ಡಾ.ಕೆ. ವೆಂಕಟಲಕ್ಷ್ಮಮ್ಮ

Home/Birthday/ಡಾ.ಕೆ. ವೆಂಕಟಲಕ್ಷ್ಮಮ್ಮ
Loading Events

೨೯..೧೯೦೬ ..೨೦೦೨ ಮೈಸೂರು ಶೈಲಿಯ ಭರತನಾಟ್ಯದ ಪ್ರವರ್ತಕರಲ್ಲೊಬ್ಬರಾದ ವೆಂಕಟಲಕ್ಷ್ಮಮ್ಮನವರು ಹುಟ್ಟಿದ್ದು ಕಡೂರಿನ ತಂಗಲ ತಾಂಡ್ಯದಲ್ಲಿ. ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡದ್ದರಿಂದ ಅಜ್ಜ ರಾಮನಾಯಕ ಮತ್ತು ಅಜ್ಜಿಯ ಪೋಷಣೆ. ಸಂಸ್ಕೃತ ಉಪಾಧ್ಯಾಯರಾದ ಅನಂತ ಜೋಶಿಯವರ ಸಲಹೆಯಂತೆ ವಿದ್ಯಾಭ್ಯಾಸಕ್ಕೆ ಕರೆತಂದುದು ಮೈಸೂರಿಗೆ. ಎಂಟನೆಯ ತರಗತಿಯ ವರೆಗೆ ಓದು. ಒಂಬತ್ತನೆಯ ವಯಸ್ಸಿನಲ್ಲಿಯೇ ಮೈಸೂರಿನ ನಾಟ್ಯ ಸರಸ್ವತಿ ಎನಿಸಿದ್ದ ಜಟ್ಟಿ ತಾಯಮ್ಮ ನವರ ಬಳಿ ಭರತನಾಟ್ಯ ತರಬೇತಿ. ಬಿಡಾರಂ ಕೃಷ್ಣಪ್ಪ, ಅವರ ಶಿಷ್ಯರಾದ ಬಿ. ದೇವೇಂದ್ರಪ್ಪನವರಿಂದ ಕಲಿತದ್ದು ಶಾಸ್ತ್ರೀಯ ಸಂಗೀತ. ೧೮೧೧ ರಿಂದ ೧೮೬೯ರವರೆಗೆ ಆಳಿದ ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಮೈಸೂರಿನ ’ಶೈಲಿ’ ಎಂದು ಬಂದ ಪ್ರಖ್ಯಾತಿ. ನಟುವಾಂಗ ವಾದ್ಯ ಪ್ರದಕ್ಷಿಣೆ, ಸಭಾಪೂಜೆ, ಪ್ರಭು ಪ್ರಶಂಸೆ, ನಂತರ ಕಲಾವಿದೆಯಿಂದ ಪುಷ್ಪಾಂಜಲಿ, ಹಯಗ್ರೀವ ಸ್ತುತಿ, ಸ್ವರಜತಿ, ವರ್ಣ, ಶಬ್ದ, ತಿಲ್ಲಾನಗಳ ಬಳಿಕ ಶ್ಲೋಕ, ಪಂಚಕ, ಪದ, ಜಾವಳಿ ಪ್ರದರ್ಶನದ ಮೈಸೂರು ಶೈಲಿ ಅಳವಡಿಕೆ. ರಸಾಭಿನಯವೇ ಮೈಸೂರು ಶೈಲಿಯ ಹೆಗ್ಗಳಿಕೆ. ಕನ್ನಡ ಜಾವಳಿಗಳಿಗೆ ವೆಂಕಟಲಕ್ಷ್ಮಮ್ಮನವರು ಅಭಿನಯಿಸುತ್ತಿದ್ದ ರೀತಿ ಚಿರಸ್ಮರಣೀಯ. ನಾಲ್ವಡಿ ಕೃಷ್ಣರಾಜ ಒಡೆಯರಕಾಲದಲ್ಲಿ ಆಸ್ಥಾನ ವಿದುಷಿಯಾಗಿ (೧೯೩೯) ನೇಮಕ. ೩೦ ವರ್ಷ ಆಸ್ಥಾನ ನರ್ತಕಿಯಾಗಿ ಸಲ್ಲಿಸಿದ ಕೀರ್ತಿ. ಅರಮನೆಯ ಚಾಮುಂಡೇಶ್ವರಿ ಉತ್ಸವ, ನವರಾತ್ರಿಯ ಹತ್ತುದಿವಸ ಮತ್ತು ಮಹಾರಾಜರ ವರ್ಧಂತಿ ಉತ್ಸವಗಳಲ್ಲಿ ನಡೆಸುತ್ತಿದ್ದ ನೃತ್ಯ ಸೇವೆ. ಮೈಸೂರು ವಿಶ್ವವಿದ್ಯಾಲಯದ ಲಲಿತ ಕಲಾ ಕಾಲೇಜಿನ ನೃತ್ಯ ವಿಭಾಗಕ್ಕೆ ರೀಡರ್‌ ಆಗಿ ನೇಮಕ. ತಾವೇ ಸ್ಥಾಪಿಸಿದ ಭರತ ಕಲಾ ನಿಕೇತನ ಸಂಸ್ಥೆಯಲ್ಲೂ ಶಿಷ್ಯರಿಗೆ ನೀಡಿದ ಶಿಕ್ಷಣ. ಅಮೇರಿಕದ ವಿಶ್ವವಿದ್ಯಾಲಯದಿಂದ ವಿದ್ಯಾರ್ಥಿಗಳ ತಂಡವೊಂದು ಬಂದು ಪಡೆದ ತರಬೇತಿ. ೭೦-೮೦ರ ವಯಸ್ಸಿನಲ್ಲಿಯೂ ವೇದಿಕೆಯಲ್ಲಿ ಕುಳಿತೇ ಹಿನ್ನೆಲೆಗಾಯನಕ್ಕೆ ತಕ್ಕಂತೆ ನಡೆಸಿಕೊಡುತ್ತಿದ್ದ ರಸಾಭಿನಯ ದೃಶ್ಯ. ಸಂದಗೌರವ ಪ್ರಶಸ್ತಿಗಳು ಹಲವಾರು. ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ (ನೃತ್ಯ ಸಾಧನೆಗಾಗಿ ಡಾಕ್ಟರೇಟ್‌ ಗಳಿಸಿದ ಏಕೈಕ ಮಹಿಳೆ ಎಂಬ ಹೆಗ್ಗಳಿಕೆ), ರಾಷ್ಟ್ರದ ಪ್ರತಿಷ್ಠಿತ ಪದ್ಮ ಭೂಷಣ, ಕರ್ನಾಟಕ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಗಾಯನ ಸಮಾಜದ ಸಮ್ಮೇಳನದ ಅಧ್ಯಕ್ಷತೆ, ಸಂಗೀತ ಕಲಾ ರತ್ನ ಬಿರುದು, ವಾರ್ತಾ ಮತ್ತು ಪ್ರಸಾರ ಇಲಾಖೆ ಮತ್ತು ಸಂಗೀತ ನೃತ್ಯ ಅಕಾಡೆಮಿಗಳು ಇವರ ಬಗ್ಗೆ ನಿರ್ಮಿಸಿದ ಸಾಕ್ಷ್ಯಚಿತ್ರಗಳು.   ಇದೇ ದಿನ ಹುಟ್ಟಿದ ಕಲಾವಿದರು ದೊಡ್ಡಮನಿ. ಎಂ.ಜಿ. – ೧೯೬೮ ರೂಪ. ಸಿ. – ೧೯೭೩

* * *

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top