ಡಾ. ಅಬ್ದುಲ್ ಹಮೀದ್

Home/Birthday/ಡಾ. ಅಬ್ದುಲ್ ಹಮೀದ್
Loading Events
This event has passed.

೧೫-೪-೧೯೩೭ ಕನ್ನಡ, ಹಿಂದಿ ಎರಡು ಭಾಷೆಯಲ್ಲೂ ಪ್ರಾವೀಣ್ಯತೆ ಗಳಿಸಿರುವ ಅಬ್ದುಲ್ ಹಮೀದ್‌ರವರು ಹುಟ್ಟಿದ್ದು ತುಮಕೂರು ಜಿಲ್ಲೆಯ ಚಿಕ್ಕನಾಯಕನ ಹಳ್ಳಿ ತಾಲ್ಲೂಕಿನ ಹಂದನಕೆರೆ ಗ್ರಾಮದಲ್ಲಿ. ತಂದೆ ಮಹಮದ್ ಬುಡೇನ್ ಸಾಬ್, ತಾಯಿ ಮೆಹಬೂಬ್ ಬೀ. ಪ್ರಾರಂಭಿಕ ಶಿಕ್ಷಣ ಹಂದನಕೆರೆಯಲ್ಲಿ. ಹೈಸ್ಕೂಲು ಓದಿದ್ದು ತಿಪಟೂರಿನಲ್ಲಿ. ಇಂಟರ್ ಮೀಡಿಯೆಟ್ ಪಾಸು ಮಾಡಿದ್ದು ಭೂಪಾಲ್‌ನಲ್ಲಿ. ನಂತರ ಪದವಿ ಗಳಿಸಿದ್ದೆಲ್ಲ ಅಪಾರ. ಸ್ವ-ಅಧ್ಯಯನದಿಂದ ಬಾಹ್ಯ ವಿದ್ಯಾರ್ಥಿಯಾಗಿ ಸಾಸಿದ್ದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ. ಪದವಿ ಮತ್ತು ಎಂ.ಎ. ಪದವಿ. ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎಡ್. ಪದವಿ. “ಸೂಫಿ ಪಥ ಮತ್ತು ಶರಣ ಪಥಗಳ ತೌಲನಿಕ ಅಧ್ಯಯನ” ಪ್ರಬಂಧ ಮಂಡಿಸಿ ಪಿಎಚ್.ಡಿ. ಪದವಿ. ಹಿಂದಿಯಲ್ಲಿ ವಿದ್ವಾನ್ ಪದವಿ. ಪದವಿ ಪಡೆದ ನಂತರ ಉದ್ಯೋಗಕ್ಕಾಗಿ ಸೇರಿದ್ದು ಬಾಗಲಕೋಟೆ ಹೈಸ್ಕೂಲಿನಲ್ಲಿ ೧೯೬೫ರಲ್ಲಿ ಹಿಂದಿ ಶಿಕ್ಷಕರಾಗಿ. ನಂತರ ಹಂದನಕೆರೆಗೆ ಬಂದು ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇರಿ ನಿವೃತ್ತರಾಗುವವರೆವಿಗೂ ಅಲ್ಲೇ ಸೇವೆ. ಅಖಿಲ ಭಾರತ ೬೦ನೇ ಕನ್ನಡ ಸಾಹಿತ್ಯ ಸಮ್ಮೇಳನ ಮೈಸೂರು, ಬಳ್ಳಾರಿ ಜಿಲ್ಲಾ ಸಾಹಿತ್ಯ ಸಮ್ಮೇಳನ, ಅಖಿಲ ಕರ್ನಾಟಕ ಪ್ರೌಢಶಾಲಾ ಅಧ್ಯಾಪಕರ ಶೈಕ್ಷಣಿಕ ಸಮ್ಮೇಳನ-ಬೆಂಗಳೂರು, ರಾಜ್ಯಮಟ್ಟದ ಶೈಕ್ಷಣಿಕ ಸಮಾವೇಶ-ತುಮಕೂರು, ಎಲ್ಲೆಡೆ ಪ್ರಬಂಧ ಮಂಡನೆ-ಪ್ರಶಂಸೆ. ಹಲವಾರು ಕಾರ‍್ಯಕ್ರಮಗಳು, ಸಂದರ್ಶನಗಳು ಟಿ.ವಿ.ವಾಹಿನಿಯಲ್ಲಿ ಪ್ರಸಾರ. ರಚಿಸಿದ ಕೃತಿಗಳು ಹಲವಾರು. ಹಜ್ರತ್ ಬಂದೇ ನವಾಜ, ಸಾಮಾಜಿಕ ಅನಿಷ್ಟಗಳು, ನೆಹರು ಮತ್ತು ಸಂಸದರು, ಸೂಫಿ ಮತ್ತು ಶರಣ ಪಥಗಳ ತೌಲನಿಕ ಅಧ್ಯಯನ, ಸಿದ್ಧಾಂತ ಶಿಖಾಮಣಿಯಲ್ಲಿ ಸಾರ್ವತ್ರಿಕ ಮೌಲ್ಯಗಳು ಮುಂತಾದ ಕೃತಿಗಳು ಪ್ರಕಟಿತ. ಹಿಂದಿಯಲ್ಲೂ ಕೃತಿ ಪ್ರಕಟಿತ. ಜಾನಪದ ಲೇಖನಗಳು ಪ್ರಕಟಣೆಗಾಗಿ ಕಾದಿವೆ. ಸಂದ ಪ್ರಶಸ್ತಿ ಗೌರವಗಳು ಹಲವಾರು-ಶೈಕ್ಷಣಿಕ ಸಂಶೋಧನೆಗೆ ಎನ್.ಸಿ.ಇ.ಆರ್.ಟಿ. ರಾಷ್ಟ್ರಪ್ರಶಸ್ತಿ, ನೆಹರು ಮತ್ತು ಸಂಸದರು ಹಿಂದಿ ಕೃತಿಗೆ ನೆಹರು ಶತಮಾನೋತ್ಸವ ಪುರಸ್ಕಾರ, ಪಾಣಿಪತ್ ಸಾಹಿತ್ಯ ಅಕಾಡಮಿಯಿಂದ ಆಚಾರ‍್ಯ ಪ್ರಶಸ್ತಿ, ಹರ‍್ಯಾಣದ ಜೈಮಿನಿ ಅಕಾಡಮಿಯಿಂದ ಶತಾಬ್ದಿ ರತ್ನ ಪ್ರಶಸ್ತಿ, ಚಿತ್ರದುರ್ಗದ ಬೃಹನ್ಮಠದಿಂದ ಸಾಹಿತ್ಯ ಭೂಷಣ ಪ್ರಶಸ್ತಿ, ಬೆಂಗಳೂರಿನ ಕರ್ನಾಟಕ ಹಿಂದಿ ಪ್ರಚಾರ ಸಮಿತಿಯಿಂದ ಸ್ವರ್ಣಜಯಂತಿ ಪ್ರಶಸ್ತಿ, ದೆಹಲಿಯ ಮಾನವ ಸಂಪನ್ಮೂಲ ವಿಕಾಸ ಮಂತ್ರಾಲಯ, ಶ್ರೇಷ್ಠ ಹಿಂದಿ ಲೇಖಕ ಪ್ರಶಸ್ತಿ ಮುಂತಾದ ಪ್ರಮುಖ ಪ್ರಶಸ್ತಿಗಳು ದೊರೆತಿವೆ.   ಇದೇ ದಿನ ಹುಟ್ಟಿದ ಸಾಹಿತಿಗಳು : ಜಿ.ಎಂ. ಉಮಾಪತಿಶಾಸ್ತ್ರಿ – ೧೯೨೭ ಪ್ರಭಾಕರ ತಾಮ್ರಗೌರಿ – ೧೯೬೦

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top