Loading Events

« All Events

  • This event has passed.

ಡಾ. ಗಿರಡ್ಡಿ ಗೋವಿಂದರಾಜ

September 22, 2023

೨೨-೯-೧೯೩೯ ಕನ್ನಡದ ಶ್ರೇಷ್ಠ ವಿಮರ್ಶಕರಾದ ಗಿರಡ್ಡಿ ಗೋವಿಂದರಾಜರವರು ಹುಟ್ಟಿದ್ದು ಧಾರವಾಡ ಜಿಲ್ಲೆಯ ರೋಣ ತಾಲ್ಲೂಕಿನ ಅಬ್ಬಿಗೇರಿ. ತಂದೆ ಅಂದಾನಪ್ಪ, ತಾಯಿ ಸಂಗಮ್ಮ. ಪ್ರಾರಂಭಿಕ ಶಿಕ್ಷಣ ಅಬ್ಬಿಗೇರಿ, ನರೇಗಲ್ಲ, ರೋಣಗಳಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಿಂದ ಬಿ.ಎ. ಕರ್ನಾಟಕ ವಿಶ್ವವಿದ್ಯಾಲಯದಿಂದ ೧೯೬೩ರಲ್ಲಿ ಎಂ.ಎ. (ಇಂಗ್ಲಿಷ್) ಪದವಿ. ಮತ್ತು ಎಂ.ಎ. (ಕನ್ನಡ) ಪದವಿ. ಇಂಗ್ಲೆಂಡಿನಲ್ಲಿ ಕಲಿತದ್ದು ಭಾಷಾಶಾಸ್ತ್ರದಲ್ಲಿ ಎಂ.ಎ. ಪದವಿ, ಹೈದರಾಬಾದ್ ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಇಂಗ್ಲಿಷ್‌ನಲ್ಲಿ ‘ಡಿಪ್ಲೊಮ ಇನ್ ಇಂಗ್ಲಿಷ್ ಸ್ಟಡೀಸ್’ ಪ್ರಥಮ ರ‍್ಯಾಂಕ್. ಗುಲಬರ್ಗಾ ವಿಶ್ವವಿದ್ಯಾಲಯದಿಂದ ‘FREE INDIRECT SPEECH IN ENGLISH FICTIONS’ (ಶೈಲಿ ಶಾಸ್ತ್ರಕ್ಕೆ ಸಂಬಂಸಿದ್ದು) ಮಹಾಪ್ರಬಂಧ ಮಂಡಿಸಿ ಪಿಎಚ್.ಡಿ. ಪದವಿ. ಹನುಮನ ಹಟ್ಟಿಯ ಮಹಾವಿದ್ಯಾಲಯದಲ್ಲಿ ಅಧ್ಯಾಪಕ ವೃತ್ತಿ ಆರಂಭ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಅಧ್ಯಾಪಕರಾಗಿ, ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ ೧೯೯೬ರಲ್ಲಿ ನಿವೃತ್ತಿ. ಪ್ರೌಢಶಾಲೆಯಲ್ಲಿದ್ದಾಗಲೇ ಸಾಹಿತ್ಯದತ್ತ ಒಲವು. ‘ಶಾರದಾ ಲಹರಿ’ ನೀಳ್ಗವಿತೆ ರಚನೆ. ೧೯೫೬ರಲ್ಲಿ ಪ್ರಕಟಿತ. ಕಾಲೇಜು ವಿದ್ಯಾರ್ಥಿಯಾಗಿದ್ದಾಗಲೇ ಪ್ರಕಟಿಸಿದ ಕವನ ಸಂಕಲನ. ‘ರಸವಂತಿ’, ಗೆಳೆಯರಾದ ಚಂಪಾ, ಸಿದ್ಧಲಿಂಗ ಪಟ್ಟಣಶೆಟ್ಟಿ  ಜೊತೆಗೂಡಿ ‘ಸಂಕ್ರಮಣ’ ದ್ವೈಮಾಸಿಕ ಪತ್ರಿಕೆ ಹೊರತಂದಾಗ ವಿಮರ್ಶೆ ಬರೆಯಬೇಕಾದ ಪರಿಸ್ಥಿತಿ. ಮುಂದೆ ವಿಮರ್ಶಾ ಕ್ಷೇತ್ರದಲ್ಲಿ ಪಡೆದ ಸ್ಥಾನ. ‘ರಂಗ ಮಾಧ್ಯಮ’ ನಾಟಕ ಸಂಸ್ಥೆಯ ಸ್ಥಾಪನೆ. ಅಭಿನಯ, ನಟನೆ, ನಿರ್ದೇಶನದಲ್ಲಿ ಪಡೆದ ಖ್ಯಾತಿ. ಪ್ರಕಟಿತ ಕೃತಿಗಳು. ಕಾವ್ಯ-ಶಾರದಾ ಲಹರಿ, ರಸವಂತಿ, ಮರ್ಲಿನ್ ಮನ್ರೋ. ಕಥಾಸಂಕಲನ-ಆ ಮುಖ ಈ ಮುಖ, ಹಂಗು ಮತ್ತು ಇತರ ಕಥೆಗಳು, (ಹಂಗು ಕಥೆ ಪುಟ್ಟಣ್ಣ ಕಣಗಾಲರ ನಿರ್ದೇಶನದ ಕಥಾಸಂಗಮದ ಚಲನಚಿತ್ರದಲ್ಲಿ ಚಿತ್ರಿತವಾದ ಕಥೆ), ಒಂದು ಬೇವಿನ ಮರದ ಕಥೆ. ವಿಮರ್ಶೆ-ಸಣ್ಣ ಕಥೆಯ ಹೊಸ ಒಲವುಗಳು, ಜನಪದ ಕಾವ್ಯ, ನವ್ಯ ವಿಮರ್ಶೆ. ಕಾದಂಬರಿ-ವಸ್ತು ಮತ್ತು ತಂತ್ರ, ಸಾಹಿತ್ಯ ಮತ್ತು ಪರಂಪರೆ ಇಂಗ್ಲೆಂಡಿನ ರಂಗಭೂಮಿ, ನಾಟಕ ಸಾಹಿತ್ಯ ಮತ್ತು ರಂಗಭೂಮಿ, ಸಾತತ್ಯ, AN INTRODUCTION TO GENERAL LINGUISTICS. ಸಾಮಾಜಿಕ ಭಾಷಾಶಾಸ್ತ್ರ-ಕನ್ನಡ ಡೈಗ್ಲಾಸಿಯಾ, ವಚನಗಳ ರಾಚನಿಕ ವಿನ್ಯಾಸ ಮುಂತಾದ ಕೃತಿಗಳು. ಪ್ರಶಸ್ತಿಗಳು-ಕರ್ನಾಟಕ ಸಾಹಿತ್ಯ ಅಕಾಡಮಿ ಬಹುಮಾನ, ವಿ.ಎಂ. ಇನಾಂದಾರ್ ವಿಮರ್ಶಾ ಪ್ರಶಸ್ತಿ. ಸ.ಸ. ಮಾಳವಾಡ ಪ್ರಶಸ್ತಿ, ರಾಜ್ಯ ನಾಟಕ ಅಕಾಡಮಿ ಫೆಲೋಷಿಪ್, ರಾಜ್ಯ ಸಾಹಿತ್ಯ ಅಕಾಡಮಿ ಅಧ್ಯಕ್ಷ ಪದವಿ, ರಾಜ್ಯೋತ್ಸವ ಪ್ರಶಸ್ತಿ, ಗದಗ ಜಿಲ್ಲಾ ಪ್ರಥಮ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಮುಂತಾದುವು. ಅಭಿಮಾನಿಗಳು ಅರ್ಪಿಸಿದ ಗೌರವ ಗ್ರಂಥ ‘ತಲಸ್ಪರ್ಶಿ.’   ಇದೇ ದಿನ ಹುಟ್ಟಿದ ಸಾಹಿತಿಗಳು : ಪ್ರೇಮಾಭಟ್ – ೧೯೪೧ ಟಿ.ಎಲ್. ದೇವರಾಜು -೧೯೩೮ ಓ.ಎಲ್. ನಾಗಭೂಷಣಸ್ವಾಮಿ – ೧೯೫೩ ಚಿನ್ನಾಸ್ವಾಮಿ ಮೂಡ್ನಾಕೂಡು – ೧೯೫೪

Details

Date:
September 22, 2023
Event Category: