Loading Events

« All Events

  • This event has passed.

ಡಾ.ಎಚ್‌. ಕೆ. ರಂಗನಾಥ್‌

August 8

೦೮.೦.೧೯೨೪ ೨೬..೨೦೦೩ ನಾಟಕಕಾರ, ರಂಗತಜ್ಞ, ನಟ, ಸಾಹಿತಿ , ಮಾಧ್ಯಮತಜ್ಞ ರಂಗನಾಥ್‌ರವರು ಹುಟ್ಟಿದ್ದು ಮೈಸೂರು. ತಂದೆ ಎಚ್‌ ಕೃಷ್ಣಸ್ವಾಮಿ, ತಾಯಿ ಚಿನ್ನಮ್ಮ. ಕಾಲೇಜಿನ ಸಾಂಸ್ಕೃತಿಕ ಕಾರ್ಯಕ್ರಮಗಳ ಮುಖಂಡತ್ವ. ವಿಶಿಷ್ಟ ಹಾಸ್ಯ ಪ್ರಜ್ಞೆಯ, ಎಲ್ಲರನ್ನೂ ನಕ್ಕು ನಗಿಸುವ ಮಾತು ಗಾರಿಕೆಯ ಸೊಗಸುಗಾರರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಕೆಲಕಾಲ. ಮೈಸೂರು ಆಕಾಶವಾಣಿಯ ಪಾರ್ಟ್‌ ಟೈಂ ಹುದ್ದೆಯಿಂದ ಆಕಾಶವಾಣಿ ಸಂಬಂಧ ಪ್ರಾರಂಭ, ಬೆಂಗಳೂರು, ಧಾರವಾಡದ ಆಕಾಶವಾಣಿ ಕೇಂದ್ರಗಳಲ್ಲಿ ಪ್ರೋಗ್ರಾಂ ನಿರ್ವಾಹಕರಾಗಿ, ನಾನಾ ಹುದ್ದೆಗಳಲ್ಲಿ ಸೇವೆ. ಆಕಾಶವಾಣಿಗಾಗಿ ರಚಿಸಿ, ನಿರೂಪಿಸಿ ನಿರ್ದೇಶಿಸಿ, ಪ್ರಸಾರಮಾಡಿದ ರೇಡಿಯೋ ರೂಪಕಗಳು, ನಾಟಕಗಳು ನೂರಾರು. ಬೆಂಗಳೂರು ವಿ.ವಿ.ದ. ನಾಟಕ, ಸಂಗೀತ ವಿಭಾಗದ ಪ್ರಾದೇಶಿಕ ನಿರ್ದೇಶಕರಾಗಿ, ಯು.ಜಿ.ಸಿ. ರಂಗತಜ್ಞರಾಗಿ,  ಭಾರತೀಯ ವಿದ್ಯಾಭವನದ ಗಾಂಧಿವಿಜ್ಞಾನ ಮತ್ತು ಮಾನವೀಯ ಮೌಲ್ಯ ಕೇಂದ್ರದ ನಿರ್ದೇಶಕರಾಗಿ ಸಲ್ಲಿಸಿದ ಸೇವೆ. ಯುನೆಸ್ಕೊ ಫೆಲೊಷಿಪ್‌ ಪಡೆದು ಏಷ್ಯಾ, ಆಫ್ರಿಕಾ ಅಮೆರಿಕಾ, ದೇಶಗಳಲ್ಲಿ ವಿಶೇಷ ಉಪನ್ಯಾಸ, ಕರ್ನಾಟಕ ಜಾನಪದ ಜಗತ್ತನ್ನು ವಿದೇಶಿಯರಿಗೆ ಪರಿಚಯಸಿದ ಕೀರ್ತಿ. ಕೇಂದ್ರ ಸಂಗೀತ ನಾಟಕ ಅಕಾಡಮಿಗಾಗಿ ಸಂಪಾದಿಸಿಕೊಟ್ಟ SILVER JUBILEE ಸಂಪುಟ, ಭಾರತೀಯ ನೃತ್ಯ ನಾಟಕಗಳಿಗೊಂದು ಆಕರ ಗ್ರಂಥ, ಕರ್ನಾಟಕ ನಾಟಕದ ಬಗ್ಗೆ ಕರ್ನಾಟಕ ರಂಗಭೂಮಿ (THE KARNATAKA THEATRE) ಅವರ ಸಂಶೋಧನಾ ಪ್ರೌಢ ಪ್ರಬಂಧಕ್ಕಾಗಿ ಡಾಕ್ಟರೇಟ್‌ಪದವಿ. ದುರಂತ ಮತ್ತು ಇತರ ನಾಟಕ, ಗರೂಡ ಸದಾಶಿವರಾಯರು, ಎ.ವಿ. ವರದಾಚಾರ್ಯರು, ನೆನೆದವರು ಮನದಲ್ಲಿ, ಜೇನಹನಿ (ವ್ಯಕ್ತಿಚಿತ್ರ); ನೆನಪಿನ ನಂದನ (ಆತ್ಮಕಥೆ), ವೈದ್ಯನಲ್ಲದ ಡಾಕ್ಟರು, ಕ್ಯಾಪಿಟಲ್‌ ಪನಿಷ್‌ಮೆಟ್‌ (ನಗೆಬರಹ) ಮುಂತಾದ ಕೃತಿಗಳು. ಇವರ ಬಗ್ಗೆ ನೆನಪಿಗೆ ಸಾವಿಲ್ಲ, ರಂಗನಾಥ ಸಾರಸ್ವತ ಸೇರಿ ಮೂವತ್ತು ಕೃತಿ ಪ್ರಕಟಿತ. ಕರ್ನಾಟಕ ನಾಟಕ ಅಕಾಡಮಿ ಫೆಲೋಷಿಪ್‌, ರಾಜ್ಯೋತ್ಸವ ಪ್ರಶಸ್ತಿ, ಮೋತಿಲಾಲ್‌ ವಜ್ರಮಹೋತ್ಸವ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪುರಸ್ಕೃತರು.   ಇದೇ ದಿನ ಹುಟ್ಟಿದ ಕಲಾವಿದರು: ನಾರಾಯಣದಾಸ್‌ ಬಿ.ಎಂ. – ೧೯೧೪ ಶ್ರೀನಿವಾಸಮೂರ್ತಿ ಎಂ.ಎಸ್‌. – ೧೯೩೧ ಬೇಲೂರು ಕೃಷ್ಣಮೂರ್ತಿ – ೧೯೩೨

* * *

Details

Date:
August 8
Event Category: