Loading Events

« All Events

  • This event has passed.

ಡಾ. ಎಚ್.ಎಸ್. ಗೋಪಾಲರಾವ್

November 18, 2023

೧೮-೧೧-೧೯೪೬ ಶಾಸನಶಾಸ್ತ್ರ, ಬೋಧಕ, ಸಾಹಿತಿ ಗೋಪಾಲರಾವ್ ಹುಟ್ಟಿದ್ದು ಬೆಂಗಳೂರಿನ ಉತ್ತರ ತಾಲ್ಲೂಕಿನ ಹುಲ್ಲೇಗೌಡನಹಳ್ಳಿ. ತಂದೆ ಎಚ್.ಎನ್. ಸೂರ್ಯನಾರಾಯಣರಾವ್, ತಾಯಿ ಮಹಾಲಕ್ಷ್ಮಮ್ಮ. ಪ್ರಾರಂಭಿಕ ಶಿಕ್ಷಣ ಶಿವಗಂಗೆ, ನೆಲಮಂಗಲ. ಡಿಪ್ಲೊಮ-ಬೆಂಗಳೂರಿನ ಎಸ್.ಜೆ. ಪಾಲಿಟೆಕ್ನಿಕ್. ಕನ್ನಡ ಸಾಹಿತ್ಯ ಪರಿಷತ್ತಿನಿಂದ ಶಾಸನ ಶಾಸ್ತ್ರ, ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಮತ್ತು “ಶಾಸನಗಳ ಹಿನ್ನೆಲೆಯಲ್ಲಿ ಕಲ್ಯಾಣ ಚಾಲುಕ್ಯ ದೇವಾಲಯಗಳು – ಒಂದು ಸಾಂಸ್ಕೃತಿಕ ಅಧ್ಯಯನ” ಮಹಾಪ್ರಬಂಧ ಮಂಡಿಸಿ ಚಿನ್ನದ ಪದಕಗಳೊಡನೆ ಪಡೆದ ಪಿಎಚ್.ಡಿ. ಪದವಿ. ಉದ್ಯೋಗಕ್ಕಾಗಿ ಸೇರಿದ್ದು ಮಹಾರಾಷ್ಟ್ರ ಸರಕಾರದ ವಿದ್ಯುಚ್ಛಕ್ತಿ ಇಲಾಖೆ ಮತ್ತು ಮನೆಪಾಠ ಹೇಳಲು ಸ್ಥಾಪಿಸಿದ ಸರಸ್ವತಿ ವಿದ್ಯಾಮಂದಿರದಲ್ಲಿ ಕೆಲಕಾಲ. ನಂತರ ಕರ್ನಾಟಕ ಸರಕಾರದ ವಿದ್ಯುತ್ ಪ್ರಸರಣ ನಿಗಮದಲ್ಲಿ ಸಹಾಯಕ ಕಾರ್ಯನಿರ್ವಾಹಕರಾಗಿ ಸೇರಿ, ಕನ್ನಡ ಘಟಕದ ಸಮನ್ವಯಾಕಾರಿಯಾಗಿಯೂ ಸಲ್ಲಿಸಿದ ಸೇವೆ. ಸಾಹಿತ್ಯ, ನಾಟಕಾಭಿನಯದತ್ತ ಮೂಡಿದ ಒಲವು. ರಚಿಸಿದ ಕೃತಿಗಳು ಹಲವಾರು. ಐತಿಹಾಸಿಕ ಕೃತಿ ರಚಿಸಲು ಕೈಗೊಂಡ ಇತಿಹಾಸದ ಅಧ್ಯಯನ. ಕಾದಂಬರಿಗಳು-ಜೇನು ನಂಜು, ಗತಿ, ಭಿನ್ನ, ಪರಿಗ್ರಹಣ ಇವು ಹಲವಾರು ಮುದ್ರಣ ಕಂಡ ಕಾದಂಬರಿಗಳು. ಮಕ್ಕಳ ನಾಟಕ-ಗುಲ್ಪುಟ್ಟಿ ಮುನ್ಪುಟ್ಟಿ ರಾಜ್ಯ ನಾಟಕ ರಚನಾ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿದ್ದಲ್ಲದೆ ಹಲವಾರು ಮುದ್ರಣ ಕಂಡು ತೆಲುಗಿಗೂ ಅನುವಾದ. ಇತಿಹಾಸ ಮತ್ತು ಇತರ-ನಮ್ಮ ನಾಡು ಕರ್ನಾಟಕ, ಬಾದಾಮಿ ಐಹೊಳೆ ಪಟ್ಟದಕಲ್ಲು, ಉಡುಪಿ, ಕರ್ನಾಟಕ ಏಕೀಕರಣ ಇತಿಹಾಸ, ಇತಿಹಾಸ ಅಧ್ಯಯನ ಅಂದು-ಇಂದು, ಗೋದಾವರಿಯ ಆಸುಪಾಸಿನಲ್ಲಿ, ಚಂಗಾಳ್ವರು, ರಾಶಿ, ಶಾಸನ ಸಂಕಲನ, ಭಾರತೀಯ ಬಹುಮುಖಿ ಸಂಸ್ಕೃತಿ, ಇತಿಹಾಸದ ಪರಾಮರ್ಶೆ, ಇದು ನಮ್ಮ ಕರ್ನಾಟಕ,  ಒಂದುಗೂಡಿದ ಕರ್ನಾಟಕ ಮುಂತಾದುವು. ಸಂಪಾದಿತ-ನಾಗಾಭಿನಂದನ, ನೆಲದ ಸಿರಿ, ಎಪಿಗ್ರಾಫಿಕಲ್ ಸ್ಟಡೀಸ್, ಕನಕ ಸಿರಿ, ತಮಿಳು ನಾಡಿನ ಕನ್ನಡ ಶಾಸನಗಳು. ಬರಲಿರುವ ಕೃತಿಗಳು-ಕರ್ನಾಟಕ ಏಕೀಕರಣಕ್ಕಾಗಿ ದುಡಿದ ಮಹನೀಯರು, ಎಪಿಗ್ರಾಫಿಯಾ ಕರ್ನಾಟಕ, ಕರ್ನಾಟಕ ದರ್ಶನ, ಕನ್ನಡ ಶಾಸನ ಪದಕೋಶ, ಕರ್ನಾಟಕ ಜನ ಇತಿಹಾಸ. ದೊರೆತ ಗೌರವ-ಹುದ್ದೆಗಳು: ಕರ್ನಾಟಕ ಇತಿಹಾಸ ಅಕಾಡಮಿಯ ಪ್ರಧಾನ ಕಾರ್ಯದರ್ಶಿಯಾಗಿ, ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಹದಿನೈದು ವರ್ಷಕ್ಕೂ ಹೆಚ್ಚು ಶಾಸನ ಶಾಸ್ತ್ರ ಬೋಧಕರಾಗಿ, ಪ್ರಸ್ತುತ ಕರ್ಮವೀರ ಪತ್ರಿಕೆಗೆ ‘ನಮ್ಮದಿದು ಇತಿಹಾಸ’ ಅಂಕಣಕಾರರಾಗಿ ಕಾರ್ಯನಿರ್ವಹಣೆ.   ಇದೇ ದಿನ ಹುಟ್ಟಿದ ಸಾಹಿತಿಗಳು : ಚಂಪಾವತಿ ಮಹಿಷಿ – ೧೯೨೨ ವಿಶಾಲಾಕ್ಷಿ ದಕ್ಷಿಣಾಮೂರ್ತಿ – ೧೯೩೬ ತುಳಸಿ ವೇಣುಗೋಪಾಲ್ – ೧೯೫೪

Details

Date:
November 18, 2023
Event Category: