ಡಾ. ಕೆ. ಅನಂತರಾಮು

Home/Birthday/ಡಾ. ಕೆ. ಅನಂತರಾಮು
Loading Events

೨೫-೧೦-೧೯೪೩ ಲೇಖಕ, ಪ್ರಕಾಶಕರಾದ ಅನಂತರಾಮುರವರು ಹುಟ್ಟಿದ್ದು ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಗಾವಡಗೆರೆ. ತಂದೆ ಎನ್.ಎಸ್. ಕೃಷ್ಣಪ್ಪ, ತಾಯಿ ಸುಬ್ಬಲಕ್ಷ್ಮಮ್ಮ. ಪ್ರಾರಂಭಿಕ ಶಿಕ್ಷಣ ಗಾವಡಗೆರೆ, ಕೆ.ಆರ್.ನಗರ. ಮೈಸೂರಿನ ಸಿಪಿಸಿ ಪಾಲಿಟೆಕ್ನಿಕ್‌ನಿಂದ ಆಟೋಮೊಬೈಲ್ ಎಂಜನಿಯರಿಂಗ್ ಡಿಪ್ಲೊಮ. ಉದ್ಯೋಗಕ್ಕಾಗಿ ಆಂಧ್ರಪ್ರದೇಶದ ರೋಡ್ ಟ್ರಾನ್ಸ್‌ಪೋರ್ಟ್ ಕಾರ್ಪೋರೇಷನ್ನಿನಲ್ಲಿ ಮೂರು ವರ್ಷದ ಅಪ್ರೆಂಟಿಸ್ ಆಗಿ ಕಲಿಕೆ. ನಂತರ ಶಿಕ್ಷಣ ಮುಗಿಸಿ ಅನಂತಪುರಂ ಡಿಪೋವಿನಲ್ಲಿ ಛಾರ್ಜ್‌ಮನ್ ಆಗಿ ನೇಮಕ. ಯಂತ್ರಗಳೊಡನೆ ಒಡನಾಟ ಬಯಸದ ಮನಸು. ಉಸ್ಮಾನಿಯಾ ವಿಶ್ವವಿದ್ಯಾಲಯದ ವಿವೇಕರ್ವನಿ ಸಂಜೆ ಕಾಲೇಜಿನಲ್ಲಿ ಪಿ.ಯು. ಪರೀಕ್ಷೆಯಲ್ಲಿ ದ್ವಿತೀಯ ರ್ಯಾಂಕ್. ಜೊತೆಗೆ ನಾಲ್ಕು ಹಿಂದಿ ಪರೀಕ್ಷೆಗಳಲ್ಲಿ ತೇರ್ಗಡೆ. ಹೈದರಾಬಾದಿನ ಹಿಂದಿ ಮಹಾವಿದ್ಯಾಲಯದಿಂದ ವಿಶಾರದ ಮತ್ತು ಪ್ರವೀಣ ಪರೀಕ್ಷೆಗಳಲ್ಲಿ ಪ್ರಥಮದರ್ಜೆ. ಅಧ್ಯಾಪಕರಾಗಬೇಕೆಂಬ ಹಂಬಲದಿಂದ ಮೈಸೂರಿನತ್ತ ಪಯಣ. ಸೇರಿದ್ದು ಮಹಾರಾಜಾ ಕಾಲೇಜು. ೧೯೬೮ರಲ್ಲಿ ಮೊದಲ ರ್ಯಾಂಕ್ ಪಡೆದು ಬಿ.ಎ. ಪದವಿ. ೧೯೭೦ರಲ್ಲಿ ಎಂ.ಎ. ಪ್ರಥಮ ರ್ಯಾಂಕ್. ಮಹಾರಾಜಾ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಬೋಧನಾವೃತ್ತಿ ಆರಂಭ. ಅಧ್ಯಾಪನ, ಅಧ್ಯಯನಗಳೆರಡರಲ್ಲೂ ನಿರತರು. ಭಾಷಾವಿಜ್ಞಾನ ಮತ್ತು ಹಿಂದಿ ವಿಭಾಗಗಳಲ್ಲಿ ಪಡೆದ ಎಂ.ಎ. ಪದವಿ. ‘ಕವಿ ಬ್ರಹ್ಮಶಿವ’ ಮಹಾಪ್ರಬಂಧ ಮಂಡಿಸಿ ಮೈಸೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ. ಹಲವಾರು ಕೃತಿರಚನೆ. ದೇವ ಬಿನ್ನಪ (೨೧೨ ಸ್ವತಂತ್ರ ವಚನಗಳು). ಉದಯ ರವಿ ನಾಡಿನಲ್ಲಿ (ಜಪಾನ್ ಪ್ರವಾಸ ಕಥನ). ಸಕ್ಕರೆಯ ಸೀಮೆ (ಮಂಡ್ಯ ಜಿಲ್ಲೆಯ ಪ್ರವಾಸಕಥನ). ದಕ್ಷಿಣದ ಸಿರಿನಾಡು (ಸಮಗ್ರ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ ಕಥನ). ಕವಿಬ್ರಹ್ಮಶಿವ (ಪಿಎಚ್.ಡಿ. ಮಹಾಪ್ರಬಂಧ). ದಕ್ಷಿಣದ ಸಿರಿನಾಡು-ಇದೊಂದು ೧೨೦೦ ಪುಗಳ ಬೃಹತ್‌ಕೋಶ-ಅಪೂರ್ವ ಅನ್ವೇಷಣಾ ಸಾಹಸಗಾಥೆಯ ಆಕರಗ್ರಂಥ. ದೇವರದಾಸಿಮಯ್ಯ-ಕಿರು ಹೊತ್ತಗೆ. ಹಲವಾರು ಪುಸ್ತಕಗಳ ಪ್ರಕಾಶನ. ಉದಯರವಿ ನಾಡಿನಲ್ಲಿ, ಸಕ್ಕರೆಯ ಸೀಮೆ, ದಕ್ಷಿಣದ ಸಿರಿನಾಡು ಈ ಮೂರು ಕೃತಿಗಳಿಗೂ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಅತ್ತಿಮಬ್ಬೆ ಲೇಖಕಿಯ ಪರಿಷತ್ತಿನ ‘ರನ್ನ ಸಾಹಿತ್ಯ ಪ್ರಶಸ್ತಿ’ ಮುಂತಾದ ಪ್ರಶಸ್ತಿ ಪುರಸ್ಕಾರಗಳು.   ಇದೇ ದಿನ ಹುಟ್ಟಿದ ಸಾಹಿತಿಗಳು : ಡಿ.ಎಂ. ನಂಜುಂಡಪ್ಪ – ೧೯೩೦ ಭಾಷ್ಯಂ ತನುಜೆ – ೧೯೪೯ ಎನ್.ಬಿ. ಪರಿಮಳಾಬಾಯಿ – ೧೯೫೦ ಹಿ.ಚಿ. ಬೋರಲಿಂಗಯ್ಯ – ೧೯೫೫

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top