅಕಾಡಮಿ ಪ್ರಶಸ್ತಿ, ಜ್ಞಾನವಿಜ್ಞಾನ ಪ್ರಶಸ್ತಿ, ಸೂಕ್ತಿ ರತ್ನಾಕರ ಪ್ರಶಸ್ತಿ, ಬೆಂಗಳೂರು ವಿಶ್ವವಿದ್ಯಾಲಯ, ಬಿ.ಇ.ಎಲ್. ಸಾಹಿತ್ಯಕೂಟ ಮುಂತಾದುವುಗಳಿಂದ ಸಂದ ಗೌರವ.   ಇದೇ ದಿನ ಹುಟ್ಟಿದ ಸಾಹಿತಿಗಳು : ಮಾಲತಿ ಸುಬ್ರಹ್ಮಣ್ಯಂ – ೧೯೨೯-೨೮.೮.೮೯ ಡಾ. ರಂಗಾರೆಡ್ಡಿ ಕೋಡಿರಾಂಪುರ – ೧೯೫೦ ಡಿ. ನಂಜಪ್ಪ – ೧೯೫೫

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top