ಡಾ. ಆರ್. ಗೋಪಾಲಕೃಷ್ಣ

Home/Birthday/ಡಾ. ಆರ್. ಗೋಪಾಲಕೃಷ್ಣ
Loading Events
This event has passed.

೦೪.೦೧.೧೯೫೭ ವೃತ್ತಿಯಲ್ಲಿ ಮನಃಶಾಸ್ತ್ರದ ಪ್ರವಾಚಕರಾದರೂ ಪ್ರವೃತ್ತಿಯಲ್ಲಿ ಸುಗಮ ಸಂಗೀತಗಾರರಾದ ಗೋಪಾಲಕೃಷ್ಣರವರು ಹುಟ್ಟಿದ್ದು ಬೆಂಗಳೂರು. ತಂದೆ ರಾಮಸ್ವಾಮಿ, ತಾಯಿ ಜಯಮ್ಮ. ವಿದ್ಯಾಭ್ಯಾಸ ಬೆಂಗಳೂರು. ಮನಃಶಾಸ್ತ್ರ ಹಾಗೂ ಸಂಗೀತಕ್ಕೆ ಇರುವ ಗಾಢವಾದ ಸಂಬಂಧದ ಬಗ್ಗೆ ಸಂಶೋಧನೆ ನಡೆಸಿ Personality Dimensions of Musicians and Non Musicians :A Comparative Study ಮಹಾಪ್ರಬಂಧ ಮಂಡಿಸಿ ಪಡೆದ ಪಿಎಚ್.ಡಿ. ಪದವಿ. ಸಂಗೀತದ ಬಗ್ಗೆ ಬಾಲ್ಯದಿಂದಲೂ ಬೆಳೆದುಬಂದ ಆಸಕ್ತಿ. ವಿದ್ವಾನ್ ಎ. ಸುಬ್ಬರಾವ್ ಹಾಗೂ ಸಂಗೀತ ವಿದುಷಿ ಶ್ರೀಮತಿ ಅಂಬಾ ವೆಂಕಟರಮಣಯ್ಯ ರವರಿಂದ ಒಂದುವರೆ ದಶಕಕ್ಕು ಮೀರಿದ ಕರ್ನಾಟಕ ಸಂಗೀತದ ಅಭ್ಯಾಸ. ಡಿ.ಬಿ. ಹರೀಂದ್ರರವರಲ್ಲಿ ಐದು ವರ್ಷ ಹಿಂದೂಸ್ತಾನಿ ಸಂಗೀತ ಕಲಿಕೆ. ಶಾಸ್ತ್ರೀಯ ಸಂಗೀತದ ಆಳವಾದ ಅಭ್ಯಾಸ ನಡೆಸಿದ್ದರೂ ಒಲಿದದ್ದು ಸುಗಮಸಂಗೀತದ ಕಡೆಗೆ. ೧೯೭೫ರಲ್ಲಿ ‘ಸಾರಿಣಿ ಕೃಷ್ಣ ಗಾನ ವೃಂದ’ದ ಹುಟ್ಟುಹಾಕಿ ಹಲವಾರು ಕಡೆ ನಡೆಸಿಕೊಟ್ಟ ಕಾರ್ಯಕ್ರಮಗಳು. ರವೀಂದ್ರ ಕಲಾಕ್ಷೇತ್ರ, ಭಾರತೀಯ ವಿದ್ಯಾಭವನ, ಶಿರಡಿ ಸಾಯಿ ಅಧ್ಯಾತ್ಮಿಕ ಕೇಂದ್ರ, ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನ, ಉಡುಪಿಯ ಕೃಷ್ಣಮಠ ಮುಂತಾದ ಪ್ರತಿಷ್ಠಿತ ವೇದಿಕೆಗಳಲ್ಲಿ ಗಾಯನ. ಆಕಾಶವಾಣಿ, ದೂರದರ್ಶನದಲ್ಲೂ ನೀಡಿದ ಕಾರ್ಯಕ್ರಮಗಳು, ಹಲವಾರು ಧ್ವನಿ ಸುರಳಿಗಳ ಬಿಡುಗಡೆ, ಉಡುಪಿಯ ಕೃಷ್ಣ ಮಂದಿರದ ಗರ್ಭಗುಡಿಯಲ್ಲಿ ಪಂ. ಭೀಮಸೇನ ಜೋಷಿಯವರ ನಂತರ ಸಂಗೀತ ಕಲಾಪ ನಡೆಸಿಕೊಟ್ಟ ಏಕೈಕ ಸುಗಮಸಂಗೀತ ಕಲಾವಿದ ಎಂಬ ಹೆಗ್ಗಳಿಕೆ. ಅಮೆರಿಕದ ವಾಷಿಂಗ್‌ಟನ್‌ನಲ್ಲಿ ನಡೆದ ಅಕ್ಕಾ ವಿಶ್ವ ಕನ್ನಡ ಸಮ್ಮೇಳನದಲ್ಲೂ ಪಾಲ್ಗೊಂಡು ನೀಡಿದ ಕಾರ್ಯಕ್ರಮ. ಇದೀಗ ಮನಃಶಾಸ್ತ್ರದ ಜೊತೆಗೆ ಸಂಗೀತ ಕ್ಷೇತ್ರದಲ್ಲೂ ಹಲವಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ನೀಡುತ್ತಿರುವ ಮಾರ್ಗದರ್ಶನ, ಸದ್ಯ ಬೆಂಗಳೂರು ವಿಶ್ವವಿದ್ಯಾಲಯದ ಮನಃಶಾಸ್ತ್ರ ವಿಭಾಗದಲ್ಲಿ ಪ್ರವಾಚಕರಾಗಿ ಸಲ್ಲಿಸುತ್ತಿರುವ ಸೇವೆ.   ಇದೇ ದಿನ ಹುಟ್ಟಿದ ಕಲಾವಿದರು : ವಿ.ಕೆ. ಧರ್ಮಾಧಿಕಾರಿ – ೧೯೧೮

* * *

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

ಕೇಂದ್ರ ಸರ್ಕಾರದ ಜಾಲತಾಣಗಳು

ತಾಂತ್ರಿಕ‌ ಜಾಲತಾಣಗಳು

ಕನ್ನಡ ಸಂಬಂಧಿ ಜಾಲತಾಣಗಳು

ಆಯೋಗಗಳು

ನ್ಯಾಯಾಲಯಗಳು

ಡೌನ್‌ಲೋಡ್‌ಗಳು

Go to Top