ಡಾ. ಚಂದ್ರಶೇಖರ ಕಂಬಾರ

Home/Birthday/ಡಾ. ಚಂದ್ರಶೇಖರ ಕಂಬಾರ
Loading Events
This event has passed.

೦೨-೦೧-೧೯೩೭ ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಘೋಡಗೇರಿ ಗ್ರಾಮ. ತಂದೆ ಬಸವಣ್ಣೆಪ್ಪ, ತಾಯಿ ಚೆನ್ನವ್ವ. ವಿದ್ಯಾಭ್ಯಾಸ ಗೋಕಾಕ, ಬೆಳಗಾವಿ, ಧಾರವಾಡಗಳಲ್ಲಿ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ೧೯೬೮ರಿಂದ ೧೯೭೧ರವರೆಗೆ ಅಮೆರಿಕಾದ ಚಿಕಾಗೋ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕ ವೃತ್ತಿ. ನಂತರ ೧೯೭೧ರಿಂದ ೧೯೯೧ರವರೆಗೆ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಅಧ್ಯಾಪಕ. ಕವಿ, ನಾಟಕಕಾರ, ಕಾದಂಬರಿಕಾರ, ಜಾನಪದ ತಜ್ಞರಾಗಿ ಹಲವಾರು ಕೃತಿ ರಚನೆ. ಅಣ್ಣತಂಗಿ, ಕರಿಮಾಯಿ, ಸಿಂಗಾರವ್ವ ಮತ್ತು ಅರಮನೆ, ಜಿ.ಕೆ. ಮಾಸ್ತರ ಪ್ರಣಯ ಪ್ರಸಂಗ-ಕಾದಂಬರಿಗಳು; ಬೆಂಬತ್ತಿದ ಕಣ್ಣು, ಚಾಳೇಶ, ನಾರ್ಸಿಸಿಸ್, ಋಷ್ಯಶೃಂಗ, ಜೋಕುಮಾರ ಸ್ವಾಮಿ, ಸಂಗ್ಯಾಬಾಳ್ಯಾ, ಅನಬೇಕೊ ನಾಡೊಳಗ, ಜೈಸಿದನಾಯಕ, ಕಾಡುಕುದುರೆ, ನಾಯಿಕತೆ-ನಾಟಕಗಳು; ಮುಗುಳು, ಇದುವರೆಗೆ ಹೇಳತೇನ ಕೇಳ, ಸಾವಿರದ ನೆರಳು-ಕವನ ಸಂಕಲನಗಳು ಪ್ರಕಟ. ನಿರ್ವಹಿಸಿದ ಕಾರ್ಯಕ್ಷೇತ್ರಗಳು-ರಾಷ್ಟ್ರೀಯ ನಾಟಕ ಶಾಲೆ, ಕರ್ನಾಟಕ ಸಾಹಿತ್ಯ ಅಕಾಡಮಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡಮಿ ಅಧ್ಯಕ್ಷರಾಗಿ, ಹಂಪಿ ವಿಶ್ವವಿದ್ಯಾಲಯದ ಪ್ರಥಮ ಕುಲಪತಿಯಾಗಿ, ವಿಧಾನಪರಿಷತ್ತಿನ ಸದಸ್ಯರಾಗಿ ಕಾರ್ಯ ನಿರ್ವಹಣೆ. ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆಗಾಗಿ ಸುರಿಮಳೆಯಾದ ಪ್ರಮುಖ ಪ್ರಶಸ್ತಿಗಳು. ವರ್ಧಮಾನ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕೆ.ವಿ. ಶಂಕರಗೌಡ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ, ರಾಜ್ಯ ಜಾನಪದ ಯಕ್ಷಗಾನ ಅಕಾಡಮಿ ಪ್ರಶಸ್ತಿ, ಕಬೀರ ಸಮ್ಮಾನ್ ಪ್ರಶಸ್ತಿ, ಪಂಪ ಪ್ರಶಸ್ತಿ, ಹಂಪಿ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ, ಹೊರ ರಾಜ್ಯವಾದ ಕೋಲ್ಕತಾದ ನಂದಿಕಾರ ಪ್ರಶಸ್ತಿ, ಕೇರಳದ ಕುಮಾರನ್ ಆಶಾನ್ ಪ್ರಶಸ್ತಿ, ಕಮಲಾದೇವಿ ಚಟ್ಟೋಪಾಧ್ಯಾಯ ಪ್ರಶಸ್ತಿ, ಆಂಧ್ರದ ಜಾಷುವಾ ಪ್ರಶಸ್ತಿ ಮತ್ತು ಜ್ಞಾನಪೀಠ ಪ್ರಶಸ್ತಿ ದೊರೆತಿವೆ. ಅರ್ಪಿಸಿದ ಅಭಿನಂದ ಗ್ರಂಥ – ‘ಸಿರಿಸಂಪಿಗೆ’ ಮತ್ತು ಶಿವಪುರ ಕಂಬಾರ ನಮಸ್ಕಾರ.   ಇದೇ ದಿನ ಹುಟ್ಟಿದ ಸಾಹಿತಿಗಳು : ಲಕ್ಷ್ಮೀ ನಾರಾಯಣ ಹೆಗಡೆ – ೧೯೨೩ ಮಣೂರು ನರಸಿಂಹ ಮಧ್ಯಸ್ಥ – ೧೯೫೪ ಎಚ್.ಸಿ. ಕಡ್ಕೆ – ೧೯೫೪ ಲಕ್ಷ್ಮೀಪತಿ ಕೋಲಾರ – ೧೯೫೯

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top