
- This event has passed.
ಟೈಗರ್ ವರದಾಚಾರ್
August 1
೧.೮.೧೮೭೬ ೧.೧.೧೯೫೦ ಟೈಗರ್ ಬಿರುದಾಂಕಿತ ವರದಾಚಾರ್ಯರು ಹುಟ್ಟಿದ್ದು ಮದರಾಸಿನ ತಿರುವಟ್ಟಿಯಾರ್ ಬಳಿ ಇರುವ ಕಲಡಿಪೇಟ್. ತಂದೆ ರಾಮಾನುಜಾಚಾರ್ಯ, ತಾಯಿ ಕಲ್ಯಾಣಿ ಅಮ್ಮಾಳ್. ಓದಿದ್ದು ಎಫ್. ಎ. ವರೆಗೆ. ಪಟ್ಲಂ ಸುಬ್ರಹ್ಮಣ್ಯ ಅಯ್ಯರ್ ಬಳಿ ಮೂರು ವರ್ಷ ಕಾಲ ತಿರುವಯ್ಯಾರಿನಲ್ಲಿ ಗುರುಕುಲ ಪದ್ಧತಿಯಲ್ಲಿ ಪಡೆದ ಸಂಗೀತ ಶಿಕ್ಷಣ. ಕಲ್ಲಿಕೋಟೆಯ ಸರ್ವೆ ಇಲಾಖೆಯಲ್ಲಿ ಕೆಲಕಾಲ ಉದ್ಯೋಗ. ೧೯೧೬ ರಲ್ಲಿ ಮೈಸೂರಿಗೆ ಬಂದುದು, ನಾಲ್ವಡಿ ಕೃಷ್ಣರಾಜ ಒಡೆಯರ ಮುಂದೆ ನಡೆಸಿದ ಸಂಗೀತ ಕಚೇರಿ. ‘ಸಂಗೀತದ ಹುಲಿ’ ಎಂಬ ಬಿರುದು ಜೊತೆಗೆ ತೋಡ ಕಿಲ್ಲತ್ತಿನ ಸನ್ಮಾನ. ಮುಂದೆ ಟೈಗರ್ ವರದಾಚಾರ್ಯರೆಂದೇ ಪ್ರಸಿದ್ಧಿ. ಮದರಾಸು ಮ್ಯೂಸಿಕ್ ಅಕಾಡಮಿ ಸಂಗೀತ ಕಾಲೇಜಿನ ಪ್ರಿನ್ಸಿಪಾಲರಾಗಿ, ಮದರಾಸು ವಿಶ್ವವಿದ್ಯಾಲಯದ ಡಿಪ್ಲೊಮ ತರಗತಿಯ ವಿಭಾಗದ ಮುಖ್ಯಸ್ಥರಾಗಿ ಸಲ್ಲಿಸಿದ ಸೇವೆ. ಅಣ್ಣ ಶ್ರೀನಿವಾಸ ಅಯ್ಯಂಗಾರ್ಯರು ನಿರ್ದೇಶಿಸಿದ ‘ಇಂದ್ರಕೀಲ’ ನಾಟಕದ ಪಾತ್ರಧಾರಿ. ವಾಗ್ಗೇಯಕಾರರಾಗಿ ಹಲವಾರು ಕೀರ್ತನೆಗಳ ರಚನೆ, ಅಣ್ಣಾಮಲೆ ವಿಶ್ವವಿದ್ಯಾಲಯದಿಂದ ಪ್ರಕಟಿತ. ತಮಿಳು ಮಾತೃಭಾಷೆಯಾದರೂ ಕನ್ನಡ, ತೆಲುಗು, ಮಲೆಯಾಳಂ, ಸಂಸ್ಕೃತ ಇಂಗ್ಲಿಷ್ ಭಾಷೆಗಳಲ್ಲಿ ಪರಿಣತಿ. ವೀಣೆ ಶೇಷಣ್ಣನವರ ಮನೆಯಲ್ಲಿ ನಡೆಯುತ್ತಿದ್ದ ರಾಮೋತ್ಸವ ಸಂದರ್ಭದಲ್ಲಿ ಸನ್ಮಾನ; ಮದರಾಸಿನ ಮ್ಯೂಸಿಕ್ ಅಕಾಡಮಿ ಸಂಗೀತಸಮ್ಮೇಳನದ ಅಧ್ಯಕ್ಷತೆ, ಸಂಗೀತ ಕಲಾನಿಧಿ ಬಿರುದು; ಮೈಸೂರಿನ ಅರಸರಾದ ಜಯಚಾಮರಾಜ ಒಡೆಯರ ಆಸ್ಥಾನದಲ್ಲಿ ಆಸ್ಥಾನ ವಿದ್ವಾಂಸರಾಗಿ ನೇಮಕ. ಸಂಗೀತ ಶಾಸ್ತ್ರ ವಿಶಾರದ ಬಿರುದಿನೊಂದಿಗೆ ಗಂಡಭೇರುಂಡ ಲಾಂಛನದ ಪದಕದೊಂದಿಗೆ ವಜ್ರದ ಹಾರದ ಸನ್ಮಾನ. ಹಲವಾರು ಸಂಘ ಸಂಸ್ಥೆಗಳಿಂದ ಗೌರವ. ಶಿಷ್ಯ ಎಂ.ಡಿ. ರಾಮನಾಥನ್ ರವರಿಂದ “ಎಂತರಾ ನಿತನ ಕೆಂತ …..” ಕೀರ್ತನೆ ಹಾಡಲು ಹೇಳಿ ಕೇಳುತ್ತಲೇ ತ್ಯಜಿಸಿದ ಸಂಗೀತ ಲೋಕ. ಇದೇ ದಿನ ಹುಟ್ಟಿದ ಕಲಾವಿದರು: ನಗರ ಶ್ರೀನಿವಾಸ ಉಡುಪ – ೧೯೫೦ ಸುಮಾ ಸುಧೀಂದ್ರ – ೧೯೫೨ ರಮಾ ಅರವಿಂದ್ – ೧೯೫೬ ಹೇಮಾವತಿ ತೇಜಪ್ಪ – ೧೯೫೯ ಭೀಮಪ್ಪ ಎನ್.ಕೆ. – ೧೯೬೪
* * *