Loading Events

« All Events

  • This event has passed.

ಡಾ. ಕೆ.ಜಿ. ಶಾಸ್ತ್ರಿ

October 17, 2023

೧೭-೧೦-೧೯೩೨ ಹಿರಿಯಭಾಷಾ ವಿಜ್ಞಾನಿ, ಘನ ವಿದ್ವಾಂಸರು, ವಿಮರ್ಶಕರೂ ಆದ ಶಾಸ್ತ್ರಿಗಳು ಹುಟ್ಟಿದ್ದು  ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ. ತಂದೆ ಗಣೇಶ ಶಾಸ್ತ್ರಿಗಳು, ತಾಯಿ ಮೀನಾಕ್ಷಿ. ಪ್ರಾರಂಭಿಕ ಶಿಕ್ಷಣ ಕುಮಟಾದಲ್ಲಿ. ಮುಂಬೈ ವಿಶ್ವವಿದ್ಯಾಲಯದಿಂದ ಬಿ.ಎ, ಎಂ.ಎ. ಪದವಿ. “THE HAVYAKA DIALECT OF NORTH CANARA” ಮಹಾಪ್ರಬಂಧ ಮಂಡಿಸಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಪಡೆದ ಪಿಎಚ್.ಡಿ. ಪದವಿ. ಉದ್ಯೋಗಕ್ಕಾಗಿ ಸೇರಿದ್ದು ಬೋಧನಾ ವೃತ್ತಿ. ಕುಮಟಾದ ಕೆನರಾ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ಕನ್ನಡ ವಿಭಾಗದ ಮುಖ್ಯಸ್ಥರಾಗಿ, ರಾಣಿಬೆನ್ನೂರಿನ ಆರ್.ಟಿ.ಇ. ಕಾಲೇಜಿನಲ್ಲಿ ಪ್ರಥಮ ಪ್ರಾಚಾರ‍್ಯರು, ಕನ್ನಡ ವಿಭಾಗದ ಮುಖ್ಯಸ್ಥರೂ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ, ಕಾಲೇಜು ಆಡಳಿತ ಮಂಡಲಿ, ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿ. ಅಕಾಡಮಿ ಕೌನ್ಸಿಲ್ ಸದಸ್ಯರಾಗಿ ವಿವಿಧೆಡೆ ಸೇವೆ ಸಲ್ಲಿಸಿ ೧೯೮೩ರಲ್ಲಿ ನಿವೃತ್ತಿ. ಗ್ರಂಥ ಸಂಪಾದನೆ, ಸಂಶೋಧನೆ, ಐವರು ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ. ಹಲವಾರು ಸಾಂಸ್ಕೃತಿಕ ಕಾರ‍್ಯಕ್ರಮಗಳಲ್ಲಿ ಭಾಗಿ. ಸಂಘ ಸಂಸ್ಥೆಗಳೊಡನೆ ನಿಕಟ ಸಂಬಂಧ. ಹಲವಾರು ಕಡೆ ವಿಶೇಷ ಉಪನ್ಯಾಸ. ಕರ್ನಾಟಕ ವಿಶ್ವವಿದ್ಯಾಲಯ, ರಾಜ್ಯ ಸಂಗೀತ ನಾಟಕ ಅಕಾಡಮಿ, ವಿದ್ಯಾವರ್ಧಕ ಸಂಘ, ಅಂಬಿಕಾತನಯದತ್ತ ವೇದಿಕೆ, ಅಮೆರಿಕದ ನ್ಯೂಯಾರ್ಕ್ ಕನ್ನಡ ಕೂಟದಲ್ಲಿ ‘ಪಂಪನಲ್ಲಿ ತಲೆಮಾರಿನ ಅಂತರ’ ಮತ್ತು ಮೌಂಟ ಲಾರೆಲ್ ತ್ರಿವೇಣಿ ಕನ್ನಡ ಕೂಟದಲ್ಲಿ ‘ಕುಮಾರವ್ಯಾಸ ಮತ್ತು ಶೇಕ್ಸ್‌ಪಿಯರ್’ ಬಗ್ಗೆ ಮತ್ತು ಆಕಾಶವಾಣಿಯಲ್ಲಿ ವಿಶೇಷ ಉಪನ್ಯಾಸಗಳು. ಹಲವಾರು ಸಂಶೋಧನ ಪ್ರಬಂಧಗಳ ಮಂಡನೆ. ಭಾಷಾವಿಜ್ಞಾನ, ಜಾನಪದ ವಿಷಯಗಳಿಗೆ ಸಂಬಂಸಿದ ಲೇಖನಗಳು ಹಲವಾರು ಪತ್ರಿಕೆಗಳಲ್ಲಿ ಪ್ರಕಟಿತ. ರಚಿಸಿದ ಗ್ರಂಥಗಳು-ಸಂಶೋಧನಾ ಪ್ರಬಂಧ, ಪೌಲೋಮ-ಆಸ್ತಿಕ ಪರ್ವಗಳು, ಐರಾವತ ನೋಂಪಿ, ಕರ್ನಾಟಕ ಸಾಂಸ್ಕೃತಿಕ ಪರಂಪರೆ, ಶ್ರೀ ಕೃಷ್ಣಾವತಾರ, ಜನಪದ ಸಾಹಿತ್ಯ ಮುಂತಾದುವು. ಕಾರವಾರದ ಯಕ್ಷಗಾನ ಗೋಷ್ಠಿ ಉದ್ಘಾಟಕರಾಗಿ, ತ್ರಿವೆಂಡ್ರಮ್ ವಿಚಾರ ಸಂಕಿರಣ, ಕರ್ನಾಟಕ ಜಾನಪದ ಸಮ್ಮೇಳನ, ೫೫ನೇ ಕನ್ನಡ ಸಾಹಿತ್ಯ ಸಮ್ಮೇಳನದ ಭಾಷಾ ಬಾಂಧವ್ಯ ಗೋಷ್ಠಿ, ಗಮಕ ಕಲಾ ಪರಿಷತ್ತಿನ ಪ್ರಥಮ ಗಮಕವಾಚನ ಗೋಷ್ಠಿ ಮುಂತಾದುವುಗಳ ಅಧ್ಯಕ್ಷತೆ. ಧಾರವಾಡ ಜಿಲ್ಲಾ ಪರಿಷತ್ತು, ಫಿಲಾಸಫಿ ಅಂಡ್ ರಿಲಿಜನ್ ಅಕಾಡಮಿ ಬೆಳಗಾಂ, ರಾಜ್ಯ ಸಾಹಿತ್ಯ ಅಕಾಡಮಿ ಮುಂತಾದುವುಗಳಿಂದ ಸಂದ ಗೌರವಗಳು. ೧೯೯೩ರಲ್ಲಿ ಅಭಿಮಾನಿಗಳು ಅರ್ಪಿಸಿದ ಗೌರವ ಗ್ರಂಥ ‘ಭಾಷೋಪಾಸಕ.’   ಇದೇ ದಿನ ಹುಟ್ಟಿದ ಸಾಹಿತಿಗಳು : ಎಂ.ಎನ್. ಸರೋಜಮ್ಮ – ೧೯೨೬ ಎಚ್.ಬಿ. ಚಂಪಕಮಾಲಾ – ೧೯೩೨ ರಾಜೀವ ತಾರಾನಾಥ್ – ೧೯೩೨ ಶಾಂತಾ ಸನ್ಮತಿಕುಮಾರ್ – ೧೯೪೧

Details

Date:
October 17, 2023
Event Category: