ಡಾ. ಎಸ್.ಆರ್. ಗುಂಜಾಳ

Home/Birthday/ಡಾ. ಎಸ್.ಆರ್. ಗುಂಜಾಳ
Loading Events
This event has passed.

೨೫-೬-೧೯೩೨ ಸಾಹಿತಿ, ಗ್ರಂಥಾಲಯ ವಿಜ್ಞಾನಿ ಗುಂಜಾಳರು ಹುಟ್ಟಿದ್ದು ಧಾರವಾಡ ಜಿಲ್ಲೆಯ ಕೋಳಿವಾಡದಲ್ಲಿ. ತಂದೆ ರಾಯಪ್ಪ ಗುಂಜಾಳ, ತಾಯಿ ರುದ್ರಮ್ಮ. ಧಾರವಾಡದ ಕಾಲೇಜಿನಿಂದ ಬಿ.ಎ., ಎಂ.ಎ. ಪದವಿ. “ಉತ್ತಂಗಿ ಚನ್ನಪ್ಪನವರ ಜೀವನ ಮತ್ತು ಕೃತಿಗಳು : ಒಂದು ಅಧ್ಯಯನ” ಪ್ರಬಂಧ ಮಂಡಿಸಿ ಬಂಗಾರದ ಪದಕದೊಡನೆ ಪಿಎಚ್.ಡಿ. ಪದವಿ. ಇವರ ಮಾರ್ಗದರ್ಶನದಲ್ಲಿ ೧೬ ವಿದ್ಯಾರ್ಥಿಗಳು ಪಡೆದ ಯಶಸ್ವಿ ಪಿಎಚ್.ಡಿ. ಪದವಿ. ಇವರ ಬಗ್ಗೆ “ಡಾ.ಎಸ್.ಆರ್.ಗುಂಜಾಳ ಜೀವನಸಾಧನೆ” ಮಹಾಪ್ರಬಂಧ ಮಂಡಿಸಿ ಶ್ರೀಶೈಲ ಪಾಟೀಲರು ಪಡೆದ ಪಿಎಚ್.ಡಿ. ಪದವಿ. ಹೈಸ್ಕೂಲಿನಲ್ಲಿ ಶಿಕ್ಷಕ ವೃತ್ತಿ ಆರಂಭ. ದಿಲ್ಲಿ ವಿಶ್ವವಿದ್ಯಾಲಯದಲ್ಲಿ ಗ್ರಂಥಾಲಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದು ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಗ್ರಂಥಪಾಲಕರಾಗಿ ನೇಮಕ. ೧೯೭೯ರಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಗ್ರಂಥಾಲಯ ವಿಭಾಗದ ಮುಖ್ಯಸ್ಥರ ಜವಾಬ್ದಾರಿ. ರಚಿಸಿದ ಗ್ರಂಥಗಳ ಹಲವಾರು. ಗ್ರಂಥಾಲಯಕ್ಕೆ ಸಂಬಂಸಿದಂತೆ-ಐವರು ಗ್ರಂಥಾಲಯ ವಿಜ್ಞಾನಿಗಳು, ಗ್ರಂಥಾಲಯು ವಿಜ್ಞಾನ ದರ್ಶನ, ಕರ್ನಾಟಕದಲ್ಲಿ ಗ್ರಂಥಾಲಯಗಳು, ಗ್ರಂಥಾಲಯ ದಿಗ್ಗಜರು, ಗ್ರಂಥಾಲಯ ವಿಜ್ಞಾನದ ಪಂಚಸೂತ್ರಗಳು, ಗ್ರಂಥಾಲಯದ ಅಂತರಂಗ, ಇಂಗ್ಲಿಷ್‌ನ ೩ ಕೃತಿ ಸೇರಿ ೧೬ ಕೃತಿಗಳು. ಕಾಯಕಯೋಗಿ ಬಸವನಾಳ ಶಿವಲಿಂಗಪ್ಪನವರು, ಬಿ.ಡಿ. ಜತ್ತಿ ಬಾಳು-ಬದುಕು, ಎಚ್.ಎಫ್. ಕಟ್ಟೀಮನಿಯವರು, ಉತ್ತಂಗಿ ಚನ್ನಪ್ಪ, ಯಗಟಿ ವೀರಪ್ಪ ಮೊದಲಾದುವು. ಧಾರ್ಮಿಕ ಗ್ರಂಥಗಳು-ಅನುಭಾವಿಯ ಆತ್ಮಕಥನ, ಬಸವ ಚಿಂತನ, ಮಹಾಕವಿದ್ವಯರು, ವಚನಕಾರರು ಮತ್ತು ವಚನಾಂಕಿತರು, ಸುಖೀಜೀವನದ ಸೂತ್ರಗಳು, ಹಲವು ಸಂಪಾದಿತ, ಅನುವಾದಿತ ಮರಾಠಿ, ಇಂಗ್ಲಿಷ್ ಕೃತಿಗಳೂ ಸೇರಿ ೭೫ಕ್ಕೂ ಹೆಚ್ಚು ಕೃತಿ ಪ್ರಕಟಿತ. ಸಂದ ಪ್ರಶಸ್ತಿ ಗೌರವಗಳು-ಕರ್ನಾಟಕ ಸಾಹಿತ್ಯ ಅಕಾಡಮಿ ಬಹುಮಾನ, ದೇವರಾಜ ಬಹದ್ದೂರ್ ಪ್ರಶಸ್ತಿ, ತಪಶೆಟ್ಟಿ ಬಹುಮಾನ, ಶರಣ ಸಾಹಿತ್ಯ ಪ್ರಶಸ್ತಿ, ಸಾಹಿತ್ಯ ಶ್ರೀ ಪ್ರಶಸ್ತಿ, ಸೇವಾರತ್ನ ಪ್ರಶಸ್ತಿ, ಶಿಕ್ಷಣ ಸಿರಿ ಪ್ರಶಸ್ತಿ ಮುಂತಾದುವು. ೧೯೯೨ರಲ್ಲಿ ಹಿತೈಷಿಗಳು ಅರ್ಪಿಸಿದ್ದು “ಡಾ. ಎಸ್.ಆರ್. ಗುಂಜಾಳ ಅಭಿನಂದನ ಗ್ರಂಥ.”   ಇದೇ ದಿನ ಹುಟ್ಟಿದ ಸಾಹಿತಿಗಳು : ಇಂದಿರಾ ಶಿವಣ್ಣ – ೧೯೪೯ ಶಕುಂತಳಾ ಭಟ್ – ೧೯೪೯ ಗೋಪಾಲ ಕೃಷ್ಣ ಐತಾಳ್ – ೧೯೫೧ ಆನಂದ ಝಂಜರವಾಡ – ೧೯೫೨

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top