ಡಾ. ಎ.ಎಸ್. ಧರಣೇಂದ್ರಯ್ಯ

Home/Birthday/ಡಾ. ಎ.ಎಸ್. ಧರಣೇಂದ್ರಯ್ಯ
Loading Events
This event has passed.

೧೪-೬-೧೯೩೩ ೮-೪-೨೦೦೦ ಮನೋವಿಜ್ಞಾನ ಪ್ರಾಧ್ಯಾಪಕರಾಗಿದ್ದ ಧರಣೇಂದ್ರಯ್ಯ ನವರು ಹುಟ್ಟಿದ್ದು ಹಾಸನ ಜಿಲ್ಲೆಯ ಅಡುಗೂರು. ತಂದೆ ಸಿಂದಪ್ಪಶೆಟ್ಟರು, ತಾಯಿ ಪದ್ಮಾವತಮ್ಮ. ಪ್ರಾಥಮಿಕ ವಿದ್ಯಾಭ್ಯಾಸ ಅಡುಗೂರು, ಹಾಸನದಲ್ಲಿ ಪ್ರೌಢಶಾಲೆ ಮುಗಿಸಿ ಕಾಲೇಜಿಗೆ ಸೇರಿದ್ದು ಮೈಸೂರು ವಿಶ್ವವಿದ್ಯಾಲಯ. ಬಿ.ಎ. (ಆನರ್ಸ್) ಎಂ.ಎ. ಮತ್ತು “A STUDY OF  OCCUPATIONAL INTEREST PATTERNS OF SCIENTISTS” ಮಹಾ ಪ್ರಬಂಧ ಮಂಡಿಸಿ ಪಡೆದ ಪಿಎಚ್.ಡಿ. ಪದವಿ. ಪದವಿಯ ನಂತರ ಉದ್ಯೋಗಕ್ಕೆ ಸೇರಿದ್ದು ಬನುಮಯ್ಯ ಕಾಲೇಜು ಮೈಸೂರು. ನಂತರ ತಿಪಟೂರು ಕಾಲೇಜು, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಕಾಲೇಜುಗಳಲ್ಲಿ ಅಧ್ಯಾಪನ. ಮನೋವಿಜ್ಞಾನ ಅಧ್ಯಾಪಕರಾಗಿ, ರೀಡರಾಗಿ, ಪ್ರಾಧ್ಯಾಪಕರಾಗಿ, ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ನಿವೃತ್ತಿ. ಸಾಹಿತ್ಯ, ಜೈನ ಸಿದ್ಧಾಂತಗಳಲ್ಲಿ ಸಮಾನ ಪ್ರಭುತ್ವ-ಪಾಂಡಿತ್ಯ. ಮನೋ ವಿಜ್ಞಾನವನ್ನು ಜೈನದರ್ಶನದ ಹಿನ್ನೆಲೆಯಲ್ಲಿ ಮಾಡುತ್ತಿದ್ದ ತುಲನಾತ್ಮಕ ವಿವರಣೆ. ಭಾಗವಹಿಸಿದ ಸಭೆ ಸಮಾರಂಭಗಳು ಹಲವಾರು. ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಗೋಷ್ಠಿ, ಅಖಿಲ ಭಾರತ ಮನೋವಿಜ್ಞಾನ ಸಮ್ಮೇಳನ, ಯು.ಜಿ.ಸಿ. ಸೆಮಿನಾರು, ಕನ್ನಡ ಸಾಹಿತ್ಯ ಪರಿಷತ್ತಿನ ಜಾನಪದೀಯ ಸಮ್ಮೇಳನ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಸಮ್ಮೇಳನಗಳು, ಹಲವಾರು ಮನೋವಿಜ್ಞಾನ ಕಮ್ಮಟ, ಸಮ್ಮೇಳನಗಳಲ್ಲಿ ಭಾಷಣ, ಪ್ರಬಂಧ ಮಂಡನೆ. ಮೈಸೂರಿನಲ್ಲಿದ್ದಾಗಲೇ ಮಕ್ಕಳಿಗಾಗಿ ಪ್ರಾರಂಭಿಸಿದ್ದು ‘ರತ್ನತ್ರಯಸಂಘ’ ಮಕ್ಕಳಲ್ಲಿ ಜೈನಧರ‍್ಮದ ಅರಿವು ಮೂಡಿಸಲು ಜೈನತತ್ತ್ವ, ಸಂಸ್ಕೃತಿ, ಪ್ರಚಾರ ಕಾರ್ಯ. ನಂತರ ಧಾರವಾಡದಲ್ಲೂ ಮುಂದುವರಿಕೆ. ಬರೆದ ಲೇಖನಗಳು ಹಲವಾರು ಪತ್ರಿಕೆಗಳಲ್ಲಿ ಪ್ರಕಟಿತ. ರೇಡಿಯೋದಿಂದ ಪ್ರಸಾರ. ಹಲವಾರು ಕೃತಿರಚನೆ-ಮನೋವಿಜ್ಞಾನಕ್ಕೆ ಸಂಬಂಸಿದಂತೆ, ಮನೋವಿಶ್ಲೇಷಣೆ ನಡೆದು ಬಂದ ದಾರಿ, ವಿಕಾಸ ಮನೋವಿಜ್ಞಾನ, ಸಾಮಾನ್ಯ ಮನೋವಿಜ್ಞಾನ, ಮಾನಸಿಕ ಆರೋಗ್ಯ, ವ್ಯಕ್ತಿತ್ವ, ಮಾನವ ಮತ್ತು ಶಾಖಾಹಾರ, ಅಭಿರುಚಿಗಳು, ನೆನಪು ಮತ್ತು ಮರೆವು, ಪ್ರತಿಭಾವಂತ ಮಕ್ಕಳಿಗೆ ಮಾರ್ಗದರ್ಶನ, ಮನೋವಿಜ್ಞಾನಕ್ಕೆ ಸಂಬಂಸಿದಂತೆ ಪಾರಿಭಾಷಿಕ ಪದಗಳಿಗೆ ಕನ್ನಡ, ಇಂಗ್ಲಿಷ್, ಹಿಂದಿ ಪದಗಳನ್ನು ಸೂಚಿಸಿ ರಚಿಸಿದ “ಮನೋವೈಜ್ಞಾನಿಕ ಪಾರಿಭಾಷಿಕ ಕೋಶ” ಅಮೂಲ್ಯ ಗ್ರಂಥ. ಜೈನಮತ ತತ್ತ್ವಗಳಿಗೆ ಸಂಬಂಸಿದಂತೆ ಜೈನ ಮನೋವಿಜ್ಞಾನ, ರತ್ನಾಕರ ಕವಿಯ ಅಪರಾಜಿತೇಶ್ವರ ಶತಕ (ಭಾವಾರ್ಥ ಸಹಿತ) ಜೈನಧರ್ಮ ಮತ್ತು ಸಾಮಾಜಿಕ ಐಕ್ಯಮತ್ಯ, ಸಪ್ತತತ್ತ್ವಗಳು, ಅಹಿಂಸಾಧರ್ಮ ಮುಂತಾದುವು. ಮುನಿ ನಾಥಮಲ್‌ಜಿಯವರ ‘ಮಚ್ ಇನ್ ಲಿಟ್ಲ್’ ಗ್ರಂಥಾನುವಾದ ‘ಬಿಂದುವಿನಲ್ಲಿ ಸಿಂಧು’ ಮನೋವಿಜ್ಞಾನ ಕೃತಿಗೆ ಮೈಸೂರು ವಿಶ್ವವಿದ್ಯಾಲಯದ ಬಹುಮಾನವನ್ನೊಳಗೊಂಡಂತೆ ಇವರ ಕೃತಿಗಳಿಗೆ ಸಂದ ಹಲವಾರು ಬಹುಮಾನಗಳು.   ಇದೇ ದಿನ ಹುಟ್ಟಿದ ಸಾಹಿತಿಗಳು : ವಿಜಯಶ್ರೀ – ೧೯೫೪ ಬಸವರಾಜಪ್ಪ. ಎಸ್ – ೧೯೬೪

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top