Warning: mysqli_query(): MySQL server has gone away in E:\kanaja_new\wp-includes\wp-db.php on line 2056

Warning: mysqli_query(): Error reading result set's header in E:\kanaja_new\wp-includes\wp-db.php on line 2056

ಡಾ.ಆರ್‌.ಎನ್. ಶ್ರೀಲತಾ – ಕಣಜ

ಡಾ.ಆರ್‌.ಎನ್. ಶ್ರೀಲತಾ

Home/Birthday/ಡಾ.ಆರ್‌.ಎನ್. ಶ್ರೀಲತಾ
Loading Events

೦೪.೦೬.೧೯೫೩ ಕರ್ನಾಟಕ ಸಂಗೀತದ ಕಾಶಿ ಎನಿಸಿರುವ ಹಾಸನ ಜಿಲ್ಲೆಯ ರುದ್ರಪಟ್ಟಣ ಶ್ರೀಲತಾ ರವರ ಹುಟ್ಟಿದೂರು. ತಂದೆ ವಿದ್ವಾನ್ ಆರ್‌.ಕೆ. ನಾರಾಯಣಸ್ವಾಮಿ, ತಾಯಿ ಸಾವಿತ್ರಮ್ಮ, ಓದಿದ್ದು ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ. ಪದವಿ. ಸಂಗೀತದಲ್ಲಿ ಎಂ.ಎ. ಪದವಿ. “ಕನಾಟಕ ಸಂಗೀತದಲ್ಲಿ ಮನೋಧರ‍್ಮ ಸಂಗೀತ ಪ್ರಕಾರಗಳು” ಮಹಾ ಪ್ರಬಂಧ ಮಂಡಿಸಿ ಮೈಸೂರು ವಿಶ್ವವಿದ್ಯಾಲಯದಿಂದ ಪಡೆದ ಡಾಕ್ಟರೇಟ್ ಪದವಿ. ಸಂಗೀತದಲ್ಲಿ ಡಾಕ್ಟರೇಟ್ ಪಡೆದ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆ. ಮೈಸೂರು ವಿಶ್ವವಿದ್ಯಾಲಯದಲ್ಲಿ ೨೫ ವರ್ಷಗಳಿಂದಲು ಪದವಿ, ಸ್ನಾತಕ ಪದವಿಗಳಿಗೆ ಸಂಗೀತ ಶಾಸ್ತ್ರ, ಲಕ್ಷ್ಯಗಳ ಬೋಧನೆ. ಕಿರಿಯ ವಯಸ್ಸಿನಿಂದಲೇ ತಂದೆಯಿಂದ ಪಡೆದ ಸಂಗೀತ ಪಾಠ, ಹಿರಿಯ ಸಹೋದರ ಆರ್‌.ಎನ್. ತ್ಯಾಗರಾಜರಿಂದ ಮಾರ್ಗದರ್ಶನ. ಅತಿ ಕಿರಿಯ ವಯಸ್ಸಿಗೇ ವೇದಿಕೆ ಏರಿ ಕಚೇರಿ ಮಾಡಿದ ಕೀರ್ತಿ. ಶಾಲಾ ಕಾಲೇಜು ದಿನಗಳಿಂದಲೂ ಸ್ಪರ್ಧೆಯಲ್ಲಿ   ಭಾಗವಹಿಸಿ ಶಾಲಾ, ಕಾಲೇಜಿಗೆ, ವೈಯಕ್ತಿಕವಾಗಿ ಪಡೆದ ಬಹುಮಾನಗಳು. ಮದರಾಸಿನ ಪ್ರತಿಷ್ಠಿತ ಇಂಡಿಯನ್ ಫೈನ್ಆರ್ಟ್ಸ್‌ ಸೊಸೈಟಿಯಲ್ಲಿ ಗಳಿಸಿದ ಐದು ಪ್ರಥಮ ಬಹುಮಾನಗಳ ಗುರುತಾಗಿ ಸಂಗೀತ ದಿಗ್ಗಜ ಎಂ. ಡಿ. ರಾಮನಾಥನ್‌ರವರಿಂದ ಪಡೆದ ತಂಬೂರಿ ಬಹುಮಾನ. ಚೆನ್ನೈ ಮೂಸಿಕ್ ಅಕಾಡೆಮಿಯಿಂದ ಪಡೆದ ಆರು ಪ್ರಥಮ ಬಹುಮಾನಗಳು. ಆಕಾಶವಾಣಿ ಮತ್ತು ದೂರದರ್ಶನದ ’ಎ’ ದರ್ಜೆ ಕಲಾವಿದೆ. ಬೆಂಗಳೂರು ದೆಹಲಿ, ಚೆನ್ನೈ ಕೇಂದ್ರಗಳಿಂದ ಕಾರ್ಯಕ್ರಮ ಪ್ರಸಾರ. ದೇವರನಾಮಗಳು, ಶರಣರ ವಚನಗಳಲ್ಲೇ ಪೂರ್ಣಾವಧಿ ಕಾರ್ಯಕ್ರಮ ಕೊಡುವಷ್ಟು ನಿಷ್ಣಾತರು, ಭಜನ್, ಅಭಂಗ್, ಶ್ಲೋಕಗಳು ಇವರ ಪ್ರಿಯ ಕಾರ್ಯಕ್ರಮಗಳು. ಮೈಸೂರು ದಸರಾ ಉತ್ಸವ, ಬಿಡಾರಂ ಕೃಷ್ಣಪ್ಪ ರಾಮಮಂದಿರ, ಗಾನಭಾರತಿ, ಭಾರತ ಕಲಾಚಾರ್‌-ಚೆನ್ನೈ,  ಮೈಲಾಪುರ್‌ ಫೈನ್ ಆರ್ಟ್ಸ್‌ ಸೊಸೈಟಿ-ಚೆನ್ನೈ, ಬೆಂಗಳೂರು ಗಾಯನ ಸಭಾ, ಶೇಷಾದ್ರಿ ಪುರಂ ರಾಮಮಂದಿರ, ಕೋಲ್ಕತ್ತಾ, ಟ್ರಿಚಿ, ಮುಂಬಯಿ, ಗುಂಟೂರುಗಳಲ್ಲದೆ ಮಲೇಶಿಯಾ, ಸಿಂಗಪೂರ್‌, ಅಮೆರಿಕದ ಪಿಟ್ಸ್‌ಬರ್ಗ್‌ವೆಂಕಟೇಶ್ವರ ದೇವಸ್ಥಾನದಲ್ಲಿ, ನ್ಯೂಜೆರ್ಸಿ, ಡೆಟ್ರಾಯಿಟ್, ಮಿಚಿಗನ್, ವಾಷಿಂಗ್‌ಟನ್‌ಗಳಲ್ಲಿ ನೀಡಿದ ಕಾರ್ಯಕ್ರಮಗಳು. ಭಾರತೀಯ ಧರ‍್ಮ ಸಮ್ಮೇಳನದಲ್ಲಿ ಸಂಗೀತ ರತ್ನ, ಲಲಿತ ಕಲಾ ಅಕಾಡಮಿಯಿಂದ ಲಲಿತ ಕಲಾ ರತ್ನ, ತ್ಯಾಗರಾಜ ಭಜನ ಸಭಾದಿಂದ ನಾದ ಜ್ಯೋತಿ, ಸಂಗೀತ ಕಲಾ ತಪಸ್ವಿ, ಭಕ್ತಿ ಭಾರತ ಪ್ರತಿಷ್ಠಾನದಿಂದ ಸಂಗೀತ ಸರಸ್ವತಿ ಪ್ರಶಸ್ತಿಗಳು ಮುಖ್ಯವಾದುವುಗಳು.   ಇದೇದಿನಹುಟ್ಟಿದಕಲಾವಿದರು: ಹೊನ್ನಾಂಜಾಚಾರ್‌.ಟಿ.ಜಿ. – ೧೯೧೨ ರಾ. ಚಂದ್ರಶೇಖರಯ್ಯ – ೧೯೧೫ ಶಿವರಾಮಕೃಷ್ಣನ್.ಎಚ್. – ೧೯೫೭ ಶಾಂತಾರಾಜ್.ಜೆ. – ೧೯೬೫.

* * *

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

ಕೇಂದ್ರ ಸರ್ಕಾರದ ಜಾಲತಾಣಗಳು

ತಾಂತ್ರಿಕ‌ ಜಾಲತಾಣಗಳು

ಕನ್ನಡ ಸಂಬಂಧಿ ಜಾಲತಾಣಗಳು

ಆಯೋಗಗಳು

ನ್ಯಾಯಾಲಯಗಳು

ಡೌನ್‌ಲೋಡ್‌ಗಳು

Go to Top