Loading Events

« All Events

  • This event has passed.

ಡಾ. ಎಂ. ಗೋಪಾಲಕೃಷ್ಣ

November 1, 2023

.೧೧.೧೯೦೮ ಗೋಪಾಲಕೃಷ್ಣರವರು ‘ಕಲಿಯುಗ’ ಪತ್ರಿಕೆಯು ಸ್ಥಾಪಕ ಸಂಪಾದಕರಾಗಿದ್ದು, ಈ ಪತ್ರಿಕೆಯು ೧೯೩೬ ರಿಂದ ಧಾರವಾಡದಲ್ಲಿ ಪ್ರಕಟಗೊಂಡು, ಧಾರವಾಡ ಹಾಗೂ ಮಂಗಳೂರಿನಲ್ಲಿ ಮಾರಾಟವಾಗುತ್ತಿದ್ದ ಪತ್ರಿಕೆ. ಪತ್ರಿಕೆಯ ಪ್ರಕಾಶನದ ಜವಾಬ್ದಾರಿಯನ್ನು ಶ್ರೀಕಾಂತ್‌ ಮತ್ತು ಕಂಪನಿಯವರು ಹೊತ್ತಿದ್ದಾರೆ. ಎನ್‌.ನಾರಾಯಣರಾಯರಿಂದ ಮುದ್ರಣ ಕಾರ್ಯವು ನಡೆಯುತ್ತಿದ್ದಿತು. ಈ ಪತ್ರಿಕೆಯ ಮುದ್ರಣಕ್ಕಾಗಿ ಕಾಗದವನ್ನು ಪೂರೈಸುತ್ತಿದ್ದವರು ‘ಸಮಾಜ ಪೇಪರ್‌ಮಾರ್ಟ್‌’ ಮೂಲಕ ಬಾಲಚಂದ್ರ ಘಾಣೇಕರ್‌ರವರು. (ಹೆಚ್ಚಿನ ಮಾಹಿತಿಗಾಗಿ ಬಾಲಚಂದ್ರ ಘಾಣೀಕರ್‌ನೋಡಿ). ಭಾಲಚಂದ್ರ ಘಾಣೀಕರ್ ರವರೂ ಕೂಡಾ ಲೇಖಕರಾಗಿ, ಪ್ರಕಾಶಕರಾಗಿ ಮತ್ತು ಮುದ್ರಕರಾಗಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದವರಲ್ಲೊಬ್ಬರು. ಇವರು ತಮ್ಮ ಪ್ರಕಟಣೆಯ ಪುಸ್ತಕಗಳ ಜೊತೆಗೆ ಗೋಪಾಲಕೃಷ್ಣರಾಯರ ‘ಪ್ರೇಮಕಲಾ’ ಎಂಬ ಲೈಂಗಿಕ ವಿಜ್ಞಾನ ಪುಸ್ತಕವನ್ನು ಪ್ರಕಟಿಸಿ ಮಾರಾಟ ಮಾಡತೊಡಗಿದರು. ಲೈಂಗಿಕ ವಿಜ್ಞಾನ ಪತ್ರಿಕೆಯ ಜಾಹೀರಾತನ್ನು ಇತರ ಪತ್ರಿಕೆಗಳಲ್ಲಿ ಪ್ರಚುರ ಪಡಿಸಿದ್ದರಿಂದ ವ್ಯಾಪಾರವು ಬಹು ಜೋರಾಗಿ ನಡೆದು ಮೊದಲ ಮುದ್ರಣದ ಪ್ರತಿಗಳು ಕೆಲವೇ ತಿಂಗಳಲ್ಲಿ ಖರ್ಚಾದವು. ನಂತರ ಎರಡನೆಯ ಮುದ್ರಣವನ್ನು ಹೊರತಂದರು. ಈ ಸಂದರ್ಭದಲ್ಲಿ ಇದು ಸರ್ಕಾರದ ಗಮನಕ್ಕೆ ಬಂದು ಇದೊಂದು ಅಶ್ಲೀಲ ಪುಸ್ತಕವೆಂದು ಪರಿಗಣಿಸಿ, ಪ್ರತಿಗಳನ್ನು ಜಪ್ತಿ ಮಾಡಿ ಡಾ. ಗೋಪಾಲಕೃಷ್ಣರಾಯರ ಮತ್ತು ಭಾಲಚಂದ್ರ ಘಾಣೀಕರರ ಮೇಲೆ ಮೊಕದ್ದಮೆ ಹೂಡಿದರು. ಮೊಕದ್ದಮೆಯು ವರ್ಷ ಪೂರ್ತಾ ನಡೆದು ಸಾವಿರಾರು ರೂಪಾಯಿಗೂ ಹೆಚ್ಚು ವೆಚ್ಚ ಮಾಡಬೇಕಾಗಿ ಬಂತು. ಆ ವರ್ಷ, ೧೯೩೯ ರಲ್ಲಿ ಬೆಳಗಾವಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಮುದವೀಡು ಕೃಷ್ಣರಾಯರು, ಶ್ರೀರಂಗರು, ಪ್ರೊ. ಮೊಳವಾಡರು, ಡಾ. ಕಾಂತಾರಾವ ಕಮಲಾಪುರ ಮೊದಲಾದವರು ನ್ಯಾಯಾಲಯಕ್ಕೆ ಬಂದು ಸಾಕ್ಷಿ ಹೇಳಿದರು. ಇದರಿಂದ ಮೊಕದ್ದಮೆಯು ಭಾಲಚಂದ್ರ ಘಾಣೀಕರ್ ಮತ್ತು ಡಾ. ಗೋಪಾಲಕೃಷ್ಣರ ಪರವಾಗಿಯೇ ತೀರ್ಪುಬಂತು. ಸರಕಾರವು ಮುಟ್ಟುಗೋಲು ಹಾಕಿಕೊಂಡಿದ್ದ ಪ್ರತಿಗಳನ್ನೆಲ್ಲಾ ಹಿಂದಿರುಗಿಸಿದ್ದರಿಂದ, ಅವುಗಳನ್ನು ಮಾರಿ ಕೋರ್ಟು ಖರ್ಚಿನ ಸಾಲ ತೀರಿಸಿಕೊಂಡರು. ನಂತರ ಭಾಲಚಂದ್ರ ಘಾಣೀಕರ್ ರವರು ಗೋಪಾಲಕೃಷ್ಣರಾಯರ ಮತ್ತೆರಡು ಪುಸ್ತಕಗಳನ್ನು ನಿರ್ಭಯವಾಗಿ ಪ್ರಕಟಿಸಿದರು.

Details

Date:
November 1, 2023
Event Category: