ಡಾ. ಎಂ.ಕೆ. ಜಯಶ್ರೀ ಪ್ರಸಾದ್

Home/Birthday/ಡಾ. ಎಂ.ಕೆ. ಜಯಶ್ರೀ ಪ್ರಸಾದ್
Loading Events

೨೯.೦೯.೧೯೪೯ ಜಯಶ್ರೀ ಪ್ರಸಾದ್‌ರವರು ಹುಟ್ಟಿದ್ದು ಮೈಸೂರಿನ ಪ್ರಖ್ಯಾತ ಸಂಗೀತಗಾರರ ಮನೆತನದಲ್ಲಿ. ತಂದೆ ಶ್ರೀನಿವಾಸ ಅಯ್ಯಂಗಾರ್, ತಾಯಿ ಪ್ರಖ್ಯಾತ ಪಿಟೀಲುವಾದಕಿ ಕಮಲಮ್ಮ. ವೀಣಾ ವಿದ್ವಾನ್‌ ಎಂ.ಜಿ. ಶ್ರೀನಿವಾಸ ಅಯ್ಯಂಗಾರ‍್ಯರಲ್ಲಿ ವೀಣೆಯ ಮೊದಲಪಾಠ. ನಂತರ ಸಹೋದರಿ ಸರಸ್ವತಿ, ಆರ್‌.ಕೆ. ಸೂರ್ಯನಾರಾಯಣ, ರಾಜಲಕ್ಷ್ಮೀ ತಿರುನಾರಾಯಣನ್‌ ಮತ್ತು ವಿ. ದೊರೆಸ್ವಾಮಿ ಅಯ್ಯಂಗಾರರಲ್ಲಿ ಮುಂದುವರೆದ ಶಿಕ್ಷಣ. ಬಿ ಎಸ್ಸಿ, ಬಿಎಡ್‌, ಎಂ.ಎ (ಮ್ಯೂಸಿಕ್) ಪದವಿ. ದೆಹಲಿಯ ಸಂಗೀತ ನಾಟಕ ಅಕಾಡೆಮಿ ಬೆಂಗಳೂರಿನ ಸೆಂಟ್ರಲ್‌ ಕಾಲೇಜು ಆಶ್ರಯದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಸಂಗೀತ ವಿಭಾಗದಲ್ಲಿ ಸಂಶೋಧನ ಸಹಾಯಕಿಯಾಗಿ ಹೊತ್ತ ಜವಾಬ್ದಾರಿ. “THE ROLE OF VEENA IN THE THEORY AND PRACTICE OF KARNATAKA MUSIC” ಮಹಾಪ್ರಬಂಧ ಮಂಡಿಸಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಡೆದ ಪಿಎಚ್‌..ಡಿ ಪದವಿ. ತಿರುಪತಿಯ ವಿಶ್ವವಿದ್ಯಾಲಯದಲ್ಲಿ  ಸಂಗೀತ ವಿಭಾಗದಲ್ಲಿ ಪ್ರೊಫೆಸರಾಗಿ ಕೆಲಕಾಲ ಸೇವೆ. ಬೆಂಗಳೂರು ರಾಮಸೇವಾ ಮಂಡಲಿ, ಮೈಸೂರು ಅರಮನೆ, ದಸರಾ ವಸ್ತುಪ್ರದರ್ಶನ, ತಾತಾ ವಿಜ್ಞಾನಮಂದಿರ, ಜಗನ್ಮೋಹನ ಅರಮನೆ ಅಲ್ಲದೆ ವಾಷಿಂಗ್‌ಟನ್‌ನ ಶಿವ, ವಿಷ್ಣುದೇವಾಲಯ, ಶಿಕಾಗೋ ಕನ್ನಡ ಕೂಟ, ಬಾಲ್‌ಸ್ಟೇಟ್‌ ಯೂನಿರ್ವಸಿಟಿ, ಬ್ಲೂಮಿಂಗ್‌ಟನ್‌, ಇಂಡಿಯಾನ ಮುಂತಾದೆಡೆ ನಡೆಸಿಕೊಟ್ಟ ವೀಣಾ ಕಚೇರಿಗಳು. ಆಕಾಶವಾಣಿ, ದೂರದರ್ಶನದಿಂದಲೂ ಕಾರ್ಯಕ್ರಮ ಪ್ರಸಾರ, ಸಂಗೀತದ ಬಗ್ಗೆ, ಬೆಡಗಿನ ವೀಣೆಯ ಬಗ್ಗೆ ಪತ್ರಿಕೆಗಳಿಗೆ ಬರೆದ ಅನೇಕ ಲೇಖನಗಳು. ಹಲವಾರು ಸಾಕ್ಷ್ಯಚಿತ್ರ, ದೂರದರ್ಶನ ಧಾರಾವಾಹಿ, ಟೆಲಿಫಿಲಮ್ಸ್‌ಗಳಿಗೆ ನೀಡಿದ ಸಂಗೀತ ನಿರ್ದೇಶನ. ಇದೀಗ ಅಮೆರಿಕಾ ಶಿಕಾಗೊ ಮತ್ತು ಬೆಂಗಳೂರಿನ ಪಲ್ಲವಿ ಸಂಗೀತ ವಿದ್ಯಾಲಯಗಳಲ್ಲಿ ಹಲವಾರು ಶಿಷ್ಯರಿಗೆ ನೀಡುತ್ತಿರುವ ಸಂಗೀತ ಶಿಕ್ಷಣ.   ಇದೇ ದಿನ ಹುಟ್ಟಿದ ಕಲಾವಿದರು ಬಾಲೇಖಾನ್ – ೧೯೪೨ ಶಶಿಧರ್‌ ಎಸ್.ಎ. – ೧೯೫೦ ಉಮಾನಾಗರಾಜ ರಾವ್ – ೧೯೬೧ ರೇಣುಕಾ ನಾಕೋಡ್ – ೧೯೬೨

* * *

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top